ಫ್ರೆಂಚ್ ಫ್ರೈಸ್ ಪರಿಮಳವೇ ಪ್ರೇರಣೆ... ಅಲೂಗಡ್ಡೆಯಿಂದ ಫರ್‌ಫ್ಯೂಮ್ ತಯಾರಿಸಿದ ಅಮೆರಿಕಾದ ಸಂಸ್ಥೆ
- ಅಲೂಗಡ್ಡೆಯಿಂದ ಸುಗಂಧದ್ರವ್ಯ ತಯಾರಿಸಿದ ಸಂಸ್ಥೆ
- ಅಮೆರಿಕಾದ ಇದಾಹೊ ಪೊಟಾಟೊ ಕಮಿಷನ್‌ನಿಂದ ಸೃಷ್ಠಿ
- ಫ್ರೆಂಚ್ ಫ್ರೈಸ್ ಪರಿಮಳವೇ ಪ್ರೇರಣೆ
ಫ್ರೆಂಚ್ ಫ್ರೈಸ್ ಯಾರಿಗೆ ಗೊತ್ತಿಲ್ಲ ಹೇಳಿ, ಪರಿಮಳ ಹಾಗೂ ರುಚಿಯಿಂದಾಗಿ ಬಾಯಲ್ಲಿ ನೀರು ಬರುವಂತೆ ಮಾಡುವ, ಮ್ಯಾಕ್‌ಡೊನಾಲ್ಡ್, ಕೆಎಫ್‌ಸಿ ಮುಂತಾದೆಡೆ ಸಿಗುವ ಈ ತಿನಿಸು ಎಲ್ಲರ ಅಚ್ಚುಮೆಚ್ಚಿನ ತಿನಿಸು. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರಾದಿಯವರೆಗೆ ಇದನ್ನು ಇಷ್ಟಪಡದವರಿಲ್ಲ. ಆದರೆ ಇದರಿಂದ ಸೆಂಟ್ ಅಥವಾ ಸುಗಂಧದ್ರವ್ಯ ಮಾಡಿದರೆ ಹೇಗಿರುತ್ತೆ. ತಿನಿಸಿನ ಪರಿಮಳ ಬರುವ ಸುಗಂಧದ್ರವ್ಯ ಖುಷಿ ನೀಡುತ್ತಾ ಗೊತ್ತಿಲ್ಲ. ಆದರೆ ಅಮೆರಿಕಾದ ಸುಗಂಧ ದ್ರವ್ಯ ತಯಾರಕ ಸಂಸ್ಥೆಯೊಂದು ಈ ಫ್ರೆಂಚ್ ಫ್ರೈಸ್‌ನ ಪ್ರೇರಣೆ ಪಡೆದು ಫರ್‌ಫ್ಯೂಮ್ ಅಥವಾ ಸೆಂಟ್ ಅನ್ನು ತಯಾರಿಸಿದೆ.
ಅಮೆರಿಕಾದ ಇದಾಹೊ ಪೊಟಾಟೊ ಕಮಿಷನ್ (IPC) ಎಂಬ ಸಂಸ್ಥೆಯೂ ಫ್ರೆಂಚ್ ಫ್ರೈಗಳ ವಾಸನೆಯಿಂದ ಪ್ರೇರಣೆಗೊಂಡು ಸೀಮಿತ ಆವೃತ್ತಿಯ ಸುಗಂಧವನ್ನು ತಯಾರಿಸಿ ಮಾರಾಟ ಮಾಡಿದೆ. ಇದಾಹೊ ಸಂಸ್ಥೆ ಈ ಸುಗಂಧದ್ರವ್ಯಕ್ಕೆ ಫ್ರೈಟ್ಸ್ ಎಂದು ಹೆಸರಿಟ್ಟಿದೆ. ಈ ಸುಗಂಧ ದ್ರವ್ಯವೂ ಪ್ರಸ್ತುತ ಔಟ್‌ಆಪ್ ಸ್ಟಾಕ್ (ಮಾರುಕಟ್ಟೆಯಲ್ಲಿ ದಾಸ್ತಾನು ಇಲ್ಲ)ಪಟ್ಟಿಯಲ್ಲಿ ಇದೆ ಎಂದು ತಿಳಿದು ಬಂದಿದೆ.
ಫ್ರೆಂಚ್ ಫ್ರೈಯಿಂದ ಕೋಲ್ಡ್ ಡ್ರಿಂಕಿನರೆಗೂ ಈ ಆಹಾರ ಮೆಮೊರಿ ಲಾಸ್ ಮಾಡುತ್ತೆ!
ಸುಗಂಧ ದ್ರವ್ಯ ತಯಾರಿಕೆಗೆ ಅಗತ್ಯವಾದ ತೈಲಗಳು ಮತ್ತು ಬಟ್ಟಿ ಇಳಿಸಿದ ಇಡಾಹೊ ಆಲೂಗಡ್ಡೆಗಳಿಂದ ಈ ಸುಗಂಧ ದ್ರವ್ಯವನ್ನು ತಯಾರಿಸಲಾಗಿದೆ. ಹೆಸರೇ ಹೇಳುವಂತೆ ಇಡಾಹೊ ಎಂಬ ಪ್ರದೇಶದಲ್ಲಿ ಬೆಳೆದ ಆಲೂಗಡ್ಡೆಗಳ ಅದಮ್ಯ ಸಾರವನ್ನು ಈ ಸುಗಂಧವು ಒಳಗೊಂಡಿದೆ ಎಂದು ವೆಬ್‌ಸೈಟ್‌ನಲ್ಲಿ ಈ ಹೊಸ ಉತ್ಪನ್ನದ ಬಗ್ಗೆ ಸವಿಸ್ತಾರವಾಗಿ ಹೇಳಲಾಗಿದೆ. ಈ ವಿಶಿಷ್ಟವಾದ ಸುಗಂಧ ದ್ರವ್ಯದ ಚಿತ್ರಗಳನ್ನು ಸಂಸ್ಥೆಯೂ ತನ್ನ ಅಧಿಕೃತ Instagram ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಇದಾಹೊ ಸಂಸ್ಥೆಯೂ ಹೊಸ ಸುಗಂಧ ದ್ರವ್ಯವಾದ ಫ್ರೈಟ್ಸ್ ಅನ್ನು ಪರಿಚಯಿಸುತ್ತಿದೆ, ಇದು ಫ್ರೆಂಚ್ ಫ್ರೈಗಳ ತಡೆಯಲಾಗದ ಪರಿಮಳದಿಂದ ಪ್ರೇರಿತವಾದ ಸುಗಂಧ ದ್ರವ್ಯ. ಅಗತ್ಯ ತೈಲಗಳು ಮತ್ತು ಬಟ್ಟಿ ಇಳಿಸಿದ ಇಡಾಹೊ ಆಲೂಗಡ್ಡೆಗಳ ಮಿಶ್ರಣದಿಂದ ಅನನ್ಯವಾಗಿ ರಚಿಸಲಾದ ಈ ಸುಗಂಧವು ಕಳೆದುಹೋದ ಫ್ರೈ-ಟೇಸ್ಟಿಕ್ ದಿನಗಳ ನೆನಪುಗಳನ್ನು ಆಹ್ವಾನಿಸುತ್ತದೆ. ಇದರ ಸರಬರಾಜು ಮುಗಿಯುವ ಮುನ್ನ ನಿಮ್ಮದನ್ನು ಪಡೆದುಕೊಳ್ಳಿ, ಸೀಮಿತ ಲಭ್ಯತೆ ಮಾತ್ರ ಎಂದು ಬರೆದು ಇನ್ಸ್ಟಾಗ್ರಾಮ್‌ನಲ್ಲಿ ಈ ಸುಗಂಧ ದ್ರವ್ಯದ ಫೋಟೋ ಪೋಸ್ಟ್ ಮಾಡಲಾಗಿದೆ.
Food Secrets: ಹೆಸರಿನಲ್ಲಷ್ಟೇ ಫ್ರೆಂಚ್..ಆದ್ರೆ ಇವು ಫ್ರೆಂಚ್ ಫುಡ್ ಅಲ್ಲ !
ಇದಕ್ಕೆ ನೆಟ್ಟಿಗರು ಕೂಡ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಈ ಸುಗಂಧದ್ರವ್ಯ ಸಾಸ್ ಲೋಷನ್‌ನೊಂದಿಗೆ ಬರುತ್ತದೆಯೇ? ಎಂದು ಒಬ್ಬರು ಕೇಳಿದ್ದಾರೆ. ನನ್ನ ಜೀವನದಲ್ಲಿ ನನಗೆ ಇದು ಬೇಕು. ನಾನು ಪ್ರತಿ ವಾರಾಂತ್ಯದಲ್ಲಿ ನಿಮ್ಮ ದೋಸೆ ಫ್ರೈಗಳನ್ನು ತಿನ್ನುತ್ತೇನೆ. ಸಾಮಾನ್ಯವಾಗಿ ನಾನು ಸಾಧಾರಣ ಆರೋಗ್ಯವಂತ ವ್ಯಕ್ತಿ, ಆದರೆ ಇವು ನನ್ನ ದೌರ್ಬಲ್ಯಗಳಾಗಿವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಅಮೆರಿಕದಲ್ಲಿ ನಡೆಸಿದ ಸಂಶೋಧನೆಯೊಂದರಲ್ಲಿ ಪ್ರತಿ 37 ಸೆಕೆಂಡುಗಳಿಗೆ ಒಬ್ಬರು ಕಾರ್ಡಿಯೋವಸ್ಕ್ಯುಲರ್ ಸಮಸ್ಯೆಯಿಂದ ಸಾವನ್ನಪ್ಪುತ್ತಾರೆ ಎಂದು ತಿಳಿದು ಬಂದಿದೆ. ಹಾಗಾದರೆ ಅಂತಹ ಯಾವ ಆಹಾರಗಳು ಹೃದಯ ಸಮಸ್ಯೆಯನ್ನು ತರುತ್ತವೆ ಎಂದು ಸಂಶೋಧನೆ ನಡೆಸಿದಾಗ ಫ್ರೆಂಚ್ ಫ್ರೈಸ್ ಕೂಡ ಅಂತಹ ಅಪಾಯಕಾರಿ ರೋಗ ತರುವ ಆಹಾರ ಎಂದು ತಿಳಿದು ಬಂದಿದೆ. ಹೆಚ್ಚಿನ ಫ್ರೈಸ್ ತಿನ್ನುವವರು, ಅದನ್ನು ಕಡಿಮೆ ತಿನ್ನುವವರಿಗಿಂತ ಸಾವನ್ನಪ್ಪುವ ದರ 2ರಿಂದ 3 ಪಟ್ಟು ಹೆಚ್ಚಿರುತ್ತದೆ. ಮ್ಯಾಕ್ ಡೋನಾಲ್ಡ್ ನಲ್ಲಿ ನೀಡುವ ಸ್ವಲ್ಪ ಪ್ರಮಾಣದ ಫ್ರೆಂಚ್ ಫ್ರೈಸ್‌ನಲ್ಲಿ ಬರೋಬ್ಬರಿ 230 ಕ್ಯಾಲೋರಿಗಳಿರುತ್ತವೆ. ಇದರ ಜೊತೆಗೆ ಈ ಫ್ರೈಸ್ ನಲ್ಲಿ 11 ಗ್ರಾಂ ನಷ್ಟು ಸ್ಯಾಚುರೇಟೆದ್ ಫ್ಯಾಟ್ ಇರುತ್ತದೆ. ಅಂದರೆ ಅದು ವ್ಯಕ್ತಿಗೆ ಪ್ರತಿದಿನ ಬೇಕಾಗುವ ಫ಼್ಯಾಟ್ ಕ್ಕಿಂತ ಶೇ.14ರಷ್ಟು ಹೆಚ್ಚು.