ವಾಷಿಂಗ್ ಟನ್ (ಆ. 18) ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಾದ ಸಿಖ್ಖರು ಮತ್ತು ಹಿಂದುಗಳ ಸ್ಥಿತಿ  ಅಳಿವಿನ ಅಂಚಿಗೆ ತಲುಪಿದ್ದು ಯುದ್ಧ ಪೀಡಿತ ಪ್ರದೇಶದಿಂದ ಅಮೆರಿಕಕ್ಕೆ ಅವರನ್ನು ಸ್ಥಳಾಂತರ ಮಾಡಬೇಕು ಎಂಬ ನಿರ್ಣಯ ಅಮೆರಿಕ ಸಂಸತ್ತಿನಲ್ಲಿ ಮಂಡಿಸಲಾಗಿದೆ.

ಹಿಂದಿನ ವಾರ ಸಂಸದೆ ಜಾಕಿ ಸಸ್ಪೀಯರ್ ಸೇರಿಂದಂತೆ ಏಳು ಜನರು ಮಸೂದೆ ಮಂಡನೆ ಮಾಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಾದ ಸಿಖ್ಖರು ಮತ್ತು ಹಿಂದುಗಳ ಮೇಲೆ ದಾಳಿಯಾಗಿತ್ತಿದ್ದು ಅವರು ನಿರಾಶ್ರಿತರಾಗುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರವನ್ನು ತಿಳಿಸಲಾಗಿದೆ.

ಗಣೇಶ ಹಬ್ಬಕ್ಕೆ ರೂಲ್ಸ್ ಚೆಂಜ್

ಭಯೋತ್ಪಾದಕರು ಈ ಸಮುದಾಯವನ್ನೇ ಟಾರ್ಗೆಟ್ ಮಾಡಿಕೊಂಡಿದ್ದಾರೆ.  ಹಾಗಾಗಿ ಅಮೆರಿಕದಲ್ಲಿ ಪುನರ್ ವಸತಿ ಕಲ್ಪಿಸಬೇಕು ಎಂಬ  ನಿರ್ಣಯ ತೆಗೆದುಕೊಳ್ಳಲಾಗಿದೆ. 

ಜಾತಿ ನಿಂದನೆ, ಸುಸೈಡ್ ಬಾಂಬಿಂಗ್  ಸೇರಿ ಸಮಾಜಘಾತಕ ಶಕ್ತಿಗಳು ಈ ಸಮುದಾಯವನ್ನು ಕಾಡುತ್ತಿದೆ. ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಇಟ್ಟುಕೊಳ್ಳಲು ಶ್ರಮಿಸಬೇಕಾಗಿದೆ ಎಂದು ಅಮೆರಿಕದ ಕಾಂಗ್ರೆಸ್ ಹೇಳಿದೆ.