ಅಮೆರಿಕದ ವೈಟ್ಹೌಸ್ನಲ್ಲಿ ಮಂತ್ರಘೋಷ ವೀಡಿಯೋ ವೈರಲ್: ಏನಿದರ ಅಸಲಿಯತ್ತು?
ಅಮೆರಿಕದ ಶ್ವೇತಭವನದಲ್ಲಿ ರುದ್ರಾಭಿಷೇಕ ನಡೆಸಲಾಗಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮಂತ್ರ ಘೋಷದ ವಿಡಿಯೋವನ್ನು ಹಲವು ಜನರು ಹಂಚಿಕೊಂಡಿದ್ದು, ಸನಾತನ ಧರ್ಮವನ್ನು ವಿಶ್ವವೇ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.

ಅಮೆರಿಕದ ಶ್ವೇತಭವನದಲ್ಲಿ ರುದ್ರಾಭಿಷೇಕ ನಡೆಸಲಾಗಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮಂತ್ರ ಘೋಷದ ವಿಡಿಯೋವನ್ನು ಹಲವು ಜನರು ಹಂಚಿಕೊಂಡಿದ್ದು, ಸನಾತನ ಧರ್ಮವನ್ನು ವಿಶ್ವವೇ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ. ಹತ್ತಾರು ವಿದೇಶಿ ಪ್ರಜೆಗಳು ಕುಳಿತು ವೇದ ಮಂತ್ರಗಳನ್ನು ಪಠಣ ಮಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಗೌರವ ಸಿಕ್ಕಿದೆ. ಅಮೆರಿಕನ್ನರು ಸಹ ಸ್ಪಷ್ಟವಾಗಿ ಮಂತ್ರೋಚ್ಚಾರಣೆ ಮಾಡುತ್ತಿದ್ದಾರೆ ಎಂದು ಹಲವರು ಈ ವಿಡಿಯೋವನ್ನು ಹಂಚಿಕೊಂಡಿದ್ದರು.
ಆದರೆ ಈ ವಿಡಿಯೋದಲ್ಲಿರುವ ಕೀ ವರ್ಡ್‌ಗಳನ್ನು ಬಳಸಿ ಹುಡುಕಿದಾಗ ಇದು 2018ರಲ್ಲಿ ತೆಗೆಯಲಾದ ವಿಡಿಯೋ ಹಾಗೂ ಇದಕ್ಕೂ ಶ್ವೇತಭವನಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಬೆಳಕಿಗೆ ಬಂದಿದೆ. ಯೂರೋಪಿಯನ್ ವೇದ ಅಸೋಸಿಯೇಷನ್ ಎಂಬ ಸಂಸ್ಥೆ 2018ರ ಮಾ.3-4ರಂದು ಕ್ರೋವೇಷಿಯಾದಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಇದರಲ್ಲಿ 400ಕ್ಕೂ ಹೆಚ್ಚು ಯೂರೋಪಿಯನ್ನರು ರುದ್ರಾಭಿಷೇಕ ಮಂತ್ರ, ಚಮಕ ಮಂತ್ರವನ್ನು ಪಠಣ ಮಾಡಿದ್ದರು. ಈ ವಿಡಿಯೋವನ್ನೇ ಶ್ವೇತಭವನದಲ್ಲಿ ನಡೆದ ರುದ್ರಾಭಿಷೇಕ ಎಂಬ ಹೆಸರಿನಲ್ಲಿ ಹಂಚಲಾಗುತ್ತಿದೆ. ಹಾಗಾಗಿ ಶ್ವೇತಭವನದಲ್ಲಿ ಮಂತ್ರಘೋಷ ನಡೆದಿದೆ ಎಂಬುದು ಸುಳ್ಳುಸುದ್ದಿಯಾಗಿದೆ.
ಸನಾತನ ಧರ್ಮಕ್ಕೆ ಅವಮಾನ, ಕ್ಯಾಬಿನೆಟ್ ಮಂತ್ರಿಗಳಿಗೆ ಬಿಗ್ ಟಾಸ್ಕ್ ನೀಡಿದ ಪ್ರಧಾನಿ ಮೋದಿ!
ಡಿಎಂಕೆಗೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಿಂದೂ ಧರ್ಮವೇ ಬೇಕಾ?