ಅಮೆರಿಕದ ಪ್ರಥಮ ಮಹಿಳೆ ಜಿಲ್‌ ಬೈಡೆನ್‌ ಕಾಲೇಜು ಶಿಕ್ಷಕಿಯಾಗಿ ಬೋಧನಾ ವೃತ್ತಿಗೆ ಮರಳಿದ್ದಾರೆ ಬಿಲ್‌ ಬೈಡೆನ್‌ 2009ರಿಂದಲೂ ನಾರ್ಥನ್‌ ವರ್ಜಿನಿಯಾ ಕಮ್ಯುನಿಟಿ ಕಾಲೇಜಿನಲ್ಲಿ ಶಿಕ್ಷಕಿ

ವಾಷಿಂಗ್ಟನ್‌ (ಸೆ.08): ಅಮೆರಿಕದ ಪ್ರಥಮ ಮಹಿಳೆ ಜಿಲ್‌ ಬೈಡೆನ್‌ ಕಾಲೇಜು ಶಿಕ್ಷಕಿಯಾಗಿ ಬೋಧನಾ ವೃತ್ತಿಗೆ ಮರಳಿದ್ದಾರೆ. ಬಿಲ್‌ ಬೈಡೆನ್‌ 2009ರಿಂದಲೂ ನಾರ್ಥನ್‌ ವರ್ಜಿನಿಯಾ ಕಮ್ಯುನಿಟಿ ಕಾಲೇಜಿನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 ಅಮೆರಿಕದ ಪ್ರಥಮ ಮಹಿಳೆ ಆಗಿದ್ದರೂ ಕೂಡ ತಮ್ಮ ವೃತ್ತಿಗೆ ರಾಜೀನಾಮೆ ನೀಡದೇ ಎರಡೂ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ. ಕೊರೋನಾ ಕಾರಣದಿಂದಾಗಿ ಆನ್‌ಲೈನ್‌ ಮೂಲಕ ತರಗತಿಗಳು ನಡೆಸಯುತ್ತಿದ್ದ ಕಾರಣ ಶ್ವೇತಭವನದಿಂದಲೇ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. 

ಆಫ್ಘನ್‌ ತಾಲಿಬಾನ್‌ ವಶದ ಹಿಂದೆ ಪಾಕಿಸ್ತಾನ ಕೈವಾಡ: ಬಯಲಾಯ್ತು ಸಂಚು!

ಇದೀಗ ಕಾಲೇಜುಗಳು ಭೌತಿಕ ತರಗತಿಗಳು ಪುನಾರಂಭಗೊಂಡಿವೆ. ಈ ಹಿನ್ನೆಲೆಯಲ್ಲಿ ಬಿಲ್‌ ಬೈಡೆನ್‌ ಕಾಲೇಜಿಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಮಂಗಳವಾರದಿಂದ ಪಾಠ ಮಾಡಲು ಆರಂಭಿಸಿದ್ದಾರೆ.