Asianet Suvarna News Asianet Suvarna News

ಛೀ ಛೀ ವ್ಯಾಕ್ ಅನ್ಬೇಡಿ: ನೀವು ಮಾಡುವ P___ಗೂ ಈ ಸಂಸ್ಥೆ ನೀಡುತ್ತೆ ಕೋಟಿಗಟ್ಟಲೇ ಹಣ

ಮನುಷ್ಯ ಮಲಕ್ಕೂ ಮೌಲ್ಯ ಇದೇ ಎಂಬ ವಿಚಾರ ನಿಮಗೆ ಗೊತ್ತೆ? ಅಮೆರಿಕಾ ಹಾಗೂ ಕೆನಡಾದಲ್ಲಿ ಕಾರ್ಯಾಚರಿಸುವ ಸಂಸ್ಥೆಯೊಂದು ಹೀಗೆ ಮಲವನ್ನು ದಾನ ಮಾಡುವ ದಾನಿ (stool donors)ಗಳಿಗೆ 500 ಡಾಲರ್ ಹಣ ನೀಡುತ್ತದೆ.

US and UK Based organization Human Microbes paying money for human excreta akb
Author
First Published Nov 29, 2023, 5:44 PM IST

ಜಗತ್ತಿನಲ್ಲಿ ನಡೆಯುವ ಕೆಲ ವಿಚಾರಗಳು, ಕೆಲ ಅವಿಷ್ಕಾರಗಳು ಕೆಲ ಸಂಶೋಧನೆಗಳ ಬಗ್ಗೆ ಕೇಳುವುದಕ್ಕೂ ಅಸಹ್ಯ ಎನಿಸುತ್ತದೆ. ಅಂತಹ ಒಂದು ವಿಚಾರದ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡ್ತೇವೆ. ಹಸುವಿನ ಸೆಗಣಿ ಬಹಳ ಪ್ರಯೋಜನಕಾರಿ, ಅಡು ಮೇಕೆಗಳ ಹಿಕ್ಕೆಯೂ ಭೂಮಿಗೆ ಅಷ್ಟೇ ಫಲವತ್ತತೆ ನೀಡುತ್ತದೆ. ಹಸುವಿನ ಸೆಗಣಿಯನ್ನು ಬುಟ್ಟಿಗೆ ಇಷ್ಟು ಎಂಬಂತೆ ಮಾರಿದಾರೆ. ಮೇಕೆ ಆಡುಗಳ ಹಿಕ್ಕೆಯನ್ನು ಕೆಜಿಗೆ ಇಷ್ಟು ಎಂಬಂತೆ ಚೀಲಗಳಲ್ಲಿ ತುಂಬಿಸಿ ಕೃಷಿಕರಿಗೆ ಮಾರಲಾಗುತ್ತದೆ. ಆದರೆ ಮನುಷ್ಯ ಮಲಕ್ಕೂ ಇದೇ ರೀತಿಯ ಮೌಲ್ಯ ಇದೇ ಎಂಬ ವಿಚಾರ ನಿಮಗೆ ಗೊತ್ತೆ?

ಇದನ್ನು ಓದುವಾಗಲೇ ನಿಮಗೆ ಛೀ ವ್ಯಾಕ್ ಎನಿಸಬಹುದು ಆದರೆ ಇದು ನಿಜ. ಅಮೆರಿಕಾ ಹಾಗೂ ಕೆನಡಾದಲ್ಲಿ ಕಾರ್ಯಾಚರಿಸುವ ಸಂಸ್ಥೆಯೊಂದು ಹೀಗೆ ಮಲವನ್ನು ದಾನ ಮಾಡುವ ದಾನಿ (stool donors)ಗಳಿಗೆ 500 ಡಾಲರ್ ಹಣ ನೀಡುತ್ತದೆ. ಅಂದರೆ ಬರೋಬ್ಬರಿ 40 ಸಾವಿರ ಭಾರತೀಯ ರೂಪಾಯಿಗಳು.  ಹ್ಯೂಮನ್ ಮೈಕ್ರೋಬ್ಸ್ ಎಂಬ ಈ ಸಂಸ್ಥೆ ಪ್ರಪಂಚದಾದ್ಯಂತ ದಾನಿಗಳಿಂದ ಅವರು ನೀಡುವ ಮಲದ ಸ್ಯಾಂಪಲ್‌ನ್ನು  ಪಡೆಯುತ್ತದೆ. ಹೀಗಾಗಿ ನೀವು ನಿರಂತರ ಅಂದರೆ ದಿನವೂ ಮಲ ವಿಸರ್ಜನೆಗೆ (ಆರೋಗ್ಯವಂತರೂ ದಿನವೂ ಹೋಗಬೇಕು) ಹೋಗುವವರಾದರೆ ಕೇವಲ ವರ್ಷದಲ್ಲೇ ನೀವು ಮಲದಿಂದಲೇ ಕೋಟ್ಯಾಧಿಪತಿ ಆಗುವುದು ಗ್ಯಾರಂಟಿ, ಏಕೆಂದರೆ ದಿನಕ್ಕೆ 500 ಡಾಲರ್‌ ನೀಡಿದರೆ  360 ದಿನಕ್ಕೆ ನಿಮಗೆ ಸುಮಾರು 180,000 ಡಾಲರ್‌ ಸಿಗಲಿದ್ದು, ಇದನ್ನು ಭಾರತೀಯ ರೂಪಾಯಿಗಳಿಗೆ ಪರಿವರ್ತಿಸಿದರೆ ಕೇವಲ ಒಂದು ವರ್ಷದಲ್ಲೇ ನಿಮಗೆ ಒಂದು ಕೋಟಿ 50 ಲಕ್ಷದ 462 ರೂಪಾಯಿಗಳು ಸಿಗಲಿವೆ! ಅದು ಕೇವಲ ಕಕ್ಕಾ  ದಾನ ಮಾಡುವುದರಿಂದ ಅಂದರೆ ತಮಾಷೆಯತೂ ಅಲ್ಲ ಬಿಡಿ..!

ಸಂದರ್ಶನ , ತಪಾಸಣೆಯ ನಂತರ ಮಲ ದಾನಿಗಳ ಆಯ್ಕೆ

ಬರೀ ಇಷ್ಟೇ ಅಲ್ಲ, ಇದು ಕೇವಲ ಸಂಸ್ಥೆ ನೀವೂ ನೀಡುವ ಮಲಕ್ಕೆ ಕೊಡುವ ಹಣ. ಇದರಲ್ಲೂ ನೀವು ಹೆಚ್ಚು ಹಣ ಪಡೆಯಲು ಚೌಕಾಶಿ ಮಾಡಲುಬಹುದು ಎಂದು ದೊಡ್ಡ ಅವಕಾಶವನ್ನೇ ನೀಡಿದೆ ಈ ಸಂಸ್ಥೆ. ಇದು ನಿಜವೇ ಆಗಿದ್ದಲ್ಲಿ ಬಹಳ ಒಳ್ಳೆಯದಿತ್ತು. ಎಲ್ಲೋ ಶೌಚಾಲಯದಲ್ಲಿ ವೇಸ್ಟ್ ಆಗೋದನ್ನು ಕೋಡೋದ್ರಿಂದ ದುಡ್ಡು ಬರುತ್ತೆ ಅಂದರೆ ಸುಮ್ಮನೇ ಯಾಕೆ ವೇಸ್ಟೇ ಮಾಡೋದು ಎಂದು ಅನೇಕರು ಭಾವಿಸಬಹುದು. ಆದರೆ ಇದಕ್ಕೂ ಕೆಲವು ಪರೀಕ್ಷೆಗಳಿವೆ. ನೀವು ಈ ಮಲದಾನಕ್ಕೆ ಯೋಗ್ಯರೇ ಎಂದು ತಿಳಿಯುವುದಕ್ಕೆ  ಸಂಸ್ಥೆ ನಿಮಗೆ ಪ್ರಶ್ನಾವಳಿಗಳನ್ನು ನೀಡುತ್ತದೆ. ಅದನ್ನು ನೀವು ಭರ್ತಿ ಮಾಡಿ ಕಳುಹಿಸಬೇಕು. ಇದಾದ ನಂತರ ಸಂದರ್ಶನವಿರುತ್ತದೆ. ಸಂದರ್ಶನ ಮುಗಿದ ನಂತರ ನಿಮಗೆ ಕೆಲ ತಪಾಸಣೆಗಳಿರುತ್ತವೆ.  ಇದೆಲ್ಲದಕ್ಕೂ ಸಂಸ್ಥೆಯೇ ನಿಮಗೆ ಹಣ ಪಾವತಿ ಮಾಡುತ್ತದೆ. 

ಇದೆಲ್ಲಾ ಪರೀಕ್ಷೆಯಲ್ಲಿ ದಾನ ಮಾಡಲು ಬಯಸುವ ವ್ಯಕ್ತಿ ಯಶಸ್ವಿಯಾದರೆ ಸಂಸ್ಥೆಯೂ ಅವರಿಗೆ ಮುಂಚಿತವಾಗಿಯೇ ಪಾವತಿ ಮಾಡುತ್ತದೆ. ನಂತರ ದಾನಿಗಳು ತಮ್ಮ ಮಲವನ್ನು ಡ್ರೈ ಐಸ್ ಶಿಪ್ಪಿಂಗ್( ಕರಗದ ಐಸ್‌ ಇರುವ ಬಾಕ್ಸ್‌ ಮೂಲಕ ಸಾಗಣೆ) ಮಾಡಬೇಕಾಗುತ್ತದೆ. ಅಲ್ಲದೇ ಈ ಹಣದ ಮೂಲದ ಬಗ್ಗೆ ನೀವು ಹೇಳಿಕೊಳ್ಳಲು ಬಯಸುವುದಿಲ್ಲ ಎಂದು ಬಯಸಿದಲ್ಲಿ ಸಂಸ್ಥೆಯೂ ಅದನ್ನೂ ಬಹಳ ಗೌಪ್ಯವಾಗಿಡುತ್ತದೆಯಂತೆ. 

ಮಾನವ ಮಲದಿಂದ ಸಂಸ್ಥೆ ಮಾಡೋದೇನು? 

ಈ ಹ್ಯೂಮನ್ ಮೈಕ್ರೊಬ್ಸ್ ಸಂಸ್ಥೆಯೂ  0.1 ಪ್ರತಿಶತಕ್ಕಿಂತಲೂ ಕಡಿಮೆ ಇರುವ ಸ್ಥಳೀಯ ಸೂಕ್ಷ್ಮಾಣು ಜೀವಿಗಳನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸುವ ಮೂಲ ನಿವಾಸಿಗಳನ್ನು ಹುಡುಕುವ ಗುರಿಯನ್ನು ಹೊಂದಿದೆ. ಹಾಗೂ ಅವರನ್ನು ವೈದ್ಯರು, ಸಂಶೋಧಕರು, ಆಸ್ಪತ್ರೆಗಳು, ಕ್ಲಿನಿಕಲ್ ಪ್ರಯೋಗಗಳು ಮತ್ತು ವ್ಯಕ್ತಿಗಳೊಂದಿಗೆ ಸಂಪರ್ಕಕ್ಕೆ ಬರುವಂತೆ ಮಾಡುತ್ತದೆ. ಸರಳವಾಗಿ ಹೇಳುವುದಾದರೆ, ಸಂಶೋಧನೆ ಉದ್ದೇಶಗಳಿಗಾಗಿ ಉಪಯುಕ್ತವಾಗಿರುವ ಈ ಸೂಕ್ಷ್ಮಜೀವಿಗಳನ್ನು ಹೊಂದಿರುವ ಕೆಲವು ಜನರನ್ನು ಕಂಪನಿಯು ಹುಡುಕುತ್ತಿದೆ. ಈ ರೀತಿ ಮಲದಾನ ಪಡೆಯುವುರಿಂದ ಸಂಸ್ಥೆಯೂ ಉತ್ತಮ ಗುಣಮಟ್ಟದ ಮಲ ದಾನಿಗಳನ್ನು ಈ ಸಂಶೋಧಕರೊಂದಿಗೆ ಸಂಪರ್ಕಿಸಲು ನೆರವಾಗುತ್ತದೆ. 

ದೇಶದಲ್ಲಿ ದೀರ್ಘಕಾಲದ ಕಾಯಿಲೆ ಮತ್ತು ಸಾಮಾನ್ಯ ಕಳಪೆ ಆರೋಗ್ಯವು ಕಳೆದ ದಶಕಗಳಲ್ಲಿ ತೀವ್ರವಾಗಿ ಹೆಚ್ಚುತ್ತಿದೆ, ಅಲ್ಲಿನ ಹೆಚ್ಚಿನ ಜನಸಂಖ್ಯೆಯು ಈಗ ಅತ್ಯಂತ ಅನಾರೋಗ್ಯಕರವಾಗಿದೆ ಎಂದು ಕಂಪನಿ ಹೇಳಿದೆ.  ಹೆಚ್ಚಿನ ಭಾಗದಲ್ಲಿ ನಮ್ಮ ಸ್ಥಳೀಯ ಮೂಲ ಸೂಕ್ಷ್ಮಜೀವಿಗಳು ಪೀಳಿಗೆಯಿಂದ ಪೀಳಿಗೆಗೆ ನಶಿಸಿ ಹೋಗುತ್ತಿರುವುದರಿಂದ ಇದು ಪೀಳಿಗೆಯಿಂದ ಪೀಳಿಗೆಗೆ ಹದಗೆಡುತ್ತಿರುವ ಬಿಕ್ಕಟ್ಟಾಗಿದೆ. ಇತ್ತೀಚಿನ ಸೂಕ್ಷ್ಮಜೀವಿ ಸಂಶೋಧನೆಗಳು ಈ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿವೆ.  ಆದರೆ ಇದನ್ನು ಮಾಡುವುದಕ್ಕೆ ಕೇವಲ 0.1 ರಷ್ಟು ಇರುವ ಉತ್ತಮ ಆರೋಗ್ಯವನ್ನು ಹೊಂದಿರುವ ಮಲದಾನಿಗಳ ಅಗತ್ಯ ಇದೆ. 

 
 
 
 
 
 
 
 
 
 
 
 
 
 
 

A post shared by Taller Taller (@taller.t)

 

Follow Us:
Download App:
  • android
  • ios