Asianet Suvarna News Asianet Suvarna News

ಪ್ರಜಾಪ್ರಭುತ್ವದ ಬಗ್ಗೆ ವಿಶ್ವ ನಮಗೆ ಪಾಠ ಮಾಡಬೇಕಿಲ್ಲ, ವಿಶ್ವಸಂಸ್ಥೆಗೆ ಭಾರತದ ದಿಟ್ಟ ಉತ್ತರ!

ವಿಶ್ವದ ಯಾವುದೇ ದೇಶ ಕೂಡ ಪ್ರಜಾಪ್ರಭುತ್ವದ ಬಗ್ಗೆಯಾಗಲೇ, ಪತ್ರಿಕಾ ಸ್ವಾತಂತ್ರ್ಯದ ಬಗ್ಗೆಯಾಗಲಿ ಭಾರತಕ್ಕೆ ಪಾಠ ಮಾಡುವ ಸ್ಥಾನದಲ್ಲಿಲ್ಲ. ವಿಶ್ವದ ದೊಡ್ಡ ಪ್ರಜಾಪ್ರಭುತ್ವವಾಗಿ ಇದರ ಅರಿವು ನಮಗಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತ ದಿಟ್ಟ ಉತ್ತರ ನೀಡಿದೆ.
 

United Nations Security Council India On Democracy And Freedom Of Press In UNSC Ruchira Kamboj san
Author
First Published Dec 2, 2022, 12:38 PM IST

ನ್ಯೂಯಾರ್ಕ್‌ (ಡಿ.2): ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತದಲ್ಲಿನ ಪ್ರಜಾಪ್ರಭುತ್ವ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಕುರಿತಾಗಿ ಎದುರಾದ ಪ್ರಶ್ನೆಗೆ ಭಾರತ ಕೂಡ ದಿಟ್ಟ ಉತ್ತರ ನೀಡಿದೆ. ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಕುರಿತಾಗಿ ಎದುರಾದ ಪ್ರಶ್ನೆಗೆ, ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಖಡಕ್‌ ಆಗಿ ಉತ್ತರ ನೀಡಿದ್ದಾರೆ. ವಿಶ್ವದ ಯಾವುದೇ ದೇಶ ಕೂಡ ಪ್ರಜಾಪ್ರಭುತ್ವದಲ್ಲಿ ಏನೇನು ಮಾಡಬೇಕು ಎಂದು ಭಾರತಕ್ಕೆ ಪಾಠ ಮಾಡಬೇಕಾದ ಅಗತ್ಯವಿಲ್ಲ ಎಂದಿದ್ದಾರೆ. ರುಚಿರಾ ಕಂಬೋಜ್‌ ಆಡಿರುವ ಮಾತುಗಳು ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ. ಪ್ರಜಾಪ್ರಭುತ್ವವನ್ನು ಹೇಗೆ ನೋಡಬೇಕು. ಅದನ್ನು ಹೇಗೆ ಆಚರಣೆ ಮಾಡಬೇಕು, ಪ್ರಜಾಪ್ರಭುತ್ವದ ಹಕ್ಕುಗಳೇನು ಎನ್ನುವ ಬಗ್ಗೆ ಯಾವ ದೇಶವೂ ಭಾರತಕ್ಕೆ ಪಾಠ ಮಾಡುವ ಅಗತ್ಯವಿಲ್ಲ. ಭಾರತ ಎಂದಿಗೂ ಪ್ರಜಾಪ್ರಭುತ್ವ ರಾಷ್ಟ್ರ. 2500 ವರ್ಷಗಳ ಹಿಂದಿನಿಂದಲೂ ಇಂಥದ್ದೊಂದು ರಾಜಕೀಯ ವ್ಯವಸ್ಥೆ ಭಾರತದಲ್ಲಿದೆ. ಪ್ರಜಾಪ್ರಭುತ್ವದ ನಾಲ್ಕೂ ಕಂಬಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ನಮ್ಮ ನಡುವೆ ಇದೆ. ಇದೇ ಕಾರಣಕ್ಕಾಗಿಯೇ ಇಂದಿಗೂ ಭಾರತ ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದುಕೊಂಡಿದೆ ಎಂದು ಹೇಳಿದ್ದಾರೆ.

15 ಸದಸ್ಯರ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಮುಂದೆ ಮಾತನಾಡಿದ ರುಚಿರಾ ಕಂಬೋಜ್‌, ಭಾರತದಲ್ಲಿ ಪ್ರತಿ ಐದು ವರ್ಷಕ್ಕೆ ಭಾರತದಲ್ಲಿ ಚುನಾವಣೆ ನಡೆಯುತ್ತದೆ. ಭಾರತದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಎಲ್ಲರೂ, ತಮ್ಮ ಅಭಿಪ್ರಾಯಗಳನ್ನು ಹೇಳುವ ಸ್ವಾತಂತ್ರ್ಯ ಹೊಂದಿದ್ದಾರೆ. ಪ್ರಸ್ತುತ ದೇಶದಲ್ಲಿ ವ್ಯಾಪಕವಾಗಿ ಅಭಿವೃದ್ಧಿ ಕಾರ್ಯಗಳು ಹಾಗೂ ಬದಲಾವಣೆಗಳು ಆಗುತ್ತಿವೆ. ಇದರ ಫಲಿತಾಂಶಗಳು ಕೂಡ ಆಶಾದಾಯಕವಾಗಿದೆ. ನಮ್ಮ ದೇಶದಲ್ಲಿ ಆಗುತ್ತಿರುವ ಧನಾತ್ಮಕ ಬದಲಾವಣೆಗಳು ಪ್ರಸ್ತುತ ಜಗತ್ತಿಗೆ ಗೊತ್ತಾಗುತ್ತಿದೆ. ಇದ್ಯಾವುದನ್ನು ಈ ವೇದಿಕೆಯಲ್ಲಿ ಭಿನ್ನ ಭಿನ್ನ ರೀತಿಯಲ್ಲಿ ಹೇಳುವ ಅಗತ್ಯವಿಲ್ಲ ಎಂದಿದ್ದಾರೆ.

ಭದ್ರತಾ ಸಮಿತಿಗೆ ಭಾರತ ಅಧ್ಯಕ್ಷ: ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಡಿಸೆಂಬರ್‌ ತಿಂಗಳಲ್ಲಿ ಭಾರತ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಇಡೀ ತಿಂಗಳು ರುಚಿರಾ ಕಂಬೋಜ್‌ ಅಧ್ಯಕ್ಷ ಸ್ಥಾನದಲ್ಲಿ ಇರಲಿದ್ದಾರೆ. ಅದರೊಂದಿಗೆ ಎರಡು ವರ್ಷಗಳ ಕಾಲ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತದ ಶಾಶ್ವತವಲ್ಲದ ಸದಸ್ಯ ಸ್ಥಾನ ಕೂಡ ಕೊನೆಯಾಗಲಿದೆ. ಈ ತಿಂಗಳಲ್ಲಿ ಭಯೋತ್ಪಾದನೆ ಹಾಗೂ ಜಾಗತಿಕ ಸವಾಲುಗಳ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯಲಿದೆ.

'ಯೋಗ್ಯ ಅಭ್ಯರ್ಥಿ': ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸ್ಥಾನಕ್ಕೆ ಭಾರತವನ್ನು ಬೆಂಬಲಿಸಿದ ರಷ್ಯಾ!

ಭಾರತ ಖಾಯಂ ಸದಸ್ಯ ರಾಷ್ಟ್ರವಲ್ಲ: ಯುಎನ್‌ಎಸ್‌ಸಿ ಭಾರತವು ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗಲು ಬಹಳ ಸಮಯದಿಂದ ಪ್ರಯತ್ನಿಸುತ್ತಿದೆ, ಆದರೆ ಭಾರತದ ಹಾದಿಯಲ್ಲಿ ದೊಡ್ಡ ಅಡ್ಡಿಯಾಗಿರುವು ಚೀನಾ. ಚೀನಾದ ಹೊರತಾಗಿ, ಫ್ರಾನ್ಸ್, ಅಮೆರಿಕ, ರಷ್ಯಾ ಮತ್ತು ಬ್ರಿಟನ್ ಭಾರತವನ್ನು ಭದ್ರತಾ ಮಂಡಳಿಯ ಖಾಯಂ ಸದಸ್ಯರನ್ನಾಗಿ ಮಾಡಲು ಒಪ್ಪಿಕೊಂಡಿವೆ, ಆದರೆ ಚೀನಾ ಭಾರತದ ಶಾಶ್ವತ ಸದಸ್ಯತ್ವವನ್ನು ವಿಭಿನ್ನ ನೆಪದಲ್ಲಿ ವಿರೋಧಿಸುತ್ತಿದೆ.

ಉಕ್ರೇನ್‌ ವಿಚಾರವಾಗಿ ಮೊಟ್ಟಮೊದಲ ಬಾರಿಗೆ ರಷ್ಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತದ ಮತ!

ಇದಲ್ಲದೇ, ಯುಎನ್‌ಎಸ್‌ಸಿ ರಚನೆಯಲ್ಲಿ ಬದಲಾವಣೆಗೆ ಹಲವು ಬಾರಿ ಬೇಡಿಕೆ ಇಡಲಾಗಿದೆ. ಯುಎನ್‌ಎಸ್‌ಸಿಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಾತಿನಿಧ್ಯ ಕಡಿಮೆಯಾಗಿದೆ ಎನ್ನುವ ವಾದವನ್ನು ಈಗಾಗಲೇ ಮಾಡಲಾಗಿದೆ. ಆದರೆ ಶಾಶ್ವತ ಸದಸ್ಯರು ಇದರಲ್ಲಿ ಯಾವುದೇ ಬದಲಾವಣೆಯನ್ನು ಬಯಸುವುದಿಲ್ಲ ಮತ್ತು ಬೇರೆ ಯಾವುದೇ ದೇಶಕ್ಕೆ ವೀಟೋ ಅಧಿಕಾರವನ್ನು ನೀಡಬೇಕು. ಭಾರತವಲ್ಲದೆ, ಜಪಾನ್, ಜರ್ಮನಿ ಮತ್ತು ಬ್ರೆಜಿಲ್ ಕೂಡ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಲು ಪ್ರಯತ್ನಿಸುತ್ತಿವೆ.

ವಿಶ್ವಸಂಸ್ಥೆಗೆ ಭಾರತದ ಮೊದಲ ಮಹಿಳಾ ಕಾಯಂ ಪ್ರತಿನಿಧಿಯಾಗಿರುವ ಕಾಂಬೋಜ್ ಅವರು ಈ ತಿಂಗಳು ಅಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲಿದ್ದಾರೆ. ಈ ಸಮಯದಲ್ಲಿ ಹಲವಾರು ಜಾಗತಿಕ ವಿಚಾರಗಳ ಬಗ್ಗ ಸಮಗ್ರವಾಗಿ ಚರ್ಚೆಯಲ್ಲಿ ತೊಡಗಲಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಈ ಅವಧಿ ಕೊನೆಯಾಗಲಿದ್ದು, ವಿಶ್ವಸಂಸ್ಥೆ ಭದ್ರತಾ ಸಮಿತಿಯಿಂದಲೂ ನಿರ್ಗಮಿಸಿದೆ.
 

Follow Us:
Download App:
  • android
  • ios