Asianet Suvarna News Asianet Suvarna News

ಚೀನಾ ವಿರುದ್ಧ ಅಮೆರಿಕ, ಬ್ರಿಟನ್‌, ಆಸ್ಪ್ರೇಲಿಯಾ ಹೊಸ ಮೈತ್ರಿಕೂಟ

  •   ಭಾರತದ ಸುತ್ತಮುತ್ತಲಿನ ಇಂಡೋ-ಪೆಸಿಫಿಕ್‌ ಸಮುದ್ರ ಪ್ರದೇಶದಲ್ಲಿ ಚೀನಾ ಹೆಚ್ಚು ಪ್ರಭಾವ ಬೆಳೆಸುತ್ತಿರುವುದನ್ನು ಮನಗಂಡಿರುವ ಅಮೆರಿಕ, ಬ್ರಿಟನ್‌ ಹಾಗೂ ಆಸ್ಪ್ರೇಲಿಯಾಗಳ ಒಗ್ಗಟ್ಟು
  • ತ್ರಿಪಕ್ಷೀಯ ಭದ್ರತಾ ಒಪ್ಪಂದದ ಘೋಷಣೆ ಮಾಡಿವೆ. ಚೀನಾ ಪ್ರಭಾವವನ್ನು ಈ ವಲಯದಲ್ಲಿ ತಗ್ಗಿಸುವ ಉದ್ದೇಶವನ್ನೇ ಈ ಮೈತ್ರಿಕೂಟ ಹೊಂದಿದೆ  
US UK and Australia launch military alliance to counter China snr
Author
Bengaluru, First Published Sep 17, 2021, 9:19 AM IST

 ವಾಷಿಂಗ್ಟನ್‌/ಲಂಡನ್‌ (ಸೆ.17):  ಭಾರತದ ಸುತ್ತಮುತ್ತಲಿನ ಇಂಡೋ-ಪೆಸಿಫಿಕ್‌ ಸಮುದ್ರ ಪ್ರದೇಶದಲ್ಲಿ ಚೀನಾ ಹೆಚ್ಚು ಪ್ರಭಾವ ಬೆಳೆಸುತ್ತಿರುವುದನ್ನು ಮನಗಂಡಿರುವ ಅಮೆರಿಕ, ಬ್ರಿಟನ್‌ ಹಾಗೂ ಆಸ್ಪ್ರೇಲಿಯಾಗಳು ಈಗ ಒಗ್ಗಟ್ಟಾಗಿದ್ದು ಹೊಸ ತ್ರಿಪಕ್ಷೀಯ ಭದ್ರತಾ ಒಪ್ಪಂದದ ಘೋಷಣೆ ಮಾಡಿವೆ. ಚೀನಾ ಪ್ರಭಾವವನ್ನು ಈ ವಲಯದಲ್ಲಿ ತಗ್ಗಿಸುವ ಉದ್ದೇಶವನ್ನೇ ಈ ಮೈತ್ರಿಕೂಟ ಹೊಂದಿದೆ ಎಂದು ಹೇಳಲಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಹಾಗೂ ಬ್ರಿಟನ್‌ ಪ್ರಧಾನಿ ಬೊರಿಸ್‌ ಜಾನ್ಸನ್‌ ಅವರು ಈ ಮೈತ್ರಿ ಘೋಷಿಸಿ ಜಂಟಿ ಹೇಳಿಕೆ ನೀಡಿದ್ದಾರೆ. ಈ ನಡೆಯು ಇಂಡೋ-ಪೆಸಿಫಿಕ್‌ ವಲಯದಲ್ಲಿ ಸ್ಥಿರತೆ ಉಂಟು ಮಾಡಲಿದೆ. ಇದು ಐತಿಹಾಸಿಕ ಕ್ರಮ ಎಂದು ಹೇಳಿದ್ದಾರೆ.

ತಾಲಿ​ಬಾ​ನ್‌ಗೆ ಚೀನಾ 230 ಕೋಟಿ ನೆರ​ವು!

‘ಔಕುಸ್‌’ (ಆಸ್ಪ್ರೇಲಿಯ, ಬ್ರಿಟನ್‌, ಅಮೆರಿಕ) ಹೆಸರಿನ ಈ ಮೈತ್ರಿಕೂಟದಲ್ಲಿ ಎಲ್ಲ ಮೂರೂ ದೇಶಗಳು ಸಾಗರ ರಕ್ಷಣೆಗೆ ಸಂಬಂಧಿಸಿದ ತಂತ್ರಜ್ಞಾನ ಸಹಕಾರ ವೃದ್ಧಿಸಿಕೊಳ್ಳಲಿವೆ. ಒಬ್ಬರ ನೆಲೆಯನ್ನೊಬ್ಬರು ಬಳಕೆ ಮಾಡಿಕೊಳ್ಳಲಿವೆ. ರಕ್ಷಣಾ ವಿಜ್ಞಾನ-ತಂತ್ರಜ್ಞಾನದ ವಿನಿಮಯ ಮಾಡಿಕೊಳ್ಳಲಿವೆ.

ಇದೇ ವೇಳೆ, ಆಸ್ಪ್ರೇಲಿಯಾ ದೇಶವು ಅಣ್ವಸ್ತ್ರ ಚಾಲಿತ ಸಬ್‌ಮರೀನ್‌ಗಳನ್ನು ಅಮೆರಿಕ ಹಾಗೂ ಬ್ರಿಟನ್‌ ಸಹಾಯದಿಂದ ನಿರ್ಮಿಸಲಿದೆ. ಈ ಜಲಾಂತರ್ಗಾಮಿಗಳ ಮೂಲಕ ಏಷ್ಯಾ ಪೆಸಿಫಿಕ್‌ ವಲಯದ ಸಮುದ್ರದಲ್ಲಿ ಕಣ್ಗಾವಲು ಇಡಲಾಗುತ್ತದೆ. ಇದು ಈ ವಲಯದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳುವ ಹವಣಿಕೆಯಲ್ಲಿ ಇರುವ ಚೀನಾ ಓಟಕ್ಕೆ ಬ್ರೇಕ್‌ ಹಾಕುವ ಉದ್ದೇಶ ಹೊಂದಿವೆ.

ಮುಂದಿನ 18 ತಿಂಗಳಲ್ಲಿ ಈ ಉದ್ದೇಶಿತ ಯೋಜನೆಯನ್ನು ಏಷ್ಯಾ ಪೆಸಿಫಿಕ್‌ ವಲಯದಲ್ಲಿ ಸಾಕಾರಗೊಳಿಸುವ ಉದ್ದೇಶ ಹೊಂದಿದ್ದೇವೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

Follow Us:
Download App:
  • android
  • ios