ಇಸ್ರೇಲ್‌ನಿಂದ ಹಿಜ್ಬುಲ್ಲಾ ಕಮಾಂಡರ್ ಹತ್ಯೆ: ಪೇಜರ್, ವಾಕಿಟಾಕಿಗಳಿಗೆ ಎಮಿರೇಟ್ಸ್ ಏರ್‌ಲೈನ್ಸ್ ನಿಷೇಧ
ಇತ್ತೀಚೆಗೆ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರ ಬಳಿ ಇದ್ದ ಪೇಜರ್ ಹಾಗೂ ವಾಕಿಟಾಕಿಗಳು ಒಮ್ಮೆಲೆ ಸ್ಫೋಟಗೊಂಡ ಹಿನ್ನೆಲೆಯಲ್ಲಿ ದುಬೈನ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ತನ್ನ ವಿಮಾನಗಳಲ್ಲಿ ಪೇಜರ್ ಹಾಗೂ ವಾಕಿಟಾಕಿಗಳಿಗೆ ನಿಷೇಧ ಹೇರಿದೆ.
ನವದೆಹಲಿ: ಇತ್ತೀಚೆಗೆ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರ ಬಳಿ ಇದ್ದ ಪೇಜರ್ ಹಾಗೂ ವಾಕಿಟಾಕಿಗಳು ಒಮ್ಮೆಲೆ ಸ್ಫೋಟಗೊಂಡ ಹಿನ್ನೆಲೆಯಲ್ಲಿ ದುಬೈನ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ತನ್ನ ವಿಮಾನಗಳಲ್ಲಿ ಪೇಜರ್ ಹಾಗೂ ವಾಕಿಟಾಕಿಗಳಿಗೆ ನಿಷೇಧ ಹೇರಿದೆ. ದುಬೈನಿಂದ ಬೇರೆ ಕಡೆ ಅಥವಾ ಬೇರೆ ಕಡೆಯಿಂದ ದುಬೈ ಹಾಗೂ ಬೇರೊಂದು ಪ್ರದೇಶದಿಂದ ದುಬೈ ಮೂಲಕ ಹಾದು ಹೋಗುವ ಪ್ರಯಾಣಿಕರ ಲಗೇಜಗಳನ್ನು ಸೂಕ್ಷವಾಗಿ ಪರಿಶೀಲಿಸಲಾಗುತ್ತದೆ. ಈ ವೇಳೆ ನಿಷೇಧಿತ ವಸ್ತು (ಪೇಜರ್, ವಾಕಿಟಾಕಿ) ಏನಾದರೂ ಕಂಡುಬಂದರೆ ಅದನ್ನು ದುಬೈ ಪೊಲೀಸರು ವಶಕ್ಕೆ ನೀಡಲಾಗುತ್ತದೆ ಎಂದು ತಿಳಿಸಿದೆ.
ಇಸ್ರೇಲ್‌ನಿಂದ ಹಿಜ್ಬುಲ್ಲಾ ಕಮಾಂಡರ್ ಹದೇರ್ ಅಲಿ ಹತ್ಯೆ
ಟೆಲ್ ಅವಿವ್: ಹಿಜ್ಬುಲ್ಲಾ ಉಗ್ರ ನಾಯಕರ ಸದೆಬಡಿಯುವ ಕೆಲಸವನ್ನು ತೀವ್ರಗೊಳಿಸಿರುವ ಇಸ್ರೇಲಿ ಸೇನೆ, ಹಿಜ್ಬುಲ್ಲಾ ಉಗ್ರರ ಕಫರ್‌ಕೆಲಾ ಕಂಪನಿ ಕಮಾಂಡರ್ ಹದೆರ್ ಅಲಿ ತವೀಲ್‌ನನ್ನು ಹತ್ಯೆಗೈದಿದೆ. ಕಳೆದ ವಾರ ಖಚಿತ ಮಾಹಿತಿ ಆಧರಿಸಿ ನಡೆಸಿದ ದಾಳಿಯಲ್ಲಿ ಹದೆರ್ ಅಲಿ ಮತ್ತು ಹಸನ್ ಎಲ್ ರಶೀನಿ ಎಂಬಿಬ್ಬರು ಉಗ್ರ ನಾಯಕರನ್ನು ಹತ್ಯೆಗೈಯಲಾಗಿದೆ. ಈ ಪೈಕಿ ತವೀಲ್, ಕಳೆದ ಜನವರಿ ತಿಂಗಳಲ್ಲಿ ಉತ್ತರ ಇಸ್ರೇಲ್ ಮೇಲೆ ನಡೆಸಲಾದ ಕ್ಷಿಪಣಿ ಮತ್ತು ರಾಕೆಟ್ ದಾಳಿಗಳ ರೂವಾರಿಯಾಗಿದ್ದ. ಜ.14ರಂದು ನಡೆದಿದ್ದ 1 ದಾಳಿಯಲ್ಲಿ ಇಬ್ಬರು ಇಸ್ರೇಲಿಗಳು ಹತ್ಯೆ ಆಗಿದ್ದರು ಎಂದು ಇಸ್ರೇಲಿ ಸೇನೆ ಹೇಳಿಕೊಂಡಿದೆ.
ಇಸ್ರೇಲ್- ಹಮಾಸ್ ಸಮರಕ್ಕೆ ವರ್ಷ: ಇದುವರೆಗೆ 42,000 ಪ್ಯಾಲೇಸ್ತೀನಿಯರು ಬಲಿ
ಅಗತ್ಯ ಬಿದ್ದರೆ ಇಸ್ರೇಲ್ ಮೇಲೆ ದಾಳಿ: ಮತ್ತೆ ಖಮೇನಿ ಬೆದರಿಕೆ
ತೆಹ್ರಾನ್: ಅಗತ್ಯ ಬಿದ್ದರೆ ಮತ್ತೆ ಇಸ್ರೇಲ್ ಮೇಲೆ ದಾಳಿ ಮಾಡಲು ಇರಾನ್ ಸಿದ್ಧ ಎಂದು ಇರಾನ್ ಪರಮೋಚ್ಚ ನಾಯಕ ಅಯತೋಲ್ಲಾ ಅಲಿ ಖಮೇನಿ ಭಾನುವಾರ ಎಚ್ಚರಿಸಿದ್ದಾರೆ. ಈ ಬಗ್ಗೆ ಟ್ವೀಟ್‌ಗಳನ್ನು ಮಾಡಿರುವ ಅವರು ಅಮೆರಿಕ ಹಾಗೂ ಇಸ್ರೇಲ್‌ಗೆ ಬೆಂಬಲ ನೀಡುತ್ತಿರುವ ಮುಸ್ಲಿಂ ದೇಶಗಳ ಮೇಲೂ ದಾಳಿಯ ಅಗತ್ಯವಿದೆ ಎಂಬರ್ಥದ ಮಾರ್ಮಿಕ ಟ್ವೀಟ್‌ಗಳನ್ನು ಮಾಡಿದ್ದಾರೆ. ಶುಕ್ರವಾರದ ಪ್ರಾರ್ಥನೆ ವೇಳೆಯೂ ಇದೇ ರೀತಿಯ ಎಚ್ಚರಿಕೆಯನ್ನು ಅವರು ಇಸ್ರೇಲ್‌ಗೆ ನೀಡಿದ್ದರು.
ಯುದ್ಧ ಭೀತಿ: ಇರಾನ್‌ನಲ್ಲಿರುವ ಕಾಶ್ಮೀರದ ವಿದ್ಯಾರ್ಥಿಗಳ ಕುಟುಂಬದಲ್ಲಿ ಆತಂಕ
ಶ್ರೀನಗರ: ಮಧ್ಯ ಪ್ರಾಚ್ಯದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಇರಾನ್‌ನಲ್ಲಿಯೂ ಯುದ್ಧಭೀತಿ ಸೃಷ್ಟಿಸಿದೆ. ಇದರಿಂದಾಗಿ ಇರಾನ್‌ಲ್ಲಿ ವ್ಯಾಸಂಗ ನಡೆಸುತ್ತಿರುವ ಕಾಶ್ಮೀರದ ನೂರಾರು ವಿದ್ಯಾರ್ಥಿಗಳ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಇರಾನ್‌ನಲ್ಲಿ ವೈದ್ಯಕೀಯ ಕೋರ್ಸ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಶುಲ್ಕ ಕಡಿಮೆ. ಹೀಗಾಗಿ ಕಾಶ್ಮೀರ ಮೂಲದ ನೂರಾರು ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದಾರೆ. ಈ ನಡುವೆ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಸಂಘರ್ಷ ಇದೀಗ ಇರಾನ್ ಮತ್ತು ಇಸ್ರೇಲ್ ನಡುವೆ ಕದನಕ್ಕೆ ಕಾರಣವಾಗಿರುವುದು ಹೆತ್ತವರಿಗೆ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಭೀತಿ ಹೆಚ್ಚಾಗಲು ಕಾರಣವಾಗಿದೆ.
ಮಧ್ಯಪ್ರಾಚ್ಯ ಸಂಘರ್ಷ ಮತ್ತಷ್ಟು ತಾರಕಕ್ಕೇರುವ ಸುಳಿವು: ಇಸ್ರೇಲ್ ಹೆಚ್ಚು ದಿನ ಇರಲ್ಲ, ಇರಾನ್ ಬಹಿರಂಗ ಘೋಷಣೆ