Asianet Suvarna News Asianet Suvarna News

ಉಗ್ರರ ಬದಲು ಅಮಾಯಕರ ಮೇಲೆ ವಾಯುದಾಳಿ ನಡೆಸಿತ್ತಾ ಅಮೆರಿಕ?

* ಆ.29ರಂದು ನಡೆದಿದ್ದ ದಾಳಿಯಲ್ಲಿ 10 ನಾಗರಿಕರ ಸಾವು

* ನ್ಯೂಯಾರ್ಕ್ ಟೈಮ್ಸ್‌ನಿಂದ ತನಿಖಾ ವರದಿ ಪ್ರಕಟ

* ಐಸಿಸ್‌ ಉಗ್ರರ ಬದಲಿಗೆ ಪರಿಹಾರ ಕಾರ‍್ಯಕರ್ತನ ಮೇಲೆ ಅಮೆರಿಕ ದಾಳಿ?

US Afghan Airstrike May Have Mistaken Aid Worker for IS Fighter pod
Author
Bangalore, First Published Sep 12, 2021, 8:02 AM IST

ವಾಷಿಂಗ್ಟನ್‌(ಸೆ.12): ಆ.29ರಂದು ಐಸಿಸ್‌ ಉಗ್ರರ ವಾಹನದ ಮೇಲೆ ದಾಳಿ ನಡೆಸಿ ಸಂಭವನೀಯ ಆತ್ಮಾಹುತಿ ದಾಳಿ ತಡೆದಿದ್ದಾಗಿ ಹೇಳಿದ್ದ ಅಮೆರಿಕ, ತನ್ನ ಗುರಿಯನ್ನು ತಪ್ಪಿತ್ತು. ಅಮೆರಿಕದ ನಡೆಸಿದ ರೀಪರ್‌ ಡ್ರೋನ್‌ ದಾಳಿ, ವಾಸ್ತವಾಗಿ ಉಗ್ರರ ಬದಲಾಗಿ ಪರಿಹಾರ ಕಾರ್ಯಕರ್ತನ ವಾಹನದ ಮೇಲೆ ನಡೆದಿದ್ದು, ಘಟನೆಯಲ್ಲಿ 10 ನಾಗರಿಕರು ಸಾವನ್ನಪ್ಪಿದ್ದರು ಎಂದು ಅಮೆರಿಕದ ‘ನ್ಯೂಯಾರ್ಕ್ ಟೈಮ್ಸ್‌’ ವರದಿಯೊಂದನ್ನು ಪ್ರಕಟಿಸಿದೆ. ಘಟನಾ ಸ್ಥಳದ ವಿಡಿಯೋಗಳನ್ನು ವಿಶ್ಲೇಷಿಸಿ ಪತ್ರಿಕೆ ಈ ವರದಿ ಪ್ರಕಟಿಸಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪೆಂಟಗನ್‌, ದಾಳಿಯ ಪರಿಣಾಮಗಳನ್ನು ನಾವು ವಿಶ್ಲೇಷಿಸುತ್ತಿದ್ದೇವೆ. ನಾಗರಿಕರ ಸಾವನ್ನು ತಪ್ಪಿಸಲು ನಮ್ಮಷ್ಟುಶ್ರಮ ವಹಿಸುವ ಸೇನೆ ಯಾವುದೂ ಇಲ್ಲ ಎಂದು ಹೇಳಿದೆ.

ವರದಿಯಲ್ಲೇನಿದೆ?:

ಆ.29ರಂದು ಕಾಬೂಲ್‌ ವಿಮಾನ ನಿಲ್ದಾಣದ ಮೇಲೆ ದಾಳಿಗೆ ಸಜ್ಜಾಗಿದ್ದ ವಾಹನವೊಂದರ ಮೇಲೆ ನಾವು ದಾಳಿ ನಡೆಸಿದ್ದೇವೆ. ಘಟನೆಯಲ್ಲಿ ಐಸಿಸ್‌ ಉಗ್ರರು ಸಾವನ್ನಪ್ಪಿದ್ದಾರೆ. ಡ್ರೋನ್‌ ದಾಳಿಯ ಬಳಿಕ ಘಟನಾ ಸ್ಥಳದಲ್ಲಿ ಭಾರೀ ಸ್ಫೋಟ ಕೇಳಿಬಂದಿದ್ದು, ಉಗ್ರರು ವಾಹನದಲ್ಲಿ ಸ್ಫೋಟಕ ಪದಾರ್ಥ ಇಟ್ಟಿದ್ದರು ಎಂಬುದಕ್ಕೆ ಸಾಕ್ಷಿ ಎಂದು ಅಮೆರಿಕ ಹೇಳಿಕೊಂಡಿತ್ತು.

ಆದರೆ ಐಸಿಸ್‌ ಎಝ್‌ಮರಾಯ್‌ ಅಹಮದಿ ಎಂಬ ಪರಿಹಾರ ಕಾರ್ಯಕರ್ತ ತನ್ನ ವಾಹನಕ್ಕೆ ನೀರಿನ ಬಾಟಲ್‌ಗಳನ್ನು ತುಂಬಿಸುತ್ತಿದ್ದುದ್ದನ್ನು ಮತ್ತು ತನ್ನ ಬಾಸ್‌ಗಾಗಿ ಲ್ಯಾಪ್‌ಟಾಪ್‌ ಕೊಂಡೊಯ್ಯುತ್ತಿದ್ದುದ್ದನ್ನೇ ಉಗ್ರರ ಕಾರ್ಯಾಚರಣೆ ಎಂದು ಭಾವಿಸಿದ ಅಮೆರಿಕ ಸೇನಾ ಪಡೆಗಳು ಆ ವಾಹನದ ಮೇಲೆ ದಾಳಿ ನಡೆಸಿದ್ದವು. ಈ ವೇಳೆ ಅಹಮದಿ ಸೇರಿದಂತೆ ಕಾರಿನಲ್ಲಿದ್ದ ಹಲವು ಮಕ್ಕಳು ಮತ್ತು ಹಿರಿಯರು ಸೇರಿ 18 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿದೆ.

Follow Us:
Download App:
  • android
  • ios