ಹಮಾಸ್ ವಿರುದ್ಧ ಸಮರ ಸಾರಿರುವ ಇಸ್ರೇಲ್‌ಗೆ 1 ವರ್ಷದಲ್ಲಿ ಅಮೇರಿಕಾ ಕೊಟ್ಟಿದ್ದು ಎಷ್ಟು ಕೋಟಿ

ಇಸ್ರೇಲ್‌-ಹಮಾಸ್‌ ನಡುವಿನ ಯುದ್ಧದ ವರ್ಷಾಚರಣೆ ದಿನವಾದ ಸೋಮವಾರ ಇಸ್ರೇಲ್‌-ಹಮಾಸ್‌ ಹಾಗೂ ಹಿಜ್ಬುಲ್ಲಾ ಉಗ್ರರ ನಡುವೆ ಭಾರಿ ಕಾದಾಟ ನಡೆದಿದೆ. ಈ ನಡುವೆ ಅಮೆರಿಕ ಈ ಯುದ್ಧಕ್ಕೆ ಇಸ್ರೇಲ್‌ಗೆ ಎಷ್ಟು  ನೆರವು ನೀಡಿದೆ ಎಂಬ ಮಾಹಿತಿ ಇಲ್ಲಿದೆ.

US Provides $20 Billion in Military Aid to Israel in One Year

ವಾಷಿಂಗ್ಟನ್‌: ಹಮಾಸ್‌ ಉಗ್ರರ ವಿರುದ್ಧ ಯುದ್ಧದಲ್ಲಿ ಇಸ್ರೇಲ್‌ಗೆ ಬೆಂಬಲವಾಗಿ ನಿಂತಿರುವ ಅಮೆರಿಕ, ಕಳೆದ ವರ್ಷದ ಅ.7ರಂದು ಯುದ್ಧ ಆರಂಭವಾದ ಬಳಿಕ 1.50 ಲಕ್ಷ ಕೋಟಿ ರು. ಸೇನಾ ನೆರವು ನೀಡಿದೆ. ಇದರ ಜೊತೆಗೆ ಮಧ್ಯಪ್ರಾಚ್ಯ ವಲಯದಲ್ಲಿನ ತನ್ನ ಸೇನೆ ಮಾಡಿರುವ 40000 ಕೋಟಿ ರು.ವೆಚ್ಚವನ್ನೂ ಸೇರಿಸಿದರೆ ಅಮೆರಿಕದ ವೆಚ್ಚ ಅಂದಾಜು 2 ಲಕ್ಷ ಕೋಟಿ ರು.ಗೆ ತಲುಪಲಿದೆ ಎಂದು ಬ್ರೌನ್‌ ವಿವಿ ವರದಿ ತಿಳಿಸಿದೆ. ಸದ್ಯ ಮಧ್ಯಪ್ರಾಚ್ಯ ವಲಯದಲ್ಲಿ ಅಮೆರಿಕ ತನ್ನ 50000 ಯೋಧರನ್ನು ನಿಯೋಜಿಸಿದೆ.

ಒಂದು ವರ್ಷದ ಯುದ್ಧದಲ್ಲಿ ಏನೇನಾಯ್ತು

  • 1200: ಹಮಾಸ್ ದಾಳಿಗೆ ಬಲಿಯಾದ ಇಸ್ರೇಲಿಗಳು
  • 251: ಹಮಾಸ್ ಉಗ್ರರು ಒತ್ತೆ ಇಟ್ಟುಕೊಂಡವರ ಸಂಖ್ಯೆ
  • 42000: ಇಸ್ರೇಲ್ ದಾಳಿಗೆ ಬಲಿಯಾದ ಪ್ಯಾಲೆಸ್ತೀನಿಯರು
  • 10000: ಮೃತ ಮಕ್ಕಳ ಸಂಖ್ಯೆ
  • 96000: ಇಸ್ರೇಲ್ ದಾಳಿಗೆ ಗಾಯಾಳುಗಳಾದ ಪ್ಯಾಲೆಸ್ತೀನಿಯರು
  • 720: ಹಮಾಸ್ ದಾಳಿಗೆ ಬಲಿಯಾದ ಇಸ್ರೇಲಿ ಯೋಧರು
  • 9500: ರಾಕೆಟ್‌ ಗಳಿಂದ ಇಸ್ರೇಲ್ ಮೇಲೆ ದಾಳಿ
  • 19 ಲಕ್ಷ: ಇಸ್ರೇಲ್ ದಾಳಿ ಬಳಿಕ ಮನೆ ತೊರೆದ ಪ್ಯಾಲೆಸ್ತೀನಿಯರು
  • 5300: ಹಮಾಸ್ ದಾಳಿ ಹಿನ್ನೆಲೆ ಮನೆತೊರೆದ ಇಸ್ರೇಲಿಗಳು
  •  3.35: ಲಕ್ಷ ಇಸ್ರೇಲ್ ದಾಳಿಯಲ್ಲಿ ಭಾಗಶಃ, ಪೂರ್ಣ ಹಾನಿಗೊಳಗಾದ ಮನೆ ಮತ್ತು ಕಟ್ಟಡಗಳು
  • 1.55 ಲಕ್ಷ ಕೋಟಿ: ಮೊದಲ 3 ತಿಂಗಳಲ್ಲಿ ಯುದ್ಧಕ್ಕೆ ಆದ ವೆಚ್ಚ
  • ಶೇ.92: ಗಾಜಾದ ಆರೋಗ್ಯ ಮೂಲಸೌಕರ್ಯಗಳಿಗೆ ಹಾನಿ

ಯುದ್ಧದ ವರ್ಷಾಚರಣೆ ವೇಳೆ ಭಾರಿ ಕಾಳಗ: 16 ಬಲಿ

ಎಪಿ, ಬೈರೂತ್‌/ಗಾಜಾ/ಟೆಲ್ ಅವಿವ್‌: ಇಸ್ರೇಲ್‌-ಹಮಾಸ್‌ ನಡುವಿನ ಯುದ್ಧದ ವರ್ಷಾಚರಣೆ ದಿನವಾದ ಸೋಮವಾರ ಇಸ್ರೇಲ್‌-ಹಮಾಸ್‌ ಹಾಗೂ ಹಿಜ್ಬುಲ್ಲಾ ಉಗ್ರರ ನಡುವೆ ಭಾರಿ ಕಾದಾಟ ನಡೆದಿದೆ. ಭಾನುವಾರ ತಡರಾತ್ರಿ ಹಾಗೂ ಸೋಮವಾರ ಉಭಯ ಬಣಗಳು ಪರಸ್ಪರ ದೊಡ್ಡ ವಾಯುದಾಳಿ ಮಾಡಿಕೊಂಡಿದ್ದು, ಸುಮಾರು 16 ಜನ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಇನ್ನೂ ಏರುವ ಸಂಭವವಿದೆ. ಇಸ್ರೇಲ್‌ ದಾಳಿಗೆ ತತ್ತರಿಸಿರುವ ಲೆಬನಾನಿ ನಿವಾಸಿಗಳು ಇದನ್ನು 'ಇದು ಭಯದ ರಾತ್ರಿ' ಎಂದು ಕರೆದಿದ್ದಾರೆ. ಇಸ್ರೇಲ್‌-ಹಮಾಸ್‌ ನಡುವೆ ಕಳೆದ ವರ್ಷ ಅ.7ರಂದು ಕದನ ಆರಂಭವಾಗಿತ್ತು. ಅದು ಈವರೆಗೂ 50 ಸಾವಿರ ಜನರ ಬಲಿಪಡೆದಿದೆ. ಇದರ ಬೆನ್ನಲ್ಲೇ ಹಮಾಸ್‌ ಬೆಂಬಲಿಗರಾದ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್‌ ಬೆಂಕಿಯ ಮಳೆಗರೆಯುತ್ತಿದೆ. ಇದು ಈವರೆಗೆ 1400 ಜನರ ಸಾವಿಗೆ ಕಾರಣವಾಗಿದೆ ಹಾಗೂ 12 ಲಕ್ಷ ಜನ ಮನೆ ಕಳೆದುಕೊಂಡು ನಿರ್ವಸಿತರಾಗಿದ್ದಾರೆ.

ಇಸ್ರೇಲ್‌ನಿಂದ ಹಿಜ್ಬುಲ್ಲಾ ಕಮಾಂಡರ್‌ ಹತ್ಯೆ: ಪೇಜರ್‌, ವಾಕಿಟಾಕಿಗಳಿಗೆ ಎಮಿರೇಟ್ಸ್‌ ಏರ್‌ಲೈನ್ಸ್‌ ನಿಷೇಧ

ಇಸ್ರೇಲ್‌ ದಾಳಿಗೆ 16 ಬಲಿ:
ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲಿ ವೈಮಾನಿಕ ದಾಳಿಯಲ್ಲಿ 9 ಜನರು ಸಾವನ್ನಪ್ಪಿದ್ದಾರೆ. ಬರಾಚಿತ್ ಪಟ್ಟಣದಲ್ಲಿ ಇಸ್ಲಾಮಿಕ್ ಹೆಲ್ತ್ ಅಥಾರಿಟಿಗೆ ಸಂಬಂಧಿಸಿದ ಅಗ್ನಿಶಾಮಕ ಠಾಣೆ ಕಟ್ಟಡಕ್ಕೆ ಯುದ್ಧವಿಮಾನಗಳು ಬಾಂಬ್‌ ಮಳೆಗರೆದಿವೆ. ಈ ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಬೈರೂತ್‌ ಬಳಿಯ ಖಮಾತಿಯೆ ಎಂಬ ಪಟ್ಣಣದ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ 6 ಮಂದಿ ಬಲಿಯಾಗಿದ್ದಾರೆ. ಇದೇ ವೇಳೆ, ಪ್ಯಾಲೆಸ್ತೀನ್‌ನ ಜೆರುಸಲೆಮ್‌ನಲ್ಲಿರುವ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲಿ ಸೈನಿಕರು ಭೂ ಆಕ್ರಮಣ ಮಾಡಿದ್ದು, 12 ವರ್ಷದ ಬಾಲಕನೊಬ್ಬನನ್ನು ಗುಂಡಿಕ್ಕಿ ಸಾಯಿಸಿದ್ದಾರೆ. 7 ಮಕ್ಕಳು ಗಾಯಗೊಂಡಿದ್ದು ಮತ್ತು ಶಿಬಿರದಲ್ಲಿದ್ದ ಹಮಾಸ್‌ ಉಗ್ರರನ್ನು ಬಂಧಿಸಲಾಗಿದೆ.

ಇಸ್ರೇಲ್‌- ಹಮಾಸ್‌ ಸಮರಕ್ಕೆ ವರ್ಷ: ಇದುವರೆಗೆ 42,000 ಪ್ಯಾಲೇಸ್ತೀನಿಯರು ಬಲಿ

ಹಿಜ್ಬುಲ್ಲಾ, ಹಮಾಸ್‌ ಭಾರಿ ಪ್ರತಿದಾಳಿ:
ಇಸ್ರೇಲ್‌ ವಿರುದ್ಧ ಸಿಟ್ಟಿನಿಂದ ಕುದಿಯುತ್ತಿರುವ ಹಿಜ್ಬುಲ್ಲಾ ಉಗ್ರರು ಇಸ್ರೇಲ್‌ನ ಹಾಫಿಯಾ ಪಟ್ಟಣದ ಮೇಲೆ ಕ್ಷಿಪಣಿ ದಾಳಿ ಮಾಡಿದ್ದಾರೆ. ಇದರಲ್ಲಿ 10 ಮಂದಿಗೆ ಗಾಯವಾಗಿದೆ. ಇನ್ನೊಂದು ಕಡೆ ಗಾಜಾ ಪಟ್ಟಿಯಿಂದ ಹಮಾಸ್‌ ಉಗ್ರರ ನೂರಾರು ಕ್ಷಿಪಣಿಗಳನ್ನು ಇರಾನ್‌ ಮೇಲೆ ಹಾರಿಸಿದ್ದಾರೆ. ಅಲ್ಲದೆ, ತಾವು ಮಣಿಯುವ ಪ್ರಶ್ನೆಯೇ ಇಲ್ಲ ಎಂದಿರುವ ಹಮಾಸ್‌ ಹಾರಿಸಿದ ಕ್ಷಿಪಣಿಗಳಿಂದ ಇಡೀ ದಿನ ಮೇಲಿಂದ ಮೇಲೆ ಇಸ್ರೇಲ್‌ನಲ್ಲಿ ಸೈರನ್‌ಗಳು ಮೊಳಗಿವೆ. ಕ್ಷಿಪಣಿ ದಾಳಿಯಿಂದ ಪಾರಾಗಲು ಇಸ್ರೇಲಿ ಜನ ಬಹುತೇಕ ಇಡೀ ದಿನ ಬಂಕರ್‌ನಲ್ಲಿ ಅವಿತುಕೊಂಡರು. ಇದೇ ವೇಳೆ, ಇಸ್ರೇಲ್‌ನ ಹಲವು ಕಡೆ ಹಮಾಸ್‌ ದಾಳಿಗೆ ಬಲಿಯಾದ 1300 ಜನರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರದ್ಧಾಂಜಲಿ ಸಭೆ ವೇಳೆಯೂ ಇಸ್ರೇಲ್‌ ಮೇಲೆ ಗಾಜಾದಿಂದ ಕ್ಷಿಪಣಿಗಳು ಹಾರಿದವು.

Latest Videos
Follow Us:
Download App:
  • android
  • ios