ಹಾವೆಂದರೆ ಮನುಷ್ಯನಿಗೆ ಒಂದು ಬಗೆಯ ಆಸಕ್ತಿ. ಸದ್ಯ ಸೋಶಿಯಲ್ ಮೀಡಿಯಾದಲ್ಲೂ ಇಂತಹುದೇ ಒಂದು ಅನಕೊಂಡದ ವಿಡಿಯೋ ಭಾರೀ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನೀರಿನೊಳಗಿಂದ ವೇಗವಾಗಿ ಹೊರ ಬರುವ ಅನಕೊಂಡ ದಡದಲ್ಲಿ ಬಲೆ ಬೀಸಿ ಇಟಟ್ಟಿದ್ದ ಡ್ರಮ್‌ನೊಳಗೆ ಸಿಕ್ಕಾಕೊಂಡು, ಹೊರ ಬರಲು ಶ್ರಮ ಪಡುತ್ತಿರುವ ದೃಶ್ಯಗಳಿವೆ. 

ಇದರಲ್ಲಿ ಒಂದು ಕೆಸರಿನಿಂದ ತುಂಬಿದ ಕೆರೆ ಬಳಿ ಹರಡಿದ್ದ ಬಲೆಗೆ ವಿಶಾಲವಾದ ಹಾವು ಸಿಕ್ಕಾಕೊಂಡಿದೆ. ಈ ಹಾವು ಚಡಪಡಿಸಸುತ್ತಿದ್ದರೂ ಯಾರೊಬ್ಬರೂ ಸಹಾಯ ಮಾಡಲು ಆಗಮಿಸಿಲ್ಲ. ಈ ವಿಡಿಯೋ ನೋಡದವರು ಮಾತ್ರ ಬೆಚ್ಚಿ ಬಿದ್ದಿದ್ದಾರೆ. ಈ ಅನಕೊಂಡದ ಗಾತ್ರ ಐವತ್ತು ಅಡಿಗೂ ಅಧಿಕವಿದೆ ಎನ್ನಲಾಗಿದೆ. ಇನ್ನು ಈ ವಿಡಿಯೋ ಶೇರ್ ಮಾಡಿದವರು ಕೋಳಿಯನ್ನು ಹಿಡಿಯಲು ಹೋದವರ ಕೈಗೆ ಪೌಲ್ಟ್ರಿ ಫಾರ್ಮ್‌ಗೇ ಸಿಕ್ಕಾಕೊಂಡಿದೆ ಎಂದು ಬರೆಯಲಾಗಿದೆ.

ಇನ್ನು ಈ ವಿಡಿಯೋ ಎರಡು ವರ್ಷ ಹಳೆಯದಾಗಿದೆ. ಸದ್ಯ ಮತ್ತೆ ಇದು ವೈರಲ್ ಆಗುತ್ತಿದೆ. ಇನ್ನು ವಿಡಿಯೋದಲ್ಲಿ ಈಓ ಹಾವು ಅದೆಷ್ಟು ಭಯಾನಕವಾಗಿ ಕಾಣುತ್ತಿದೆಯೋ ವಾಸ್ತವವಾಗಿ ಅಷ್ಟು ದೊಡ್ಡದಿರಲಿಲ್ಲ. ಫ್ಯಾಕ್ಟ್ ಚೆಕ್ ನಡೆಸಿದಾಗ ಈ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ಈ ಮೂಲಕ ಪುಟ್ಟ ಹಾವನ್ನು ಇಷ್ಟು ದೊಡ್ಡದಿದೆ ಎಂಬಂತೆ ಬಿಂಬಿಸಲಾಗಿದೆ ಎಂಬ ವಿಚಾರ ಬಯಲಾಗಿದೆ.