ವರ್ಜೀನಿಯಾ(ನ.04) ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಮತದಾದ ಬಿರುಸುಗೊಂಡಿದೆ. ಕೊರೋನಾ ಇದ್ದರೂ ಹಿಂದೆಂದಿಗಿಂತಲೂ ಉತ್ಸಾಹ ಮತದಾರರಲ್ಲಿ ಕಂಡುಬರುತ್ತಿದೆ.

ವರ್ಜೀನಿಯಾದಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸಿದ ಪ್ರಸ್ತುತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ಜನತೆ ರಿಪಬ್ಲಿಕನ್ ಪಕ್ಷದ ಜತೆ ನಿಲ್ಲಲಿದ್ದಾರೆ ಎಂದಿದ್ದಾರೆ.

ಟ್ರಂಪ್ ಅಧ್ಯಕ್ಷಗಿರಿ ಬಲಿ ಪಡೆದುಕೊಳ್ಳುತ್ತಾ ಕೊರೋನಾ?

ಅಧ್ಯಕ್ಷೀಯ ಚುನಾವಣೆಗೆ ಮತದಾನ ಆರಂಭವಾಗಿದೆ. ಕೊರೋನಾ ಆತಂಕದ ನಡುವೆಯೂ ಮತದಾನ ಪ್ರಗತಿಯಲ್ಲಿದೆ.   ಗೆಲ್ಲುವುದು ಬಹಳ ಸುಲಭ, ಆದರೆ ಸೋಲು ಯಾವಾಗಲೂ ನನ್ನ ಹತ್ತಿರವೂ ಇಲ್ಲ ಎಂದು ಟ್ರಂಪ್ ಹೇಳಿದ್ದಾರೆ. 

ಆರಂಭಿಕ ಮತದಾನದಲ್ಲಿ ಸುಮಾರುರು 100 ಮಿಲಿಯನ್ ಅಮೆರಿಕನ್ ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.  ಈ ಬಾರಿ ಒಟ್ಟು 239 ಮಿಲಿಯನ್ ಅಮೆರಿಕನ್ನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ.