ನವದೆಹಲಿ(ಜು. 01)  ಕರಾಚಿಯಲ್ಲಿನ ಸ್ಟಾಕ್‌ ಎಕ್ಸ್‌ಚೆಂಜ್‌  ಮೇಲೆ  ನಡೆದ ದಾಳಿಯ ಹಿಂದೆ ಭಾರತದ ಕೈವಾಡ ಇದೆ ಎಂದು ಪಾಕಿಸ್ತಾನ ಆರೋಪ ಮಾಡಿತ್ತು.   ಈ ಆರೋಪಕ್ಕೆ ಯುನ್ ಸೆಕ್ಯೂರಿಟಿ ಕೌನ್ಸಿಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.  ಬಲೂಚಿಸ್ತಾನದ ನಾಲ್ವರು ಉಗ್ರರು ಸೇರಿದಂತೆ ದಾಳಿಯಲ್ಲಿ  19 ಜನ ಸಾವಿಗೀಡಾಗಿದ್ದರು.

ಆದರೆ ಚೀನಾ ಇಲ್ಲಿಯೂ ಕ್ಯಾತೆ ತೆಗೆದಿದೆ. ಸಾಮಾನ್ಯವಾಗಿ ಉಗ್ರರ ದಾಳಿಯಾಗಿ ಕೆಲವೇ ಗಂಟೆಗಳ ಅವಧಿಯಲ್ಲಿ ಹೇಳಿಕೆ ನೀಡುತ್ತಿದ್ದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಯಾಕೆ ತಡಮಾಡಿ ಪ್ರಕಟಣೆ ನೀಡಿದೆ ಎನ್ನುವುದರ ಹಿಂದೆ ಚೀನಾ ಇದೆ.  ಪಾಕಿಸ್ತಾನ ನೀಡಿರುವ ಹೇಳಿಕೆಗೆ ಪೂರಕವಾಗಿ ಭದ್ರತಾ ಮಂಡಳಿ ಹೇಳಿಕೆ ಇರುವಂತೆ ನೋಡಿಕೊಳ್ಳಲು ಚೀನಾ ಯತ್ನ ಮಾಡಿತ್ತು.

ಪಾಕಿಸ್ತಾನದ ಅರ್ಧದಷ್ಟು ಪೈಲಟ್‌ ಗಳೆ ನಕಲಿ

ಮಂಗಳವಾರ ಪಾಕ್‌ ಸಂಸತ್‌ನಲ್ಲಿ ಮಾತನಾಡಿದ ಇಮ್ರಾನ್‌ ಖಾನ್‌, ಕರಾಚಿಯ ದಾಳಿಯಲ್ಲಿ ಭಾರತದ ಕೈವಾಡ ಇರುವುದರ ಬಗ್ಗೆ ಯಾವುದೇ ಸಂದೇಹ ಉಳಿದಿಲ್ಲ. ಕಳೆದ ಎರಡು ತಿಂಗಳಿಂದ ದಾಳಿ ನಡೆಯುತ್ತದೆ ಎಂಬುದು ನನ್ನ ಸಚಿವ ಸಂಪುಟಕ್ಕೆ ಗೊತ್ತಿತ್ತು ಎಂದೆಲ್ಲಾ ಹೇಳಿದ್ದರು.

ಚೀನಾ ಸಹ  ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಭಾಗವಾಗಿದ್ದೂ ಅಸಮಾಧಾನ ವ್ಯಕ್ತಪಡಿಸಿದೆ.  ಸಾಮಾನ್ಯವಾಗಿ ಇಂಥ ದಾಳಿಯಾದಾಗ ಆ ದಿನವೇ ಭದ್ರತಾ ಮಂಡಳಿ ಹೇಳಿಕೆ ನೀಡುತ್ತದೆ.  ಈ ರೀತಿ ವಿಳಂಬ ಮಾಡುವುದು ದಾಳಿಗೊಳಗಾದ ದೇಶ ಮತ್ತು ಇತರ ದೇಶಗಳಿಗೆ ಕೆಟ್ಟ ಸಂದೇಶ ರವಾನೆ ಮಾಡಿದಂತಾಗುತ್ತದೆ ಎಂಬುದು ಗೊತ್ತಿದ್ದರೂ  ಚೀನಾ ಇಲ್ಲಿ ಕೈವಾಡ ಮಾಡಿದೆ.