Asianet Suvarna News Asianet Suvarna News

Viral Video: ಕಾರು- ಬೈಕು ಅಲ್ಲ, ವಿಮಾನವನ್ನೇ ತಳ್ಳಿ ಪಕ್ಕಕ್ಕಿರಿಸಿದ ಪ್ರಯಾಣಿಕರು: ವಿಡಿಯೋ ವೈರಲ್!

*ಪ್ರಯಾಣಿಕರು ವಿಮಾನವನ್ನೇ ತಳ್ಳಿದ ವಿಡಿಯೋ ವೈರಲ್!‌
*ನೇಪಾಳದ ಬಾಜುರಾ ವಿಮಾನ ನಿಲ್ದಾಣದಲ್ಲಿ  ಘಟನೆ
*ತಾರಾ ಏರ್‌ಲೈನ್ಸ್‌ ವಿಮಾನ : 50 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು 

Viral video Passengers push airplane off runway after tyre burst at Nepal airport mnj
Author
Bengaluru, First Published Dec 3, 2021, 1:27 PM IST
  • Facebook
  • Twitter
  • Whatsapp

ನೇಪಾಳ(ಡಿ. 03): ಸಹಜವಾಗಿ ಬೈಕ್‌, ಕಾರ್‌ ಅಥವಾ ಯಾವುದೇ ವಾಹನ (Vehicle) ಸ್ಟಾರ್ಟ್‌ ಆಗದಿದ್ದಾಗ ಅಥವಾ ಟೈಯರ್ ಪಂಚರ್‌ ಅದಾಗ ಜನರು ಅದನ್ನು ತಳ್ಳಿ ಮುಂದೆ ಸಾಗಿಸಲು ಪ್ರಯತ್ನಿಸುತ್ತಾರೆ. ಆದರೆ ಟೈಯರ್ ಒಡೆದು ರನ್‌ವೇ‌ (Run Way) ಮೇಲೆ  ನಿಂತಿದ್ದ ವಿಮಾನವನ್ನೆ (Airplane) ರನ್‌ವೇಯಿಂದ ದೂರ ತಳ್ಳಲು ಪ್ರಯಾಣಿಕರ ಗುಂಪೊಂದು ಹರಸಾಹಸ ಪಡುತ್ತಿರುವ ವಿಡಿಯೋ (Viral Video) ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ನೇಪಾಳದ (Nepal) ವಿಮಾನ ನಿಲ್ದಾಣದಲ್ಲಿ ನಡೆದಿರುವ ಘಟನೆ ಜನರಲ್ಲಿ ಅಚ್ಚರಿ ಮೂಡಿಸಿದೆ. ಈ ಕ್ಲಿಪ್ ಅನ್ನು ಸಾಮ್ರಾಟ್ ಎಂಬುವವರು ಟ್ವಿಟರ್‌ನಲ್ಲಿ (Twitter) ಹಂಚಿಕೊಂಡಿದ್ದಾರೆ. ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಜನರು ವಿಮಾನವನ್ನೆ ತಳ್ಳುತ್ತಿರುವುದು ಅಪಹಾಸ್ಯ ಮಾಡಿದ್ದಾರೆ.

ತಾರಾ ಏರ್‌ಲೈನ್ಸ್‌ಗೆ (Tara Airlines) ಸೇರಿದ ವಿಮಾನ ವೀಡಿಯೊದಲ್ಲಿದೆ. ಪ್ರಯಾಣಿಕರು ವಿಮಾನವನ್ನು ರನ್‌ವೇಯಿಂದ  ದೂರ ತಳ್ಳಲು ಪ್ರಯತ್ನಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.  ಡ್ರೈವಿಂಗ್ ಸಮಯದಲ್ಲಿ ಟೈರ್ ಒಡೆದರೆ ಸಾಮಾನ್ಯವಾಗಿ ಹೆದ್ದಾರಿಗಳಲ್ಲಿ ವಾಹನದಿಂದ ಇಳಿದು ಗಾಡಿ ತಳ್ಳುವುದು ಕಂಡುಬರುತ್ತದೆ. ಆದರೆ ರನ್‌ವೇಯಲ್ಲಿ ಕಟ್ಟ ನಿಂತ  ವಿಮಾನವನ್ನು ಜನರು ಕೈಯಿಂದ ತಳ್ಳುತ್ತಿರುವುದು ಆಶ್ಚರ್ಯವೇ  ಸರಿ.

 

 

ಬಾಜುರಾ ವಿಮಾನ ನಿಲ್ದಾಣದಲ್ಲಿ ಘಟನೆ

ವಿಮಾನದ ಹಿಂಭಾಗದ ಟೈರ್ ರನ್‌ವೇಯಲ್ಲಿ ಬ್ಲಾಸ್ಟ್‌ ಆಗಿತ್ತು. ಆದ್ದರಿಂದ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ ಹಾಗೂ  ಲ್ಯಾಂಡಿಂಗ್ ಸ್ಟ್ರಿಪ್‌ನಿಂದ ವಿಮಾನವನ್ನು ತಳ್ಳಲು ಪ್ರಯತ್ನಿಸಲಾಗಿದೆ ಎಂದು ನೇಪಾಳದ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ನೇಪಾಳದ ಬಾಜುರಾ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. 

Viral video: ಇದಪ್ಪಾ ಊಟ ಅಂದ್ರೆ... ಹಾಲ್‌ಗೆ ಬೆಂಕಿ ಬಿದ್ರು ಮದ್ವೆ ಊಟ ಬಿಡದ ಜನ

50 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಹಲವಾರು ಪ್ರತಿಕ್ರಿಯೆಗಳೊಂದಿಗೆ ವೀಡಿಯೊ ವೈರಲ್ ಆಗಿದೆ. ಕೆಲವು ನೆಟ್ಟಿಗರು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿದರೆ, ಇತರರು ವಿಮಾನವನ್ನು ಹಾರಿಸುವ ಮೊದಲು ಅಧಿಕಾರಿಗಳು ಹೇಗೆ  ಕೂಲಂಕಷವಾಗಿ ಪರಿಶೀಲಿಸಬೇಕು ಎಂಬುದನ್ನು ಪ್ರತಿಕ್ರಿಯಿಸಿದ್ದಾರೆ.

ರೊಟ್ಟಿ ಮಾಡುತ್ತಿರುವ ಪಾಕ್‌ ಬಾಲಕಿಯ ವಿಡಿಯೋ ವೈರಲ್‌!

ಬಾಲಕಿಯೊಬ್ಬಳು ಆಲೂಗಡ್ಡೆಯನ್ನು ಕತ್ತರಿಸುತ್ತಿರುವ ಸಾಮಾನ್ಯವಾದ ವಿಡಿಯೋ ಇದಾಗಿದ್ದು, ಇದನ್ನು ಲಕ್ಷಾಂತರ ಮಂದಿ ವೀಕ್ಷಿಸುವ ಮೂಲಕ ವಿಡಿಯೋವನ್ನು ವೈರಲ್‌ ಮಾಡಿದ್ದಾರೆ. ಹಸಿರು ಕಂದು ಬಣ್ಣದ ಕಣ್ಣುಗಳನ್ನು ಹೊಂದಿರುವ ಬಾಲಕಿಯ ವಿಡಿಯೋ ಇದಾಗಿದ್ದು, ಅಂತಹ ವಿಶೇಷತೆಯೇನೋ ಈ ವಿಡಿಯೋದಲ್ಲಿ ಇಲ್ಲ. ಅದಾಗ್ಯೂ ಈ ವಿಡಿಯೋವನ್ನು ಲಕ್ಷಾಂತರ ಜನ ನೋಡಿದ್ದು ಅಚ್ಚರಿ ಎನಿಸಿದೆ. ಪಾಕಿಸ್ತಾನ(Pakistan)ದ ಅಮಿನಾ ರಿಯಾಜ್‌(Aamina Reyaz) ಹೆಸರಿನ 15 ವರ್ಷದ ಬಾಲಕಿ ಈಕೆ. ಕೆಲವು ತಿಂಗಳ ಹಿಂದೆ ಈಕೆ ರೊಟ್ಟಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗಿತ್ತು. ಈಗ ಮತ್ತೆ ಆಕೆ ಅಲೂಗಡ್ಡೆ ಕತ್ತರಿಸುತ್ತಿರುವ ವಿಡಿಯೋ ಕೂಡ ಸಾಕಷ್ಟು ವೈರಲ್‌ ಆಗಿದೆ. 

ಮದುವೆ ಡ್ರೆಸ್ ಬೇಡ್ವಂತೆ, ನೈಟ್ ಡ್ರೆಸ್ ಸಾಕಪ್ಪಾ ಅಂತಿದ್ದಾಳೆ ಈ ವಧು

ಅಮಿನಾ ರಿಯಾಜ್‌ ಕರಾಚಿ(Karachi) ನಗರದ ಹೊರವಲಯದ ಸಿಂಧ್‌ ಪ್ರಾಂತ್ಯದಲ್ಲಿ ವಾಸ ಮಾಡುತ್ತಿದ್ದು, ಅಲೆಮಾರಿ(nomads) ಸಮುದಾಯದ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅದಾಗ್ಯೂ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದು ಅಮಿನಾ ಅಲ್ಲ, ಆಕೆಯ ನೆರೆ ಮನೆಯಲ್ಲಿ ವಾಸಿಸುವ ತರುಣನೋರ್ವ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾನೆ. ಈ ಬಾಲಕಿಯ ಆಕರ್ಷಣೀಯವಾದ ಕಿರುನಗೆ ಹಾಗೂ ಸುಂದರವಾದ ಕಣ್ಣುಗಳು  ಈಗ ಸೋಶಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ. ಇತ್ತೀಚಿನ ವಿಡಿಯೋದಲ್ಲಿ ಆಕೆ ಅಲೂಗಡ್ಡೆ ಕತ್ತರಿಸುತ್ತಿದ್ದಾಳೆ. ಇನ್ಸ್ಟಾಗ್ರಾಮ್‌ನಲ್ಲಿ ಇಕಿಯಾ5(Ekiya5) ಹೆಸರಿನಲ್ಲಿರುವ ಖಾತೆಯಿಂದ ಸೆಪ್ಟೆಂಬರ್‌ 10ರಂದು ಈ ವಿಡಿಯೋ ಪೋಸ್ಟ್‌ ಆಗಿದೆ. ಬಹು ಬಣ್ಣದ ಸಂಯೋಜನೆಯನ್ನು ಒಳಗೊಂಡಿರುವ ಸಲ್ವಾರ್ ಧಿರಿಸಿನಲ್ಲಿ ಈಕೆ ಕಂಗೊಳಿಸುತ್ತಿದ್ದಾಳೆ. 

 

 
 
 
 
 
 
 
 
 
 
 
 
 
 
 

A post shared by @aamu_5

 

Follow Us:
Download App:
  • android
  • ios