ವಾಷಿಂಗ್ಟನ್( 20) ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣ ಮಾಡಿದ್ದಾರೆ. ಉಪಾಧ್ಯಕ್ಷರಾಗಿ ಭಾರತೀಯ ಮೂಲದ ಕಮಲಾ ಹ್ಯಾರೀಸ್ ಅಧಿಕಾರ ಸ್ವೀಕರಿಸಿದ್ದಾರೆ.

ಜೋ ಬೈಡೆನ್‌  46ನೇ ಅಧ್ಯಕ್ಷರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸದರು. ಅಮೆರಿಕಾದಲ್ಲಿ.  ಅಮೆರಿಕ ಕಂಡ ಅತ್ಯಂತ ಹಿರಿಯ ಅಧ್ಯಕ್ಷ ಎಂಬ ದಾಖಲೆಗೆ ಬೈಡೆನ್‌ ಪಾತ್ರವಾದರೆ ಉಪಾಧ್ಯಕ್ಷ ಹುದ್ದೆ ಏರಿದ ಮೊದಲ ಮಹಿಳೆ ಎಂಬ ಹಿರಿಮೆಗೆ ಕಮಲಾ ಹ್ಯಾರಿಸ್‌ ಪಾತ್ರವಾದರು.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಇಡೀ ಪ್ರಪಂಚದ ಗಮನ ಸೆಳೆದಿತ್ತು. ಚುನಾವಣೆಯಲ್ಲಿ ಸೋತರೂ ಟ್ರಂಪ್ ಅಧಿಕಾರ ಬಿಟ್ಟುಕೊಡಲು ಮೊಂಡಾಟ ಮಾಡುತ್ತಲೇ ಬಂದಿದ್ದರು.

ಬೈಡನ್‌ಗೆ ಕಿಮ್ ರಿಂದ ಬೆದರಿಕೆ ಬಂತು

ಇದರೊಂದಿಗೆ ಅಮೆರಿಕದಲ್ಲಿ ಹೊಸ ಅಧಿಕಾರ ಆರಂಭವಾಗಲಿದೆ. ಇದು ಪ್ರಪಂಚದ ಮೇಲೆಯೂ ಪರಿಣಾಮ ಬೀರಲಿದೆ. ಕೊರೋನಾ, ಆರ್ಥಿಕತೆ ಸವಾಲುಗಳು ಹೊಸ ಆಡಳಿತಗಾರರ ಮುಂದೆ ಇದೆ.

 ಡೊನಾಲ್ಡ್ ಟ್ರಂಪ್ ವಿವಿಧ ಮುಸ್ಲಿಂ ಬಾಹುಳ್ಯ ದೇಶಗಳ ಮೇಲಿನ ಪ್ರಯಾಣಿಕರಿಗೆ ವಿಧಿಸಿದ್ದ ನಿರ್ಬಂಧವನ್ನು ಬೈಡನ್ ತೆರವುಗೊಳಿಸಲಿದ್ದಾರೆ ಎನ್ನಲಾಗಿದ್ದು ಇದರೊಂದಿಗೆ ಜತೆಗೆ ಅಕ್ರಮ ವಲಸಿಗರು ದೇಶಕ್ಕೆ ಬರುವುದನ್ನು ತಡೆಯಲು ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣಕ್ಕೆ ಟ್ರಂಪ್ ನೀಡಿದ್ದ ಆದೇಶವನ್ನು ಕೂಡ ರದ್ದು ಮಾಡುವ ಸಾಧ್ಯತೆ ಇದೆ.

ಭಾರತೀಯ ಕಾಲಮಾನ ರಾತ್ರಿ 10.30ಕ್ಕೆ ಪ್ರಮಾಣ ತೆಗೆದುಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ. ಪ್ರಜಾಪ್ರಭುತ್ವಕ್ಕೆ ಗೆಲುವಾಗಿದೆ ಎಂದು ಬೈಡನ್ ಹೇಳಿದ್ದಾರೆ.