40 ಕೋಟಿ ಲಾಟರಿ ಗೆದ್ದ ಭಾರತೀಯ, 9 ಮಂದಿ ಸ್ನೇಹಿತರು!
* ಕಾರು ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಕೇರಳ ಮೂಲದ ರಂಜಿತ್ ಸೋಮರಾಜನ್ ಮತ್ತು ಅವರ 9 ಸ್ನೇಹಿತರು
* ದುಬೈನಲ್ಲಿ ಭರ್ಜರಿ 40 ಕೋಟಿ ಮೊತ್ತದ ಲಾಟರಿ ಗೆದ್ದ ಗೆಳೆಯರು
* 10 ಜನರು ಸೇರಿ ತಲಾ 2000 ರು. ತೆತ್ತು ಬಂಪರ್ ಲಾಟರಿಯ ಟಿಕೆಟ್ ಖರೀದಿಸಿದ್ದರು
ದುಬೈ(ಜು.05): ಇಲ್ಲಿ ಕಾರು ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಕೇರಳ ಮೂಲದ ರಂಜಿತ್ ಸೋಮರಾಜನ್ ಮತ್ತು ಅವರ 9 ಸ್ನೇಹಿತರು ದುಬೈನಲ್ಲಿ ಭರ್ಜರಿ 40 ಕೋಟಿ ಮೊತ್ತದ ಲಾಟರಿ ಗೆದ್ದಿದ್ದಾರೆ.
ದುಬೈ ಸರ್ಕಾರ ನಡೆಸುವ ಲಾಟರಿ ಸ್ಪರ್ಧೆಯಲ್ಲಿ ರಂಜಿತ್ ಮತ್ತು ವಿವಿಧ ದೇಶಗಳಿಗೆ ಸೇರಿದ 10 ಜನರು ಸೇರಿ ತಲಾ 2000 ರು. ತೆತ್ತು ಬಂಪರ್ ಲಾಟರಿಯ ಟಿಕೆಟ್ ಖರೀದಿಸಿದ್ದರು. ನಾನಾ ಯಾವಾಗಲಾದರೂ 2 ಮತ್ತು 3ನೇ ಬಹುಮಾನ ಬರಬಹುದು ಎಂದು ನಿರೀಕ್ಷಿಸುತ್ತಿದ್ದೆ. ಇದಕ್ಕಾಗಿಯೇ ಕಳೆದ 3 ವರ್ಷಗಳಿಂದ ಟಿಕೆಟ್ ಖರೀದಿಸುತ್ತಿದ್ದೆ. ಒಂದಲ್ಲಾ ಒಂದು ದಿನ ಲಾಟರಿ ಹೊಡೆಯಬಹುದು ಎಂಬ ಆಸೆ ಇತ್ತು.
ಆದರೆ ಬಂಪರ್ ಬಹುಮಾನದ ನಿರೀಕ್ಷೆ ಇರಲಿಲ್ಲ ಎಂದಿದ್ದಾರೆ ರಂಜಿತ್. ಇದೀಗ ಎಲ್ಲರಿಗೂ ತಲಾ 4 ಕೋಟಿ ರು.ನಷ್ಟು ಹಣ ಸಿಗಲಿದೆ.
''ನನಗೆ ಈ ಬಾರಿ ಜಾಕ್‌ಪಾಟ್ ಹೊಡೆಯುತ್ತದೆಂದು ಎಣಿಸಿರಲಿಲ್ಲ. ಎರಡನೇ ಅಥವಾ ಮೂರನೇ ಬಹುಮಾನ ಬರಬಹುದೆಂದು ಭಾವಿಸಿದ್ದೆ,''ಎಂದು ಸೋಮರಾಜನ್ ಹೇಳಿದ್ದಾರೆ. 2008ರಿಂದಲೂ ಅವರು ದುಬೈನಲ್ಲಿ ಟ್ಯಾಕ್ಸಿ ಸೇರಿದಂತೆ ವಿವಿಧ ವಾಹನಗಳ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಅವರ ಸಂಬಳ ಕಡಿತಗೊಂಡಿತ್ತು. ಹೀಗಾಗಿ 9 ಜನರೊಂದಿಗೆ ಸೇರಿ ಜೂನ್ 29ರಂದು ಲಾಟರಿ ಖರೀದಿಸಿದ್ದರು.