Asianet Suvarna News Asianet Suvarna News

ನಾಯಿ ನೋಡಿಕೊಳ್ಳುವ ಈತನ ಸಂಪಾದನೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ?

ಈಗ ಅಮೆರಿಕಾದ ವ್ಯಕ್ತಿಯೊಬ್ಬರು ನಾಯಿಗಳನ್ನು ನೋಡಿಕೊಳ್ಳುವ ಡಾಗ್ ವಾಕರ್ ಕೆಲಸ ಮಾಡುತ್ತಾ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿದ್ದಾರೆ.

US man Michael Joseph left teaching job and started to working as dog walker makes crore a year akb
Author
First Published Jan 27, 2023, 7:53 PM IST

ನ್ಯೂಯಾರ್ಕ್‌: ಪ್ರಪಂಚದಲ್ಲಿ ವಿಭಿನ್ನವೆನಿಸುವ ಸಾವಿರಾರು ಕೆಲಸಗಳಿವೆ. ಇತ್ತೀಚೆಗೆ ಹಣ ಸಂಪಾದನೆ ಮಾಡುವುದಕ್ಕೆ ವಿಭಿನ್ನವಾದ ಹಲವು ಸೃಜನಾತ್ಮಕ ಮಾರ್ಗಗಳಿವೆ. ಐಟಿ ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವವರನ್ನು ಸರಿಗಟ್ಟುವಷ್ಟೇ ಸಂಪಾದನೆಯನ್ನು ಕೆಲವು ಡಿಜಿಟಲ್ ಕ್ರಿಯೇಟರ್‌ಗಳು ಗಳಿಸುತ್ತಿದ್ದಾರೆ. ಕುಣಿದು ಡಾನ್ಸ್ ಮಾಡಿ ಹರಟೆ ಹೊಡೆಯುವದರಿಂದಲೂ ಹಣ ಸಂಪಾದನೆ ಮಾಡಬಹುದು. ನಮ್ಮಲ್ಲಿ  ವಿಭಿನ್ನವಾದ ಜನ ಮೆಚ್ಚುವ ಪ್ರತಿಭೆ ಪರಿಶ್ರಮ ಇದ್ದರೆ ಸಾಕು ಪ್ರಪಂಚ ಪರ್ಯಟನೆ ಮಾಡುವ ಮೂಲಕವೂ  ಹಣ ಸಂಪಾದನೆ ಮಾಡಬಹುದು ಎಂಬುದನ್ನು ನಮ್ಮ ಕನ್ನಡದ ಡಾ. ಬ್ರೋ ತೊರಿಸಿಕೊಟ್ಟಿದ್ದಾರೆ.  ಹಾಗೆಯೇ ಈಗ ಅಮೆರಿಕಾದ ವ್ಯಕ್ತಿಯೊಬ್ಬರು ನಾಯಿಗಳನ್ನು ನೋಡಿಕೊಳ್ಳುವ ಡಾಗ್ ವಾಕರ್ ಕೆಲಸ ಮಾಡುತ್ತಾ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿದ್ದಾರೆ.

ವಿದೇಶಗಳಲ್ಲಿ ನಾಯಿ ಸಾಕುವವರ ಸಂಖ್ಯೆ ಬಹಳ ಹೆಚ್ಚಾಗಿದೆ. ಇದನ್ನೇ ಸದುಪಯೋಗ ಪಡಿಸಿಕೊಂಡ ವ್ಯಕ್ತಿಯೊಬ್ಬರು ನಾಯಿಗಳನ್ನು ನೋಡಿಕೊಳ್ಳುವ ಕೆಲಸವನ್ನು ಮಾಡಲು ಶುರು ಮಾಡಿದ್ದು, ಅದರಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ.  ಮೂಲತಃ ಪೂರ್ಣ ಪ್ರಮಾಣದ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಮಿಚೆಲ್ ಜೋಸೆಫ್ (Michael Joseph) ಎಂಬುವವರೇ ಹೀಗೆ  ನಾಯಿಗಳನ್ನು ನೋಡಿಕೊಳ್ಳುವ ಕೆಲಸ ಶುರು ಮಾಡಿ ಅದರಲ್ಲಿ ಯಶಸ್ವಿಯಾದವರು. 

ಅಮೆರಿಕಾದ ಬ್ರೂಕ್ಲಿನ್ ನಿವಾಸಿಯಾದ ಇವರು ಇದಕ್ಕೂ ಮೊದಲು ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.  ನ್ಯೂಯಾರ್ಕ್ ಪೋಸ್ಟ್ ಪ್ರಕಾರ ಅವರು  ಈ ತಮ್ಮಿಷ್ಟದ ನಾಯಿಗೆ ಬುದ್ಧಿ ಕಲಿಸುವ ಕೆಲಸದಿಂದಲೇ ಅವರು ವರ್ಷಕ್ಕೆ ಅಂದಾಜು 30 ಲಕ್ಷದಿಂದ ಒಂದು ಕೋಟಿಯವರೆಗೆ ಸಂಪಾದನೆ ಮಾಡುತ್ತಿದ್ದಾರಂತೆ.  ಇದೇ ಸಂಪಾದನೆಯಿಂದ ಅವರು ನ್ಯೂಜೆರ್ಸಿಯ (New Jersey) ಮಿಡ್ಲ್‌ಟೌನ್‌ನಲ್ಲಿ (Middletown) ಮನೆಯನ್ನು ಕೂಡ ಖರೀದಿಸಿದ್ದಾರೆ.  ಜೊತೆಗೆ ಹೊಸ ಕಾರೊಂದನ್ನು ಖರೀದಿ ಮಾಡಿರುವ ಇವರು ತಮ್ಮ 18 ತಿಂಗಳ ಮಗುವಿನ ಉನ್ನತ ಶಿಕ್ಷಣಕ್ಕಾಗಿ 8.16 ಲಕ್ಷ ರೂಪಾಯಿಯನ್ನು ಠೇವಣಿ ಇರಿಸಿದ್ದಾರೆ.  ಅಲ್ಲದೇ ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಪ್ರವಾಸಿ ಸ್ಥಳ ಡಿಸ್ನಿಲ್ಯಾಂಡ್‌ಗೆ (Disneyland) ತಮ್ಮ ಕುಟುಂಬದವರೊಂದಿಗೆ ಭೇಟಿ ನೀಡಿದ್ದಾರೆ. 

ಈ ಬಗ್ಗೆ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಜೋಸೆಫ್,  ಈ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು, ನನ್ನ ಪುಣ್ಯ ಎಂದು ಹೇಳಿದ್ದಾರೆ.  ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಇವರು ಮೊದಲಿಗೆ ತಮ್ಮ ಶಿಕ್ಷಕ ವೃತ್ತಿಯ ಜೊತೆ  ಒಂದಿಷ್ಟು ಹೆಚ್ಚಿನ ಆದಾಯ ಗಳಿಸುವುದಕ್ಕಾಗಿ 2019ರಲ್ಲಿ ಈ ಕೆಲಸ ಶುರು ಮಾಡಿದರು. ಮೊದಲಿಗೆ ಇವರು ತಮ್ಮದೇ ಶ್ವಾನದೊಂದಿಗೆ ಸಮೀಪದ ಪಾರ್ಕ್‌ಗಳಿಗೆ ಹೋಗುತ್ತಿದ್ದರು. ಇವರೊಂದಿಗೆ ಶ್ವಾನಗಳು ಬಹಳ ವಿಧೇಯರಾಗಿರುತ್ತಿದ್ದವು ಇದನ್ನು ಶ್ವಾನಗಳನ್ನು ಹೊಂದಿರುವ ಇತರರು ಕೂಡ ಗಮನಿಸಿದ್ದರು.  ಹೀಗೆ ಇವರ ಶ್ವಾನಗಳ ಆರೈಕೆ ಮಾಡುತ್ತಿದ್ದಿದ್ದನ್ನು ನೋಡಿದವರೇ  ಜೋಸೆಫ್ ಬಳಿ ತಮ್ಮ ಶ್ವಾನಗಳನ್ನು ಕೂಡ ನೋಡಿಕೊಳ್ಳಬಹುದೇ ಎಂದು ಕೇಳಿದರು. ಹೀಗೆ ಆರಂಭವಾದ ಈ ಕೆಲಸದಲ್ಲಿ ಸಂತೃಪ್ತಿಯ ಜೊತೆಗೆ ಜೋಸೆಫ್ ಅವರಿಗೆ ಒಳ್ಳೆಯ ಆದಾಯ (potential income) ಕೂಡ ಬರಲು ಶುರುವಾಯ್ತು.

ಉತ್ತಮ ಆದಾಯ ಬರುತ್ತಿದ್ದಂತೆ ಜೋಸೆಫ್ ಅವರು ತಮ್ಮ ಶಿಕ್ಷಕ ವೃತ್ತಿಯನ್ನು (teaching job) ತೊರೆದು ಇದನ್ನೇ ಪೂರ್ಣ ಪ್ರಮಾಣದ ವೃತ್ತಿಯಾಗಿಸಿಕೊಂಡರು.  ಮೊದಲ ವರ್ಷವೇ ಅವರಿಗೆ ವರ್ಷದ ಕೊನೆಗೆ 28.56 ಲಕ್ಷ ರೂಪಾಯಿ ಆದಾಯ ಬಂತು.  ತಮ್ಮ ಶ್ವಾನವನ್ನು ವಾಕ್ ಕರೆದುಕೊಂಡು ಹೋಗಿ ಶೌಚ ಮಾಡಿಸಿ ಬರುವ ಅರ್ಧಗಂಟೆಯ ಕೆಲಸಕ್ಕೆ ಇವರಿಗೆ ಇವರ ಗ್ರಾಹಕರು 20 ಡಾಲರ್ ರೂಪಾಯಿ ನೀಡುತ್ತಿದ್ದರು. ಈಗ ಅವರು ಇದನ್ನು ಉದ್ಯಮವಾಗಿಸಿದ್ದು, ಕಳೆದ ವರ್ಷ ಇವರ ಆದಾಯ ಒಂದು ಕೋಟಿ ರೂಪಾಯಿ ಸಮೀಪದಲ್ಲಿತ್ತು ಎಂದು  ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಜೋಸೆಫ್. ಕೋವಿಡ್ ಸಂಕ್ರಾಮಿಕದ ವೇಳೆ ಇದು ಕಷ್ಟ ಎಂದು ಅವರು ಭಾವಿಸಿದ್ದರಂತೆ ಆದರೆ ಸಂಸ್ಥೆಗಳೆಲ್ಲಾ ತೆರೆಯುತ್ತಿದ್ದಂತೆ ಅವರ ಉದ್ಯಮ ಮತ್ತೆ ಚಿಗಿತುಕೊಂಡಿತು ಎಂದು ಜೋಸೆಫ್ ಹೇಳಿದ್ದಾರೆ. 

Follow Us:
Download App:
  • android
  • ios