ನ್ಯೂಯಾರ್ಕ್(ನ. 06)  ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಗಿದು ಎರಡು ದಿನ ಕಳೆದಿದ್ದರೂ ಫಲಿತಾಂಶ ಇನ್ನು ಹೊರಗೆ ಬಂದಿಲ್ಲ. ಇದೆಲ್ಲದರ ನಡುವೆ ಮೊದಲಿನಿಂದಲೂ ಕಾನೂನು ಸಮರ ಎಂದುಕೊಂಡೇ ಬಂದಿದ್ದ ಟ್ರಂಪ್ ಎರಡು ಟ್ವೀಟ್ ಮಾಡಿದ್ದು ವಿಶ್ವದಾದ್ಯಂತ ಸುದ್ದಿ ಮಾಡುತ್ತಿದೆ.

ಬೈಡನ್ ಗೆ 264, ಟ್ರಂಪ್‌ ಗೆ  214 ಇಲ್ಲಿಯವರೆಗಿನ ಲೆಕ್ಕ. ಮ್ಯಾಜಿಕ್ ನಂಬರ್  270.  ಕೌಟಿಂಗ್ ನಡೆಯುತ್ತಲೇ ಇದೆ. ಆದರೆ ಇದೆಲ್ಲದರ ನಡುವೆ ಮತ ಎಣಿಕೆ ನಿಲ್ಲಿಸಿ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಫಲ ಕೊಡಲಿಲ್ಲ ಹೌಡಿ.. ಮೋಡಿ.. ಬೈಡನ್ ಬೆಂಬಲಕ್ಕೆ ನಿಂತ ಭಾರತೀಯರು

ಚುನಾವಣೆಯಲ್ಲಿ ಮೋಸವಾಗಿದೆ ಎಂಬುದು ಟ್ರಂಪ್ ಅವರ ಮತ್ತೊಂದು ಆರೋಪ. ಸುಪ್ರೀಂ ಮೆಟ್ಟಿಲೇರುತ್ತೇವೆ ಎಂದು ಟ್ರಂಪ್ ಘರ್ಜಿಸಿದ್ದಾರೆ.

ಒಟ್ಟಿನಲ್ಲಿ ಟ್ರಂಪ್ ಕಾನೂನು ಸಮರಕ್ಕೆ ನಿರ್ಧರಿಸುವುದರಿಂದ ಅಮೆರಿಕದ ಅಧ್ಯಕ್ಷೀಯ ಹಾಗೂ ಉಪಾಧ್ಯಕ್ಷೀಯ  ಫಲಿತಾಂಶ ಮತ್ತಷ್ಟು ವಿಳಂಬವಾಗುವುದು ಖಾತ್ರಿಯಾಗಿದೆ. ಅತ್ತ ಬೈಡನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.  ಇನ್ನೊಂದು ಕಡೆ ಟ್ವಿಟರ್ ಟ್ರಂಪ್ ಅವರ ಈ ಎರಡು ಟ್ವೀಟ್ ಗಳು ಕಾಣದಂತೆ ಮಾಡಿದೆ.