Asianet Suvarna News Asianet Suvarna News

ಸಿಖ್‌ರ ವೈಶಾಖಿ ಹಬ್ಬ, ಗರು ತೇಗ್ ಬಹದ್ದೂರ್ ಜಯಂತಿಗೆ ಶುಭಕೋರಿದ ಅಮೆರಿಕ ಸೆನೆಟರ್!

ಸಿಖ್‌ರ ಪ್ರಮುಖ ಎರಡು ಹಬ್ಬಗಳು ಬರುತ್ತಿದೆ. ಸಿಖ್ ಹೊಸ ವರ್ಷ ವೈಶಾಖಿ ಹಾಗೂ ಗುರು ತೇಗ್ ಬಹದ್ದೂರ್ 400ನೇ ಜಯಂತಿ ಪ್ರಯುಕ್ತ ಅಮೆರಿಕ ಸೆನೆಟರ್ ಸಿಖ್‌ರ ತ್ಯಾಗ, ನಿಸ್ವಾರ್ಥ ಸೇವೆಯನ್ನು ಕೊಂಡಾಡಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ

US Senator greeted Sikh community for vaisakhi and birth anniversary of Guru Tegh Bahadur ckm
Author
Bengaluru, First Published Apr 16, 2021, 7:55 PM IST

ನ್ಯೂಯಾರ್ಕ್(ಏ.16):ಸಿಖ್ ಸಮುದಾಯದ ವೈಶಾಖಿ ಹಬ್ಬ ಹಾಗೂ ಗುರ್ ತೇಗ್ ಬಹದ್ದೂರ್ 400ನೇ ಜಯಂತಿ ಹಿನ್ನಲೆಯಲ್ಲಿ ಸಿಖ್ ಸಮುದಾಯಗ ಶುಭಾಶಯ ಹೇಳಿದ ಸೆನೆಟರ್, ಸಿಖ್ ಸಮುದಾಯದ ನಿಸ್ವಾರ್ಥ ಸೇವೆ, ತ್ಯಾಗವನ್ನು ಅಮೆರಿಕ ಸೆನೆಟರ್ ಪ್ಯಾಟ್ ಟೂಮಿ ಕೊಂಡಾಡಿದ್ದಾರೆ. 

ದೆಹಲಿ ಗುರುದ್ವಾರ ಮಂದಿರ ಆಸ್ಪತ್ರೆಯಲ್ಲಿ ಅತೀ ಕಡಿಮೆ ದರದಲ್ಲಿ ಸೇವೆ; 50 ರೂ.ಗೆ MRI ಸ್ಕಾನ್!.

ಸಿಖ್ ಹೊಸ ವರ್ಷವಾದ ವೈಶಾಖಿ ಹಬ್ಬ ಹಾಗೂ ಗುರು ತೇಜ್ ಬಹದ್ದೂರ್ ಅವರ ಜನ್ಮ 400 ನೇ ವರ್ಷಾಚರಣೆಗಾಗಿ ಸಿಖ್ ಸಮುದಾಯಕ್ಕೆ ನನ್ನ ಶುಭಾಶಯಗಳನ್ನು ಅರ್ಪಿಸುತ್ತೇನೆ ಎಂದು ಪ್ಯಾಟ್ ಟೂಮಿ ಹೇಳಿದ್ದಾರೆ. ಸಿಖ್ ಸಂಪ್ರದಾಯಗಳು ಶಾಂತಿ, ಗೌರವ ಮತ್ತು ಸಮಾನತೆಯ ಆದರ್ಶಗಳ ಮೇಲೆ ನಿಂತಿದೆ. ಭಾರತದ ಪಂಜಾಬ್‌ನಲ್ಲಿ ಸಿಖ್ ಮೂಲ ಇದ್ದರೆ, ಕಳೆದ 600 ವರ್ಷಗಳಿಂದ ವಿಶ್ವದೆಲ್ಲೆಡೆ ಸಿಖ್‌ರು ಅಭಿವದ್ಧಿ ಪಥದಲಾಲಿ ಸಾಗೋ ಮೂಲಕ ಹೆಮ್ಮೆ ತಂದಿದ್ದಾರೆ ಎಂದು ಸೆನೆಟರ್ ಹೇಳಿದ್ದಾರೆ

ಅಲ್ಪಸಂಖ್ಯಾತ ಸಿಖ್ಖರು ಮತ್ತು ಹಿಂದುಗಳು ಅಳಿವಿನಂಚಿನಲ್ಲಿದ್ದಾರೆ

ಸಿಖ್ ಸಮುದಾಯದಲ್ಲಿ ಸಮಾನತೆಗೆ ಹೆಚ್ಚಿನ ಆದ್ಯತೆ ಇದೆ. ಸಿಖ್ ಜನಸಂಖ್ಯೆ ಒಟ್ಟು 30 ಮಿಲಿಯನ್. ಇದರಲ್ಲಿ 700,000 ಸಿಖ್‌ರು ಅಮೆರಿಕದಲ್ಲಿ ನೆಲೆಸಿದ್ದಾರೆ.  ಕೊರೋನಾ ಸಂಕಷ್ಟದ ಸಮಯದಲ್ಲಿ ಅಮೆರಿಕದಲ್ಲಿ ನೆಲೆಸಿುವ ಸಿಖ್ ಸಮುದಾಯ ಮಾಸ್ಕ್, ಅಗತ್ಯ ವಸ್ತು, ಆಹಾರ ಸೇರಿದಂತೆ ಹಲವು ವೈದ್ಯಕೀಯ ವಸ್ತುಗಳನ್ನು ಅಗತ್ಯವಿರುವವರಿಗೆ ತಲುಪಿಸಿದ್ದಾರೆ. 

ವಿಶ್ವದ ಹಲವು ಸಿಖ್ ಘಟಕಗಳನ್ನು ಭೇಟಿಯಾದಾಗ ಸಮುದಾಯದ ಮನೋಭಾವವನ್ನು  ನೇರವಾಗಿ ಕಂಡಿದ್ದೇನೆ. ತಮ್ಮ ನೆರೆ ಹೊರೆಯನ್ನು ಶ್ರೀಮಂತಗೊಳಿಸುವ ಗುಣ ಹೊಂದಿದ್ದಾರೆ.  ಅಮೆರಿಕ ಬೆಳವಣಿಗೆಯಲ್ಲಿ ಸಿಖ್ ಕೊಡುಗೆ ಅಪಾರವಾಗಿದೆ ಎಂದು ಪ್ಯಾಟ್ ಟೂಮಿ ಹೇಳಿದ್ದಾರೆ.

Follow Us:
Download App:
  • android
  • ios