ವುಹಾನ್ ಲ್ಯಾಬ್‌ನಿಂದಲೇ ಕೊರೋನಾ ವೈರಸ್ ಸೋರಿಕೆ ಅನುಮಾನಕ್ಕೆ ಮತ್ತಷ್ಟು ಬಲ 2019ರಲ್ಲಿ ವುಹಾನ್ ಸಂಶೋಧರು ಅನಾರೋಗ್ಯ ಕಾರಣ ಆಸ್ಪತ್ರೆ ದಾಖಲು ಸಿಬ್ಬಂದಿಗಳ ವೈದ್ಯಕೀಯ ರಿಪೋರ್ಟ್ ಬಿಡುಗಡೆಗೆ ಅಮೆರಿಕ ಆಗ್ರಹ

ವಾಶಿಂಗ್ಟನ್(ಜೂ.04):  ಕೊರೋನಾ ವೈರಸ್ ವಕ್ಕರಿಸಿ ವಿಶ್ವಕ್ಕೆ ಹರಡಿದ ಬೆನ್ನಲ್ಲೇ ಅಮೆರಿಕ ಆಗಿನ ಆಧ್ಯಕ್ಷ ಡೋನಾಲ್ಡ್ ಟ್ರಂಪ್ ಇದು ವುಹಾನ್ ವೈರಸ್, ಚೀನಾ ವೈರಸ್ ಎಂದು ಧೈರ್ಯದಿಂದ ಹೇಳಿದ್ದರು. ಈ ಹೇಳಿಕೆಗೆ ಭಾರಿ ವಿರೋಧವೂ ವ್ಯಕ್ತವಾಗಿತ್ತು. ಆಕ್ಷೇಪ ವ್ಯಕ್ತಪಡಿಸಿದ ವಿಶ್ವಸಂಸ್ಥೆ ವಿರುದ್ಧ ಟ್ರಂಪ್ ತೊಡೆತಟ್ಟಿದ್ದರು. ಇದೀಗ ಕೊರೋನಾ ಚೀನಾ ಹುಟ್ಟುಹಾಕಿದ ಕೂಸು ಅನ್ನೋ ಅನುಮಾನಗಳು ಬಲಗೊಳ್ಳುತ್ತಿದೆ. ಇದೀಗ ಅಮೆರಿಕ ಸಾಂಕ್ರಾಮಿಕ ರೋಗತಜ್ಞ ಡಾ.ಅಂಥೋನಿ ಫೌಸಿ ಕೆಲ ದಾಖಲೆ ಬಿಡುಗಡೆ ಮಾಡಲು ಚೀನಾವನ್ನು ಆಗ್ರಹಿಸಿದ್ದಾರೆ.

ಚೀನಾ ಲ್ಯಾಬ್‌ನಿಂದ ಕೊರೋನ ಸ್ಫೋಟ; ಸಂಶೋಧಕರು ಆಸ್ಪತ್ರೆ ದಾಖಲಾಗಿದ್ದ ಮಾಹಿತಿ ಬಹಿರಂಗ!..

ಕೊರೋನಾ ವೈರಸ್ ಡಿಸೆಂಬರ್ ತಿಂಗಳಲ್ಲಿ ಚೀನಾದಲ್ಲಿ ಪತ್ತೆಯಯಾಗಿತ್ತು. ವುಹಾನ್ ಮಾರುಕಟ್ಟೆ ಹಾಗೂ ವುಹಾನ್ ವಲಯದಲ್ಲಿ ಹರಡಲು ಆರಂಭಗೊಂಡಿತ್ತು. ಆದರೆ ಇದಕ್ಕಿಂತ ಮೊದಲು ವುಹಾನ್ ಲ್ಯಾಬ್‌ನಲ್ಲಿನ ಸಂಶೋಧಕರು, ಸಿಬ್ಬಂದಿಗಳು ಸೇರಿದಂತೆ 9 ಮಂದಿ ಕೊರೋನಾ ಲಕ್ಷಣ ಸಂಬಂಧಿಸಿದ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿರುವ ಮಾಹಿತಿ ಹೊರಬಿದ್ದಿದೆ. ಇದೀಗ ಅಂಥೋನಿ ಫೌಸಿ, ಈ ಸಿಬ್ಬಂಧಿಗ ವೈದ್ಯಕೀಯ ದಾಖಲೆ ಬಿಡುಗಡೆ ಮಾಡುವಂತೆ ಚೀನಾ ಆಗ್ರಹಿಸಿದ್ದಾರೆ.

ಯಾವ ಅನಾರೋಗ್ಯ ವುಹಾನ್ ಸಿಬ್ಬಂದಿಗಳನ್ನು ಕಾಡಿತ್ತು. ಅವರ ಆಸ್ಪತ್ರೆಯಲ್ಲಿ ದಾಖಲಾದ ಹಾಗೂ ವೈದ್ಯಕೀ ಚಿಕಿತ್ಸೆ ದಾಖಲೆಗಳನ್ನು ಬಿಡುಗಡೆ ಮಾಡಿ ಎಂದು ಫೌಸಿ ಆಗ್ರಹಿಸಿದ್ದಾರೆ. ಅಮೆರಿಕ ಗುಪ್ತಚರ ದಾಖಲೆ ಪ್ರಕಾರ, ವುಹಾನ್ ಲ್ಯಾಬ್ ಸಂಶೋಧಕರು ಸೇರಿದಂತೆ ಸಿಬ್ಬಂಧಿಗಳು ಕೊರೋನಾ ಪ್ರಕರಣ ಪತ್ತೆಗೂ ಮೊದಲು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು ಅನ್ನೋ ಮಾಹಿತಿ ನೀಡಿದೆ. 

ಚೀನಾದಲ್ಲೇ ವೈರಸ್ ಸೃಷ್ಟಿ, ಸಿಕ್ತು ಹೊಸ ಸಾಕ್ಷ್ಯ: ತಜ್ಞರ ಸ್ಫೋಟಕ ವರದಿ!.

ಚೀನಾದ ಅಧಿಕಾರಿಗಳು ವುಹಾನ್ ಲ್ಯಾಬ್‌ನಿಂದಲೇ ಸೋರಿಕೆಯಾಗಿದೆ ಅನ್ನೋ ಮಾತನ್ನು ಅಲ್ಲಗೆಳೆಯುತ್ತಲೇ ಬಂದಿದ್ದಾರೆ. ಆದರೆ ಅಮೆರಿಕ ಗುಪ್ತಚರ ಮಾಹಿತಿ, ಅಮೆರಿಕ ತಜ್ಞ ವಿಜ್ಞಾನಿಗಳ ಮಾಹಿತಿ ಇದಕ್ಕೆ ವಿರುದ್ಧವಾಗಿದೆ. ಚೀನಾ ವುಹಾನ್ ಲ್ಯಾಬ್‌ನಲ್ಲಿ ಕೊರೋನಾ ಸೃಷ್ಟಿಸಿದೆ. ಅಥವಾ ಸೋರಿಕೆಯಾಗಿದೆ ಅನ್ನೋ ವಾದಗಳು ಬಲಗೊಳ್ಳುತ್ತಿದೆ.