Asianet Suvarna News Asianet Suvarna News

ಫೋಟೋಗಾಗಿ ಚೀನಿಕಾಯಿ ಮೇಲೆ ಕುಳಿತ ಬ್ಯೂಟಿ... ಆಮೇಲೇನಾಯ್ತು ನೋಡಿ

ಮಹಿಳೆಯೊಬ್ಬರು ಚೀನಿಕಾಯಿ ಅಥವಾ ಸಿಹಿ ಕುಂಬಳ ಎಂದು ಕರೆಯಲ್ಪಡುವ ಕಾಯಿಯ ಮೇಲೆ ಕುಳಿತು ಫೋಟೋಗೆ ಫೋಸ್ ನೀಡಲು ಹೋಗಿದ್ದು, ಈ ವೇಳೆ ಈ ಸುಂದರಿಯ ಭಾರ ತಡೆಯಲಾಗದೇ ಅದು ಒಮ್ಮೆಗೆ ಒಡೆದು ಹೋಗಿ ಸುಂದರಿ ಕೆಳಗೆ ಬಿದ್ದಿದ್ದಾಳೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಗು ಮೂಡಿಸುತ್ತಿದೆ. 

Viral video Beauty sits on pumpkin to posing Photo, what happen next akb
Author
First Published Oct 31, 2022, 10:20 PM IST

ವಿದೇಶಗಳಲ್ಲಿ ಈಗ ಎಲ್ಲೆಡೆ ಜನ ಹ್ಯಾಲೋವೀನ್ ಆಚರಣೆಯಲ್ಲಿ ತೊಡಗಿದ್ದು ಇದರ ಭಾಗವಾಗಿ ಭೂತ ಪಿಶಾಚಿಗಳಂತೆ ಹಲವು ಚಿತ್ರ ವಿಚಿತ್ರ ವೇಷಗಳನ್ನು ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡು ಜನ ಎಂಜಾಯ್ ಮಾಡುತ್ತಿದ್ದಾರೆ. ಹಾಗೆಯೇ ಹ್ಯಾಲೋವಿನ್ ಆಚರಣೆಯ ಖುಷಿಯಲ್ಲಿದ್ದ ಮಹಿಳೆಯೊಬ್ಬರು ಚೀನಿಕಾಯಿ ಅಥವಾ ಸಿಹಿ ಕುಂಬಳ ಎಂದು ಕರೆಯಲ್ಪಡುವ ಕಾಯಿಯ ಮೇಲೆ ಕುಳಿತು ಫೋಟೋಗೆ ಫೋಸ್ ನೀಡಲು ಹೋಗಿದ್ದು, ಈ ವೇಳೆ ಈ ಸುಂದರಿಯ ಭಾರ ತಡೆಯಲಾಗದೇ ಅದು ಒಮ್ಮೆಗೆ ಒಡೆದು ಹೋಗಿ ಸುಂದರಿ ಕೆಳಗೆ ಬಿದ್ದಿದ್ದಾಳೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಗು ಮೂಡಿಸುತ್ತಿದೆ. 

@buitengebieden ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ತಲೆಗೊಂದು ಟೋಫಿ, ಜೀನ್ಸ್ ಪ್ಯಾಂಟ್, ಮೇಲೆ ಓವರ್ ಕೋಟ್ ಧರಿಸಿದ್ದ ಯುವತಿಯೊಬ್ಬಳು ಸೀದಾ ಹೋಗಿ ದೊಡ್ಡದಾದ ಚೀನಿಕಾಯಿ ಮೇಲೆ ಕುಳಿತಿದ್ದಾಳೆ. ತಾನು ಕುಳಿತಿದ್ದಲ್ಲದೇ ಸಮೀಪದಲ್ಲಿದ್ದ ಮತ್ತೊಂದು ಚೀನಿಕಾಯಿಯನ್ನು ತೊಡೆ ಮೇಲೆ ಇರಿಸಿಕೊಂಡಿದ್ದಾಳೆ. ಈ ವೇಳೆ ಆಕೆ ಕುಳಿತಿದ್ದ ಚೀನಿಕಾಯಿ ಮೊದಲೇ ಹಣ್ಣಾಗಿದ್ದು, ಆಕೆ ಫೋಸು ಕೊಡಲು ಮುಂದಾಗುತ್ತಿದ್ದಂತೆ ಭಾರ ತಡೆಯಲಾಗದೇ ಅಪ್ಪಚಿಯಾಗಿದೆ. ಪರಿಣಾಮ ಯುವತಿ ಕೆಳಗೆ ಬಿದ್ದಿದ್ದಾಳೆ. ಈ ವಿಡಿಯೋ ನೀಡಿದ ಅನೇಕರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಹ್ಯಾಪಿ ಹ್ಯಾಲೋವೆನ್ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು,  ಏಳು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. 

 

ಈ ವಿಡಿಯೋ ನೋಡಿದ ಅನೇಕರು ನಗುವ ಇಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಒಡೆದು ಹೋದ ಚೀನಿಕಾಯಿಗಾಗಿ ಆ ಯುವತಿ ಹಣ ಪಾವತಿ ಮಾಡಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ಮತ್ತೆ ಕೆಲವರು ಯಾರು ಚೀನಿಕಾಯಿ ಮೇಲೆ ಕೂರುವುದಿಲ್ಲ. ನಾವು ಯಾವತ್ತೂ ಕೂತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಹ್ಯಾಲೋವಿನಾ ಆಚರಣೆಯ ವೇಳೆ ಈ ಚೀನಿಕಾಯಿ ಸಾಮಾನ್ಯವಂತೆ. ಹ್ಯಾಲೋವೀನ್ ಆಚರಣೆಯ ಜೊತೆ ಈ ಚೀನಿಕಾಯಿಗಳು ಕೂಡ ಧೀರ್ಘಕಾಲದ ಸಂಬಂಧವನ್ನು ಹೊಂದಿವೆ. 

ಅಬ್ಬಬ್ಬಾ.. 1161 ಕೆಜಿ ತೂಕದ ಕುಂಬಳಕಾಯಿ ಬೆಳೆದು ಸೂಪರ್‌ ಬೌಲ್‌ ಪ್ರಶಸ್ತಿ ಗೆದ್ದ ರೈತ..!

ಐರಿಶ್ ಮೂಲದ ಪುರಾಣಗಳ (Irish myth) ಪ್ರಕಾರ ಹ್ಯಾಲೋವೀನ್‌ಗೂ (Halloween) ಈ ಚೀನಿಕಾಯಿಗೂ ಸಂಬಂಧವಿದ್ದು, ಸ್ವಿಂಗಿ ಜ್ಯಾಕ್ ಎಂಬಾತ ತನ್ನ ಸ್ವಂತ ಲಾಭಕ್ಕಾಗಿ ಚೀನಿಕಾಯಿ ವಿಚಾರದಲ್ಲಿ ದೆವ್ವಕ್ಕೆ ಮೋಸ ಮಾಡುತ್ತಾನೆ. ಹೀಗಾಗಿ ಜ್ಯಾಕ್ ಮರಣ ಹೊಂದಿದಾಗ ಆತನಿಗೆ ಸ್ವರ್ಗದಲ್ಲಾಗಲಿ (heaven)  ನರಕದಲ್ಲಾಗಲಿ (hell) ಎರಡೂ ಕಡೆಯಲ್ಲೂ ಯಾರೂ ಆತನಿಗೆ ಇರಲು ಜಾಗ ಕೊಡಲಿಲ್ಲವಂತೆ. ಹೀಗಾಗಿ ಜಾಕ್ ಅತೃಪ್ತ ಆತ್ಮವಾಗಿ ಭೂಮಿಯ ಮೇಲೆಯೇ ಶಾಶ್ವತವಾಗಿ ನೆಲಸುವಂತಾದನಂತೆ. ಹೀಗಾಗಿ ಐರ್ಲೆಂಡ್‌ನಲ್ಲಿ (Ireland) ಅತೃಪ್ತನಾಗಿ ಅಲೆದಾಡುವ ಜ್ಯಾಕ್‌ನ ಆತ್ಮವನ್ನು ಹೆದರಿಸಲು ಈ ಚೀನಿಕಾಯಿಯಿಂದ ಭೀಕರ ರೀತಿಯಲ್ಲಿ ಕಾಣಿಸುವ ರಾಕ್ಷಸ ಮುಖಗಳನ್ನು ಕೆತ್ತುತ್ತಾರಂತೆ. 

ಹ್ಯಾಲೋವೀನ್ ಪಾರ್ಟಿಯಲ್ಲಿ ಆರ್ಯನ್ ಖಾನ್, ಜಾನ್ವಿ, ಸಾರಾ ಲುಕ್‌ ನೋಡಿ ದಂಗಾದ ನೆಟಿಜನ್ಸ್

ಒಟ್ಟಿನಲ್ಲಿ ಇತ್ತೀಚೆಗೆ ಜನ ಫೋಟೋಗೆ ಫೋಸ್ ನೀಡುವ ಸಲುವಾಗಿ ಎಲ್ಲಿ ಬೇಕಾದರೂ ಕೂರಲು ಸಿದ್ಧರಿರುತ್ತಾರೆ. ಅಪಾಯಕಾರಿ ಸ್ಥಳಗಳಲ್ಲಿ ಫೋಟೋಗೆ ಫೋಸ್ ನೀಡಲು ಹೋಗಿ ಪ್ರಾಣವನ್ನೇ ಅಪಾಯಕೊಡ್ಡಿಕೊಳ್ಳುತ್ತಾರೆ. ಹೀಗೆ ಸೆಲ್ಫಿ ಹುಚ್ಚಿಗೆ ಮರುಳಾಗಿ ಪ್ರಾಣ ಕಳೆದುಕೊಂಡ ಹಲವು ನಿದರ್ಶನಗಳಿವೆ.

Follow Us:
Download App:
  • android
  • ios