* ಆಫ್ಘಾನಿ​ಸ್ತಾ​ನ ‘ಉಗ್ರ’ ಸರ್ಕಾ​ರದ ಬಗ್ಗೆ ಮೆಚ್ಚು​ಗೆ* ತಾಲಿ​ಬಾ​ನ್‌ಗೆ ಚೀನಾ 230 ಕೋಟಿ ನೆರ​ವು

ಬೀಜಿಂಗ್‌(ಸೆ.09): ಅಫ್ಘಾನಿಸ್ತಾನದ ನೂತನ ತಾಲಿಬಾನ್‌ ಸರ್ಕಾರವನ್ನು ಚೀನಾ ಹಾಡಿ ಹೊಗಳುವುದಷ್ಟಅಲ್ಲ, 230 ಕೋಟಿ ರು. ನೆರವನ್ನು ಕೂಡ ಘೋಷಿ​ಸಿ​ದೆ.

‘ತಾಲಿಬಾನ್‌ ಘೋಷಿಸಿದ ನೂತನ ಮಧ್ಯಂತರ ಸರ್ಕಾರ ಅಫ್ಘಾನಿಸ್ತಾನದಲ್ಲಿ ಅರಾಜಕತೆಯನ್ನು ಕೊನೆಗೊಳಿಸಿದೆ. ಆಡಳಿತವನ್ನು ಮರುಸ್ಥಾಪಿಸಲು ಇದೊಂದು ಅತ್ಯಗತ್ಯ ಕ್ರಮ. ಇದಲ್ಲದೇ ವಿಶಾಲವಾದ ರಾಜಕೀಯ ರಚನೆ ಮತ್ತು ವಿವೇಕಯುತ ದೇಶೀಯ ಮತ್ತು ವಿದೇಶಿ ನೀತಿಯನ್ನು ಅನುಸರಿಸುವುದಾಗಿಯೂ ತಾಲಿಬಾನ್‌ ಭರವಸೆ ನೀಡಿದೆ. ಹೀಗಾಗಿ ತಾಲಿಬಾನ್‌ ಸರ್ಕಾರ ರಚನೆಗೆ ನಾವು ಬೆಂಬಲ ನೀಡುತ್ತೇವೆ’ ಎಂದು ಚೀನಾ ವಿದೇ​ಶಾಂಗ ಸಚಿವ ವಾಂಗ್‌ ಯಿ ಹಾಗೂ ವಿದೇ​ಶಾಂಗ ವಕ್ತಾರ ವಾಂಗ್‌ ವೆನ್ಬಿ​ನ್‌ ಹೇಳಿ​ದ್ದಾ​ರೆ.

ಚಳಿಗಾಲದ ಆಹಾರ, ಲಸಿಕೆ ಮತ್ತು ಔಷಧ ಸಹಾಯಕ್ಕಾಗಿ 230 ಕೋಟಿ ನೆರವು ನೀಡುತ್ತೇವೆ. ಮೊದಲ ಕಂತಿನಲ್ಲಿ 30 ಲಕ್ಷ ಡೋಸ್‌ ಲಸಿಕೆಯನ್ನು ಕಳುಹಿಸಲಾಗುವುದು ಎಂದು ಅವ​ರು ತಿಳಿ​ಸಿ​ದ್ದಾ​ರೆ.