ಕೊರೋನಾ ಪರೀಕ್ಷೆ ವಿಚಾರದಲ್ಲಿ ಮೋದಿಯೇ ನಮಗೆ ಭೇಷ್ ಎಂದಿದ್ದಾರೆ: ಟ್ರಂಪ್!
ಕೊರೋನಾ ನಿಯಂತ್ರಿಸುವಲ್ಲಿ ಅಮೆರಿಕ ಕೈಗೊಂಡ ಕ್ರಮವನ್ನು ಮೋದಿ ಶ್ಲಾಘಿಸಿದ್ದಾರೆ| ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಮಾತು| ಭಾಷಣದಲ್ಲಿ ಎದುರಾಳಿ ಅಭ್ಯರ್ಥಿ ಬಿಡೆನ್ ತಿವಿದ ಟ್ರಂಪ್
ವಾಷಿಂಗ್ಟನ್(ಸೆ.14): ಕೊರೋನಾತಂಕ ಇಡೀ ವಿಶ್ವವನ್ನೇ ಕಂಗೆಡಿಸಿದೆ. ಈ ಮಹಾಮಾರಿ ಎಂಟ್ರಿ ಕೊಟ್ಟ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸರ್ಕಾರಗಳು ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿವೆ. ವೈದ್ಯಕೀಯ ಸೌಲಭ್ಯಕ್ಕ ಹೆಚ್ಚು ಒತ್ತು ನೀಡಲಗಿದ್ದು, ಸ್ವಚ್ಛತೆಗೂ ಪ್ರಾಥಮಿಕ ಪ್ರಾಮುಖ್ಯತೆ ನೀಡಿವೆ. ಇವೆಲ್ಲದರೊಂದಿಗೆ ಕೊರೋನಾ ಪರೀಕ್ಷೆಯನ್ನೂ ಹೆಚ್ಚಿಸಿವೆ. ಈ ಮೂಲಕ ಸೋಂಕಿರನ್ನು ಶೀಘ್ರವಾಗಿ ಪತ್ತೆ ಹಚ್ಚುವ ಕಾರ್ಯವನ್ಉ ಕೈಗೊಂಡಿವೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ಪ್ರಧಾನಿ ಮೋದಿ ಅಮೆರಿಕದಲ್ಲಿ ಕೈಗೊಳ್ಳಲಾದ ಕೊರೋನಾ ಟೆಸ್ಟಿಂಗ್ ವಿಚಾರವಾಗಿ ಶ್ಲಾಘಿಸಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಪಾಕಿಸ್ತಾನಕ್ಕಿಂತಲೂ ಕೆಟ್ಟ ಸ್ಥಿತಿ, ಅಮೆರಿಕ ನಾಗರಿಕರು ಭಾರತಕ್ಕೆ ಹೋಗ್ಬೇಡಿ!
ಅಮೆರಿಕದಲ್ಲಿ ಕೊರೋನಾತಂಕ ನಡುವೆ ಚುನಾವಣೆಗ ಭರದ ಸಿದ್ಧತೆ ನಡೆಸಿದ್ದು, ಇಡೀ ವಿಶ್ವದ ಗಮನ ದೊಡ್ಡಣ್ಣನ ಮೇಲಿದೆ. ಹೀಗಿರುವಾಗ ಚುನಾವಣಾ ಪ್ರಚಾರದಲ್ಲಿ ಮಾತಾಡಿದ ಟ್ರಂಪ್, ಕೊರೋನಾ ನಿಯಂತ್ರಣ ವಿಚಾರದಲ್ಲಿ ಮೋದಿ ನನ್ನ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ. ಈ ಹಿಂದಿನ ಸರ್ಕಾರವೂ ತನ್ನ ಅಧಿಕಾರಲ್ಲಿದ್ದಾಗ ಎಚ್1ಎನ್1 ಕಾಣಿಸಿಕೊಂಡಿತ್ತು. ಆದರೆ ಆ ಸರ್ಕಾರ ಇದನ್ನು ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಈಗ ಅಂತಹುದೇ ಮತ್ತೊಂದು ಮಾರಕ ರೋಗ ಕೊರೋನಾ ವೈರಸ್ ಕಾಣಿಸಿಕೊಂಡಿದೆ. ಇದನ್ನು ಸಂಪೂರ್ಣ ನಿಯಂತ್ರಣ ಮಾಡುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ ಎಂದಿದ್ದಾರೆ.
ಈ ಮೂಲಕ ಡೆಮಾಕ್ರಟಿಕ್ ಪಕ್ಷದ ತಮ್ಮ ಎದುರಾಳಿ ಜೋ ಬಿಡೆನ್ ವಿರುದ್ಧ ಟೀಕಾ ಪ್ರಹಾರ ನಡೆಸಿ ಟ್ರಂಪ್ ತನ್ನ ಸರ್ಕಾರದ ಸಾಧನೆಯನ್ನ ಜನರ ಮುಂದೆ ಬಿಚ್ಚಿಟ್ಟಿದ್ದಾರೆ.
ಅಮೆರಿಕ ಕಾನ್ಸಲ್ ಜನರಲ್ ಆಗಿ ಜ್ಯುಡಿತ್ ರೇವಿನ್ ಅಧಿಕಾರ ಸ್ವೀಕಾರ
ಇಷ್ಟೇ ಅಲ್ಲದೇ ಭಾರತಕ್ಕಿಂತಲೂ ಹೆಚ್ಚು ಕೊರೋನಾ ಕೇಸುಗಳ ಪರೀಕ್ಷೆ ಮಾಡಿದ್ದೇವೆ. ವಿಶ್ವದ ಎಲ್ಲಾ ದೊಡ್ಡ ದೇಶಗಳು ಮಾಡಿರುವುದಕ್ಕಿಂತಲೂ ಹೆಚ್ಚು ಜನರಿಗೆ ಕೊರೋನಾ ಟೆಸ್ಟ್ ಮಾಡಿದ್ದೇವೆ. ಕೊರೋನಾ ವೈರಸ್ ಪರೀಕ್ಷೆಯಲ್ಲಿ ಅಮೆರಿಕಾದ ನಂತರ ಭಾರತ ಎರಡನೇ ಸ್ಥಾನದಲ್ಲಿದೆ. ನಾವು ಭಾರತಕ್ಕಿಂತ 44 ಮಿಲಿಯನ್ ಪರೀಕ್ಷೆಗಳ ಮುಂದೆ ಇದ್ದೇವೆ ಎಂದೂ ಟ್ರಂಪ್ ಹೇಳಿದ್ದಾರೆ.
ಭಾರತ 1.5 ಬಿಲಿಯನ್ ಜನರಿಗೆ ಕೊರೋನಾ ಪರೀಕ್ಷೆ ಮಾಡಿದೆ. ಈ ವಿಚಾರ ಗೊತ್ತಾದ ಕೂಡಲೇ ಭಾರತದ ಪ್ರಧಾನಿ ನರೇಂದ್ರ ಮೋದಿಯವರೇ ಕೊರೋನಾ ಪರೀಕ್ಷೆಯಲ್ಲಿ ನೀವು ಅದ್ಭುತ ಕೆಲಸ ಮಾಡಿದ್ದೀರಿ ಎಂದು ಕರೆ ಮಾಡಿ ಹೇಳಿದರು ಎಂದರು.