ವಾಷಿಂಗ್ಟನ್(ಮೇ.30)‌: ಕೊರೋನಾ ವೈರಸ್‌ನಿಂದಾಗಿ ಚೀನಾದ ವಿರುದ್ಧ ಕೆಂಡಕಾರುತ್ತಿರುವ ಅಮೆರಿಕ, ತನ್ನ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಚೀನಾದ ಸಾವಿರಾರು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ದೇಶದಿಂದ ಹೊರಹಾಕುವ ಸಾಧ್ಯತೆ ಇದೆ.

ವ್ಯಾಪಾರ ಸಮರ, ಕೊರೋನಾ ವೈರಸ್‌, ಹಾಂಕಾಂಗ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನಾದ ನಡುವಿನ ಬಿಕ್ಕಟ್ಟು ಇನ್ನಷ್ಟುತೀವ್ರ ಸ್ವರೂಪ ಪಡೆದಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಚೀನಾಕ್ಕೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆಯೊಂದನ್ನು ಘೋಷಿಸುವುದಾಗಿ ಪ್ರಕಟಿಸಿದ್ದಾರೆ.

ಚೀನಾ ಕುತಂತ್ರಕ್ಕೆ ಉತ್ತರಿಸಲು ಅಮೆರಿಕ, ಜರ್ಮನಿ ಟ್ರಿಕ್

ಈ ಘೋಷಣೆಯಲ್ಲಿ ಚೀನಾ ವಿದ್ಯಾರ್ಥಿಗಳ ವೀಸಾ ರದ್ದುಗೊಳಿಸುವ ಬಗ್ಗೆ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ. ಅಲ್ಲದೇ ಚೀನಾದ ಅಧಿಕಾರಿಗಳಿಗೆ ಹಾಂಕಾಂಗ್‌ ವಿಷಯದಲ್ಲಿ ಹಸ್ತಕ್ಷೇಪ ಮಾಡದಂತೆ ಹಣಕಾಸು ನಿರ್ಬಂಧ ಹೇರಬಹುದು ಎನ್ನಲಾಗಿದೆ.