ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇಕಾ; ಪಾಕ್‌ನ ಶೇ. 40ರಷ್ಟು ಪೈಲಟ್‌ಗಳೇ ನಕಲಿ!
ಪಾಕಿಸ್ತಾನ ವಿಮಾನ ದುರಂತದ ನಂತರ ಅಚ್ಚರಿ ಮಾಹಿತಿ ಬಯಲು/ ಪಾಕಿಸ್ತಾನದ ಶೇ. 40 ರಷ್ಟು ಪೈಲಟ್ ಗಳ ಬಳಿ ಅಸಲಿ ಲೈಸೆನ್ಸ್ ಇಲ್ಲ/ ವಿಷಯ ಬಹಿರಂಗ ಮಾಡಿದ ಪಾಕ್ ಸಚಿವರು
ಇಸ್ಲಾಮಾಬಾದ್(ಜೂ. 25) ಪಾಕಿಸ್ತಾನದಲ್ಲಿರುವ ಶೇ. 40 ರಷ್ಟು ಪೈಲಟ್ ಗಳ ಬಳಿ ಅಸಲಿ ಲೈಸೆನ್ಸ್ ಇಲ್ಲ! ಇದು ನಾವು ಹೇಳುತ್ತಿರುವ ವಿಚಾರ ಅಲ್ಲ. ಪಾಕಿಸ್ತಾನದ ಸಚಿವರೇ ಈ ವಿಚಾರ ಬಹಿರಂಗ ಮಾಡಿದ್ದಾರೆ.
ಪಾಕಿಸ್ತಾನ ವಿಮಾನಯಾನ ಸಚಿವ ಗುಲಾಂ ಸರ್ವಾರ್ ಖಾನ್ ಇರುವ 860 ಪೈಲಟ್ ಗಳಲ್ಲಿ 262 ಜನ ಪರೀಕ್ಷೆಯನ್ನೇ ಎದುರಿಸಿಲ್ಲ ಎಂಬ ಆತಂಕಕಾರಿ ಮಾಹಿತಿ ತಿಳಿಸಿದ್ದಾರೆ. ಇದರಲ್ಲಿ 54 ಪೈಲಟ್ ಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು ಈಗಾಗಲೇ 9 ಜನ ತಪ್ಪೊಪ್ಪಿಕೊಂಡಿದ್ದಾರೆ.
ಇದಪ್ಪಾ ವರಸೆ; ಪಾಕ್ ವಿಮಾನ ದುರಂತಕ್ಕೆ ಕೊರೋನಾ ಕಾರಣ!
ಪಾಕಿಸ್ತಾನದಲ್ಲಿ ವಿಮಾನ ಪತನವಾದ ದುರಂತ ಒಂದೊಂದೆ ಸಂಗತಿ ಬಹಿರಂಗ ಮಾಡುತ್ತಿದೆ. ಲಾಹೋರ್ ನಿಂದ ಕರಾಚಿಗೆ ಹೊರಟಿದ್ದ ಡೊಮೆಸ್ಟಿಕ್ ವಿಮಾನ ಜಿಹ್ನಾ ಇಂಟರ್ ನ್ಯಾಶನಲ್ ವಿಮಾನ ನಿಲ್ದಾಣದ ಬಳಿಯೇ ಪತನವಾಗಿತ್ತು.
ಮೇ 22ರಂದು ಲಾಹೋರ್‌ನಿಂದ ಕರಾಚಿಗೆ ಹಾರುತ್ತಿದ್ದ ದೇಶೀಯ ವಿಮಾನ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ವಸತಿ ಪ್ರದೇಶದಲ್ಲಿ ಅವಘಡಕ್ಕೆ ತುತ್ತಾಗಿತ್ತು. ಈ ದುರಂತದಲ್ಲಿ 97 ಜನರು ಮೃತಪಟ್ಟು, ಕೇವಲ ಇಬ್ಬರು ಅಚ್ಚರಿಯ ರೀತಿಯಲ್ಲಿ ಬದುಕುಳಿದಿದ್ದರು.