1.5 ಲಕ್ಷದ ಫರ್ನಿಚರ್‌ ಬುಕ್‌ ಮಾಡಿದ ಹಾಲುಗಲ್ಲದ ಮಗು ಫೋನ್‌ ನೋಡಿ ಗಾಬರಿಯಾದ ಅಮ್ಮ ಅಮೆರಿಕಾದ ನ್ಯೂಜೆರ್ಸಿಯಲ್ಲಿ ಘಟನೆ

ನ್ಯೂಯಾರ್ಕ್‌(ಜ.24): ಕೋವಿಡ್-19 ಸಾಂಕ್ರಾಮಿಕ ರೋಗವು ಜಗತ್ತನ್ನು ಆವರಿಸಿದ ನಂತರ, ಬಹುತೇಕ ಎಲ್ಲವೂ ಆನ್‌ಲೈನ್‌ನಲ್ಲಿ ಸಿಗುವಂತಾಗಿದೆ. ಜೊತೆಗೆ ಚಿಕ್ಕ ಮಕ್ಕಳ ಕೈಗೂ ಸ್ಮಾರ್ಟ್‌ಫೋನ್ ಸಿಕ್ಕಿದ್ದು, ಮಗುವೊಂದು ಅಮ್ಮನ ಫೋನ್‌ ಬಳಸಿ 1.5 ಲಕ್ಷ ರೂಪಾಯಿ ಮೌಲ್ಯದ ಪೀಠೋಪಕರಣವನ್ನು ಆರ್ಡರ್ ಮಾಡಿದ ಘಟನೆ ನಡೆದಿದೆ. ಅಮೆರಿಕಾದ ನ್ಯೂಜೆರ್ಸಿಯಲ್ಲಿ 22 ತಿಂಗಳ ಮಗುವೊಂದು ಈ ರೀತಿ ಮಾಡಿದ್ದು, ಫೋನ್‌ ನೋಡಿದ ಅಮ್ಮ ಹೌಹಾರುವಂತಾಗಿದೆ. 

ನ್ಯೂಯಾರ್ಕ್‌ನ ಮಾಧ್ಯಮವೊಂದರ ಪ್ರಕಾರ ಆಯನ್ಶ್‌ ಕುಮಾರ್ ( Aayansh Kumar) ಎಂಬ ಪುಟ್ಟ ಮಗು ತನ್ನ ತಾಯಿಯ ಫೋನ್ ಮೂಲಕ ವಾಲ್‌ಮಾರ್ಟ್‌ನಿಂದ ಪೀಠೋಪಕರಣಗಳನ್ನು ಆರ್ಡರ್ ಮಾಡಿದ್ದಾನೆ. ಅವನು ಇದನ್ನು ಮಾಡಿದ್ದಾನೆ ಎಂದು ನಂಬುವುದು ನಿಜವಾಗಿಯೂ ಕಷ್ಟವಾಗುತ್ತಿದೆ. ಆದರೆ ಆತ ಮಾಡಿದಕ್ಕೆ ಸಾಕ್ಷ್ಯವಿದೆ ಎಂದು ಆಯನ್ಶ್ ತಂದೆ ಪ್ರಮೋದ್ ಕುಮಾರ್ ಹೇಳಿದ್ದಾರೆ. ಅಂಬೆಗಾಲಿಡುವ ಈ ಮಗುವಿನ ತಾಯಿ ತಾಯಿ ಮಧು ಕುಮಾರ್ ತನ್ನ ಫೋನ್‌ನಲ್ಲಿ ಕಾರ್ಟ್ ಅನ್ನು ರಚಿಸಿದ್ದರು. ಆದರೆ ಅದನ್ನು ಎಂದಿಗೂ ಪರಿಶೀಲಿಸಿರಲಿಲ್ಲ. ಆದರೆ ಪೀಠೋಪಕರಣಗಳು ಇದ್ದಕ್ಕಿದ್ದಂತೆ ಬರಲು ಪ್ರಾರಂಭಿಸಿದಾಗ, ಅವರು ತನ್ನ ಪತಿ ಮತ್ತು ಇಬ್ಬರು ಹಿರಿಯ ಮಕ್ಕಳಲ್ಲಿ ಅದರ ಬಗ್ಗೆ ಕೇಳಿದ್ದಾಳೆ. ಆದರೆ ಮಕ್ಕಳ್ಯಾರು ಬುಕ್‌ ಮಾಡಿಲ್ಲ ಎಂದು ಹೇಳಿದ್ದರು.

ನನಗೆ ಒಂದು ಅಥವಾ ಎರಡು ಬೇಕಿತ್ತು. ಆದರೆ ನಾಲ್ಕು ಏಕೆ. ಮಗು ಬುಕ್‌ ಮಾಡಿದ ಕೆಲವು ಪಿಠೋಪಕರಣಗಳು ತುಂಬಾ ದೊಡ್ಡದಾಗಿದ್ದು, ಅವು ಮುಂಭಾಗದ ಬಾಗಿಲಿನ ಮೂಲಕ ಹೊಂದಿಕೊಳ್ಳುವುದಿಲ್ಲ. ಅಲ್ಲದೇ ವಾರಪೂರ್ತಿ ವಸ್ತುಗಳು ಬರುತ್ತಲೇ ಇದ್ದವು ಎಂದು ಮಧು ಹೇಳಿದರು. ಆಯನ್ಶ್ ಅವರು ಏಪ್ರಿಲ್ 2020 ರಲ್ಲಿ ಕೋವಿಡ್‌ ಸಾಂಕ್ರಾಮಿಕ ರೋಗದ ಪ್ರಾರಂಭದಲ್ಲಿ ಜನಿಸಿದ್ದರು. ಅವರು ತಮ್ಮ ಪೋಷಕರು ಕೆಲಸ ಮಾಡುವ ಮತ್ತು ಮಗುವಿಗಿಂತ ಹಿರಿಯರಾದ ಒಡಹುಟ್ಟಿದವರು ಆನ್‌ಲೈನ್‌ನಲ್ಲಿ ಶಿಕ್ಷಣ ಪಡೆಯುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಅವನು ತುಂಬಾ ಚಿಕ್ಕವನು, ಅವನು ತುಂಬಾ ಮುದ್ದಾಗಿದ್ದಾನೆ, ಅವನು ಈ ಎಲ್ಲಾ ವಿಷಯವನ್ನು ಆರ್ಡರ್ ಮಾಡಿದ್ದಾನೆ ಎಂದು ನಾವು ನಗುತ್ತಿದ್ದೆವು ಎಂದು ತಾಯಿ ಮಧು (Madhu) ಹೇಳಿದ್ದಾರೆ.

ಈ ಮಧ್ಯೆ ಪ್ರಮೋದ್ (Pramodh) ಮತ್ತು ಮಧು ಅವರಿಗೆ ತಮ್ಮ ಸ್ಥಳೀಯ ವಾಲ್‌ಮಾರ್ಟ್ (wallmart) ಸ್ಟೋರ್‌ನಿಂದ ಸಂಪೂರ್ಣ ಮರುಪಾವತಿಯ ಭರವಸೆ ಸಿಕ್ಕಿದೆ. ಎಲ್ಲಾ ವಸ್ತುಗಳು ಬರುವವರೆಗೆ ಕಾದು ನಂತರ ಹಿಂತಿರುಗಿಸಲು ಅವರು ನಿರ್ಧರಿಸಿದ್ದಾರೆ.