ಮದುವೆಗೆ ತಂದ ಕೇಕ್‌ ಬೀಳಿಸಿದ ಹೋಟೆಲ್ ಸಿಬ್ಬಂದಿ ಶಾಕ್‌ ಆದ ನವ ವಿವಾಹಿತ ಜೋಡಿ  

ನವದೆಹಲಿ(ಡಿ.7): ಅಲ್ಲಿ ಮದುವೆಯ ಸಮಾರಂಭ ಆಯೋಜಿಸಲಾಗಿತ್ತು. ಎಲ್ಲರ ಕಣ್ಣು ಕೋರೈಸುವಂತೆ ಸಿದ್ಧಗೊಂಡ ಜೋಡಿಯೊಂದು ಇನ್ನೇನು ಮದುವೆಯ ವಿಧಿ ವಿಧಾನ ಪೂರೈಸಿ ಮದುವೆಗಾಗಿ ತಂದ ಕೇಕ್‌ ಕತ್ತರಿಸಲು ಕಾಯುತ್ತಿದ್ದರು. ಆದರೆ ಅಷ್ಟರಲ್ಲಿ ಕೇಕ್‌ ತಂದ ಹೊಟೇಲ್‌(Hotel) ಸಿಬ್ಬಂದಿಯೊಬ್ಬ ಅದನ್ನು ಕೆಳಗೆ ಬೀಳಿಸಿಯೇ ಬಿಟ್ಟಿದ್ದಾನೆ. ವಧು ವರರು ಸೇರಿದಂತೆ ಎಲ್ಲರೂ ಇದನ್ನು ಗಾಬರಿಯಿಂದ ನೋಡಿದ್ದಾರೆ. ಆದರೆ ಅಲ್ಲಿ ಬೇರೆಯದೇ ಟ್ವಿಸ್ಟ್‌ ಇತ್ತು. ಹೋಟೆಲ್‌ ಸಿಬ್ಬಂದಿ ವರ ಹಾಗೂ ವಧುವಿಗೆ ಫನ್‌ ಮಾಡುವ ಸಲುವಾಗಿ ಹೀಗೆ ಮಾಡಿದ್ದಾರೆ. ವಾಸ್ತವವಾಗಿ ಹೊಟೇಲ್‌ ಸಿಬ್ಬಂದಿ ಮದುವೆಗೆ ತಂದ ಕೇಕ್‌ ಅನ್ನು ಬೀಳಿಸಿಯೇ ಇರಲಿಲ್ಲ. 

ಅವರು ಈ ನವ ವಿವಾಹಿತ ಜೋಡಿಗೆ ತಮಾಷಿಗಾಗಿ ಶಾಕ್‌ ನೀಡುವ ಸಲುವಾಗಿ ಬೇರೆಯದೇ ಒಂದು ಕೇಕ್‌(Cake) ಅನ್ನು ಬೀಳಿಸಿದ್ದರು. ಆದರೆ ಬಿದ್ದಿದ್ದು ಮದುವೆಗೆ ತಂದ ವಧು ವರ ಸೇರಿ ಕತ್ತರಿಸಬೇಕಾದ ಕೇಕ್‌ ಎಂದು ಭಾವಿಸಿದ ಜನ ಹಾಗೂ ನವ ವಿವಾಹಿತ ಜೋಡಿ ಘಟನೆಯಿಂದ ಕೆಲಕಾಲ ಶಾಕ್‌ಗೆ ಒಳಗಾಯಿತು. ವಧುವಂತೂ ಇನ್ನೇನು ಅಳುವುದಕ್ಕೆ ಸಿದ್ಧಳಾಗಿದ್ದಳು. ಅಷ್ಟರಲ್ಲಿ ಬಂದ ಮತ್ತೊಬ್ಬ ಹೊಟೇಲ್‌ ಸಿಬ್ಬಂದಿ ವಧು ವರ(bride groom)ರು ನಿಜವಾಗಿ ಕತ್ತರಿಸಬೇಕಾಗಿದ್ದ ಕೇಕ್‌ ಅನ್ನು ತಂದು ವಧುವರರ ಮುಂದಿಟ್ಟರು. ಈ ಸಂದರ್ಭವಂತೂ ಈ ಜೋಡಿಯ ಖುಷಿಗೆ ಮಿತಿಯೇ ಇರಲಿಲ್ಲ. ಕೇಕ್‌ ಕತ್ತರಿಸಿದ ಜೋಡಿ ಹಾಡಿ ಕುಣಿದು ಕುಪ್ಪಳಿಸಿದರು. ಹೊಟೇಲ್‌ ಸಿಬ್ಬಂದಿಯ ಈ ಚೇಷ್ಟೆಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದ್ದು 2 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಪ್ರಪೋಸಲ್, ವೆಡ್ಡಿಂಗ್(Wedding),ಎಂಗೇಜ್‌ಮೆಂಟ್ ಎಂಬ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.


ಅಡುಗೆ ಪಾತ್ರೆಯಲ್ಲಿ ದೋಣಿ ವಿಹಾರ ಮಾಡಿದ ನವಜೋಡಿ!

ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ವಧು-ವರರು ತಮ್ಮ ಮದುವೆಯ ಸುಂದರವಾದ ಧಿರಿಸನ್ನು ಧರಿಸಿ ತಮ್ಮ ವಿವಾಹದ ಕೇಕ್ ಬರುವವರೆಗೆ ಕಾಯುತ್ತಿರುವುದನ್ನು ಕಾಣಬಹುದು. ಆದರೆ, ಸಿಬ್ಬಂದಿ ಕೇಕ್‌ನೊಂದಿಗೆ ಒಳಗೆ ಬರುತ್ತಿದ್ದಾಗ ಅದು ಉರುಳಿ ಬಿದ್ದಿದೆ. ಸಿಬ್ಬಂದಿ ತಮ್ಮ ಕೇಕ್ ಅನ್ನು ಬೀಳಿಸಿದುದನ್ನು ನೋಡಿದ ದಂಪತಿಗಳು ಆಘಾತಕ್ಕೊಳಗಾದರು. ಆದಾಗ್ಯೂ, ಕೆಲವು ನಿಮಿಷಗಳ ನಂತರ ಹೊಟೇಲ್‌ ಸಿಬ್ಬಂದಿ ಘಟನೆಗೆ ಹೊಸ ಟ್ವಿಸ್ಟ್‌ ನೀಡಿದರು. ಹೋಟೆಲ್‌ನ ಇನ್ನೊಬ್ಬ ಸಿಬ್ಬಂದಿ ಮದುವೆಯ ನಿಜವಾದ ಮದುವೆಯ ಕೇಕ್‌ನೊಂದಿಗೆ ಹೊರ ಬಂದರು. ಇದರಿಂದ ಮದುವೆಯ ಜೋಡಿ ಸೇರಿದಂತೆ ಅಲ್ಲಿ ನೆರೆದಿದ್ದ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದನ್ನು ನೋಡಬಹುದು. ನಂತರ ದಂಪತಿ ತಮ್ಮ ವಿವಾಹದ ಆಚರಣೆಯ ಸಲುವಾಗಿ ಕೇಕ್ ಕತ್ತರಿಸಿ ನೃತ್ಯ ಮಾಡಿದರು. "ದೇವರಿಗೆ ಧನ್ಯವಾದಗಳು ಇದು ತಮಾಷೆಯಾಗಿತ್ತು. ನಮಗಂತೂ ಕಣ್ಣೀರು ಬರುವಂತಾಯಿತು ಎಂದು ದಂಪತಿಗಳು ಈ ಬಗ್ಗೆ ಹೇಳಿಕೊಂಡಿದ್ದಾರೆ.

Viral video: ಲೆಹೆಂಗಾ ಹಿಡಿಯಲು ಸಹಕರಿಸಿದ ಪತಿ, ಇಂಥವನು ನಮಗೂ ಸಿಗಬಾರದಾ ಎಂದ ಯುವತಿಯರು

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈರಲ್‌ ವೀಡಿಯೋಗಳದ್ದೇ ಹಾವಳಿಯಾಗಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಮದುವೆ ಹಾಲ್‌ಗೆ ಬೆಂಕಿ ಬಿದ್ದರು ಮದುವೆಗೆ ಬಂದಿದ್ದವರು ಕ್ಯಾರೇ ಎನ್ನದೇ ಊಟದಲ್ಲಿ ಮಗ್ನರಾಗಿದ್ದ ವಿಡಿಯೋ ವೈರಲ್‌ ಆಗಿತ್ತು. ಇದನ್ನು ಭಾರತೀಯ ಅಗ್ನಿಶಾಮಕ ದಳ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್‌ ಮಾಡಿತ್ತು. ಇದಕ್ಕೆ ಜನ ತರಹೇವಾರಿ ತಮಾಷಿಯಾದ ಕಾಮೆಂಟ್‌ಗಳನ್ನು ಮಾಡಿದ್ದರು. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ಈ ಘಟನೆ ನಡೆದಿತ್ತು. 

ಈ ವಿಡಿಯೋದಲ್ಲಿ ಊಟದ ಹಾಲ್‌ನಿಂದ ಕೇವಲ ಕೆಲ ಮೀಟರ್‌ ದೂರದಲ್ಲಿ ಭಾರಿ ಬೆಂಕಿ ಹಾಗೂ ಹೊಗೆ ಹೋಗುವುದು ಕಾಣಿಸುತ್ತಿದೆ. ಅದಾಗ್ಯೂ ಈ ಬಗ್ಗೆ ತಲೆಕೆಡಿಸಿಕೊಳ್ಳದ ಜನ ತಮ್ಮ ತಟ್ಟೆಯಲ್ಲಿರುವ ರುಚಿಯಾದ ಭೋಜನವನ್ನು ಸವಿಯುವುದರಲ್ಲೇ ನಿರತರಾಗಿದ್ದಾರೆ. ವಿಡಿಯೋದಲ್ಲಿ ಬೆಂಕಿಯ ಕಡೆ ಒಮ್ಮೆ ನೋಡಿದ ಅತಿಥಿಯೊಬ್ಬರು ಆ ಬಗ್ಗೆ ಸ್ವಲ್ಪವೂ ತಲೆಕೆಡಿಸಿಕೊಳ್ಳದೇ ಊಟವನ್ನು ಸವಿಯುತ್ತಿದ್ದರು. ಫೇಸ್ಬುಕ್‌(Facebook)ನಲ್ಲಿ ಈ ವಿಡಿಯೋವನ್ನು ಪೋಸ್ಟ್‌ ಮಾಡಿದ ಭಾರತೀಯ ಅಗ್ನಿ ಶಾಮಕ ದಳವೂ 'ಮದುವೆಯ ಪೆಂಡಾಲ್‌ಗೆ ಬೆಂಕಿ ಬಿದ್ದಿದೆ. ಆದರೆ ಮದುವೆಗೆ ಬಂದ ಅತಿಥಿ ಬೆಂಕಿಯಿಂದ ಹೊರ ಬರುವುದೋ ಅಥವಾ ಭೋಜನ ಸವಿಯುವುದೋ ಎಂಬ ಗೊಂದಲದಲ್ಲಿದ್ದಾನೆ' ಎಂಬ ಶೀರ್ಷಿಕೆ ನೀಡಿದ್ದಾರೆ. 

View post on Instagram