ದೆಹಲಿ(ಡಿ.01): ಭಾರತದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಆರೋಗ್ಯ ಸೇವೆ ಲಭ್ಯವಾಗುತ್ತಿದೆ. ದೆಹಲಿಯ ಸಿಖ್ ಗುರುದ್ವಾರ ಸಾಹೀಬ್ ಬಂಗ್ಲಾ ಮಂದಿರ ಆಸ್ಪತ್ರೆ ಕಡಿಮೆ ದರದಲ್ಲಿ ಆರೋಗ್ಯ ಸೇವೆಯನ್ನು ಸಾಕಾರಗೊಳಿಸುತ್ತಿದೆ. ಕೇವಲ 50 ರೂಪಾಯಿಗೆ MRI ಸ್ಕಾನ್ ಲಭ್ಯವಿದೆ. ಈ ಕುರಿತು ದೆಹಲಿ ಸಿಖ್ ಗುರುದ್ವಾರ ಆಡಳಿತ ಸಮಿತಿ(DSGMC) ಹೇಳಿದೆ.

 

ಗ್ಯಾಸ್ಟ್ರಿಕ್ ಅಂತ ನೆಗ್ಲೆಕ್ಟ್ ಮಾಡ್ಬೇಡಿ, ಅದು ಹಾರ್ಟ್ ಅಟ್ಯಾಕ್ ಆಗಿರಬಹುದು!

ಗುರುದ್ವಾರ ಆವರಣದಲ್ಲಿರುವ ಹರಿಕೃಷ್ಣ ಆಸ್ಪತ್ರೆ ಇದೀಗ ಕಡಿಮೆ ದರದಲ್ಲಿ ಆರೋಗ್ಯ ಸೇವೆ ನೀಡುತ್ತಿದೆ. ಈ ತಿಂಗಳಿನಿಂದ(ಡಿಸೆಂಬರ್ 01)  MRI ಸ್ಕಾನ್ ಸೇವೆ ಲಭ್ಯವಿದೆ. ಇನ್ನು ಮುಂದಿನ ವಾರದಿಂದ ಕೇವಲ 600 ರೂಪಾಯಿಗೆ ಡಯಾಲಿಸ್ ಕೂಡ ಲಭ್ಯವಿದೆ. ಇತ್ತೀಚೆಗೆ ಗುರುದ್ವಾರ ಮಂದಿರದ ಆಸ್ಪತ್ರೆಗೆ 6 ಕೋಟಿ ಮೌಲ್ಯದ ಉಪಕರಣಗಳನ್ನು ದಾನ ನೀಡಿದ್ದರು.

ಕಡು ಬಡತನ ಸೇರಿದಂತೆ ಆರ್ಥಿಕ ಸಾಮರ್ಥ್ಯವಿಲ್ಲದವರಿಗೆ 50 ರೂಪಾಯಿಯಲ್ಲಿ  MRI ಸ್ಕಾನ್ ಸೇವೆ ನೀಡಲಾಗುತ್ತಿದೆ. ಇನ್ನು ಇತರರಿಗೆ 800 ರೂಪಾಯಿಯಲ್ಲಿ  MRI ಸ್ಕಾನ್ ನೀಡಲಾಗುವುದು ಎಂದು ಆಡಳಿತ ಮಂಡಳಿ ಹೇಳಿದೆ. X ray, ಅಲ್ಟ್ರಾಸೌಂಡ್ ಸೇವೆಗಳು ಕೇವಲ 150 ರೂಪಾಯಿಗೆ ಲಭ್ಯವಾಗಲಿದೆ.

ಇತರೆಡೆ  MRI ಸ್ಕಾನ್ ಬೆಲೆ ಕನಿಷ್ಠ 2,500 ರೂಪಾಯಿ ಇದೆ. ಆದರೆ ಗುರುದ್ವಾರ ಮಂದಿರ ಇದೀಗ ಅತೀ ಕಡಿಮೆ ಬೆಲೆಯಲ್ಲಿ ಆರೋಗ್ಯ ಸೇವೆ ನೀಡೋ ಮೂಲಕ ದೇಶಕ್ಕೆ ಮಾದರಿಯಾಗಿದೆ.