ಟಿಕ್‌ಟಾಕ್‌ ಗೀಳಿಗೆ ಮಂಜುಗಡ್ಡೆಯಾಗಿದ್ದ ನದಿಗಿಳಿದ ಸ್ಟಾರ್| ಸ್ವಮ್ಮಿಂಗ್ ಮಾಡಿ ಹೊರ ಬರಲಾರದೆ ಪರದಾಟ| ವೈರಲ್ ಆಯ್ತು ಶಾಕಿಂಗ್ ವಿಡಿಯೋ

ವಾಷಿಂಗ್ಟನ್[ಫೆ.27]: 

Add Asianetnews Kannada as a Preferred SourcegooglePreferred

ಟಿಕ್ ಟಾಕ್ ನಲ್ಲಿ ಪ್ರಸಿದ್ಧರಾಗಲು ಜನರು ಚಿತ್ರ ವಿಚಿತ್ರ ವಿಡಿಯೋಗಳನ್ನು ಮಾಡುತ್ತಾರೆ. ಆದರೆ ಇಲ್ಲೊಬ್ಬ ಟಿಕ್ ಟಾಕ್ ಸ್ಟಾರ್ ವಿಡಿಯೋ ಮಾಡುವ ಗೀಳಿನಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. 

ಹೌದು ಟಿಕ್ ಟಾಕ್ ಆ್ಯಪ್ ನಲ್ಲಿ ಸುಮಾರು 4 ಲಕ್ಷ ಹಿಂಬಾಲಕರಿರುವ ಜೈಸನ್ ಕ್ಲಾರ್ಕ್ ವಿಡಿಯೋ ಒಂದನ್ನು ಪೋಸ್ಟ್ ಮಾಡುತ್ತಾ ನಾನು ಸಾವಿನ ಕದ ತಟ್ಟಿ ಬಂದೆ ಎಂದು ಬರೆದಿದ್ದಾರೆ. ತಾನು ಮಂಜುಗಟ್ಟೆಯಾಗಿದ್ದ ನದಿಯಲ್ಲಿ ಸಿಕ್ಕಾಕೊಂಡಿದ್ದೆ. ಹೊರ ಬರಲು ದಾರಿ ಸಿಗದೆ ಒದ್ದಾಡಿದ್ದೆ, ಇನ್ನು ಸಾಯುವುದು ಖಚಿತ ಎಂದು ಭಾವಿಸಿದ್ದೆ ಎಂದಿದ್ದಾರೆ.

ಶಾಕಿಂಗ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ಜೈಸನ್ ತಾನು ಹೇಗೆ ಬಚಾವಾದೆ ಎಂದು ತಿಳಿಸಿದ್ದಾರೆ. ವಿಡಿಯೋದಲ್ಲಿ ಮಂಜುಗಡ್ಡೆಯಲ್ಲಿ ಒದ್ದಾಡುವ ಅವರು ಹೊರ ಬರುತ್ತಿದ್ದಂತೆಯೇ ದೀರ್ಘವಾಗಿ ಉಸಿರು ಬಿಡುವುದನ್ನು ನೋಡಬಹುದು. ಜೈಸನ್ ಮಂಜುಗಡ್ಡೆಯಡಿಯಲ್ಲಿರುವ ನೀರಿನಲ್ಲಿ ಈಜಲು ಒಳ ನುಸುಳುತ್ತಾರೆ. ಸ್ವಲ್ಪ ಸಮಯ ಸ್ವಿಮ್ಮಿಂಗ್ ಮಾಡಿದ ಬಳಿಕ ಒಂದು ಬಾರಿ ಕೈಯ್ಯಲ್ಲಿ ಮಂಜುಗಡ್ಡೆಯನ್ನು ಒಡೆಯಲು ಯತ್ನಿಸುತ್ತಿರುವಂತೆ ಭಾಸವಾಗುತ್ತದೆ. ಆದರೆ ಇದು ಅವರಿಂದ ಸಾಧ್ಯವಾಗುವುದಿಲ್ಲ.

View post on Instagram

ನೀರಿನೊಳಗಿದ್ದ ಅವರು ತಾವೆಲ್ಲಿಂದ ಒಳ ಹೋಗಿದ್ದರೆಂದು ಚಡಪಡಿಸಿದ್ದಾರೆ. ಇನ್ನೇನು ಬದುಕುಳಿಯುವುದಿಲ್ಲ ಎನ್ನುವಷ್ಟರಲ್ಲಿ ಹೊರ ಬರುವ ದಾರಿ ಕಾಣಿಸಿಕೊಳ್ಳುತ್ತದೆ. ಹೊರ ಬಂದ ಜೈಸನ್ ಬದುಕಿದೆಯಾ ಬಡ ಜೀವವೇ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. 

ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಜೈಸನ್ ತಮಾಷೆಗೆ ಹೀಗೆ ಮಾಡುತ್ತಿದ್ದಾರೆಂದು ಭಾವಿಸಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಭಿನ್ನವಾದ ಕಮೆಂಟ್ ಗಳು ಬಂದಿವೆ.