ಇಸ್ರೇಲಿ ಪ್ರಜೆಗಳನ್ನ ಕೊಲ್ಲಲು ಬಂದ ಹಮಾಸ್ ಜಿಹಾದಿಗಳ ಬಳಿ ಯುನಿಸೆಫ್ ಪ್ರಥಮ ಚಿಕಿತ್ಸಾ ಬ್ಯಾಗ್ ಪತ್ತೆ!
ಹಮಾಸ್ ಶಸ್ತ್ರಾಸ್ತ್ರಗಾರಕ್ಕೆ ನುಗ್ಗಿದ ಇಸ್ರೇಲ್ ಪಡೆಗಳು. ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಇರುವುದು ಕಂಡುಬಂದಿದೆ. ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಇದ್ದರೂ, ಇಸ್ರೇಲಿ ಪ್ರಜೆಗಳನ್ನು ಕೊಲ್ಲಲು ಹಮಾಸ್ ಬಳಿಸಿದ್ದು ಕೇವಲ 20 ಶಸ್ತ್ರಗಳು ಮಾತ್ರವೆಂದು ಇಸ್ರೇಲಿ ಸೇನೆ ತಿಳಿಸಿದೆ.
ಇಸ್ರೇಲ್ (ಅ.16) : ಇಸ್ರೇಲ್ ಹಮಾಸ್ ಉಗ್ರರ ನಡುವಿನ ಕಾಳಗ ಮುಂದುವರಿದಿದ್ದು, ಇಸ್ರೇಲ್ ಪಡೆಗಳು ಪ್ಯಾಲೆಸ್ತೇನ್ ಗಾಜಾ ಪಟ್ಟಿಯಲ್ಲಿನ ಸುಮಾರು 1500ಕ್ಕೂ ಅಧಿಕ ಕಟ್ಟಡಗಳನ್ನು ನೆಲಸಮಗೊಳಿಸಿದ್ದಾರೆ. ಪ್ಯಾಲೆಸ್ತೇನ್ ಉತ್ತರ ಭಾಗ, ಗಾಜಾ ಪಟ್ಟಿಯ ಜನರು ಬೇರೆಡೆ ತೆರೆಳುವಂತೆ ಸೂಚಿಸಿದ್ದ ಇಸ್ರೇಲ್ ಪಡೆ. ಇದೀಗ ಗಡುವು ಮುಗಿದಿದ್ದು, ಗಾಜಾ ಪಟ್ಟಿ ಮೇಲೆ ಇಸ್ರೇಲ್ ಪಡೆಗಳು ನುಗ್ಗಿವೆ ದಾಳಿ ನಡೆಸಿವೆ. ಬಹುತೇಕ ಗಾಜಾ ಪಟ್ಟಿ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಇಸ್ರೇಲಿ ಸೇನೆ.
ಹಮಾಸ್ ಶಸ್ತ್ರಾಸ್ತ್ರಗಾರಕ್ಕೆ ನುಗ್ಗಿದ ಇಸ್ರೇಲ್ ಪಡೆಗಳು. ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಇರುವುದು ಕಂಡುಬಂದಿದೆ. ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಇದ್ದರೂ, ಇಸ್ರೇಲಿ ಪ್ರಜೆಗಳನ್ನು ಕೊಲ್ಲಲು ಹಮಾಸ್ ಬಳಿಸಿದ್ದು ಕೇವಲ 20 ಶಸ್ತ್ರಗಳು ಮಾತ್ರವೆಂದು ಇಸ್ರೇಲಿ ಸೇನೆ ತಿಳಿಸಿದೆ.
ಪ್ರತ್ಯಕ್ಷ ವರದಿ: ಪ್ರತೀಕಾರಕ್ಕೆ ತಹತಹಿಸುತ್ತಿದೆ ಇಸ್ರೇಲ್; ಗಡುವು ಅಂತ್ಯ ಭೂದಾಳಿಗೆ ಸಜ್ಜು!
ಹಮಾಸ್ ಬಳಗದ ಮತ್ತೊಂದು ವಿಚಿತ್ರ ಅಂಶ ಕಂಡುಬಂದಿದೆ. ಇಸ್ರೇಲಿಗರನ್ನು ಕೊಲ್ಲಲು ಗಡಿಬೇಲಿ ಮುರಿದು ನುಗ್ಗಿದ್ದ ಹಮಾಸ್ ಜಿಹಾದಿಗಳ ಕಂಡಕಂಡವರ ಮೇಲೆ ಗುಂಡು ಹಾರಿಸಿದ್ದರು. ಮಹಿಳೆಯರು ಮಕ್ಕಳೆನ್ನದ ಭೀಕರವಾಗಿ ಕೊಂದು ಹಾಕಿದ್ದರು. ಇಸ್ರೇಲಿ ಪ್ರಜೆಗಳನ್ನು ಜೀವಂತ ಸುಟ್ಟುಹಾಕಿದ್ದರು. ಹೀಗೆ ಕೊಲ್ಲಲು ಬಂದಿದ್ದ ಹಮಾಸ್ ಉಗ್ರರ ಬಳಿ ಯುನಿಸೆಫ್ ಕೊಟ್ಟಿರುವ ಪ್ರಥಮ ಚಿಕಿತ್ಸಾ ಬ್ಯಾಗ್‌ಗಳು ಪತ್ತೆಯಾಗಿರೋದು ಇಸ್ರೇಲ್‌ಗೆ ಶಾಕ್ ನೀಡಿದೆ. ಇಡೀ ಜಗತ್ತು ಭಯೋತ್ಪಾದನೆಯಿಂದ ನಲುಗುತ್ತಿದ್ದರೆ, ಭಯೋತ್ಪಾದನೆಯ ಉದ್ದೇಶಕ್ಕಾಗಿ ಮಾನವೀಯತೆಯ ನೆರವಾ? ಎಂದು ಇಸ್ರೇಲ್ ಸೇನೆ ಯುನಿಸೆಫ್ ಅನ್ನು ಪ್ರಶ್ನಿಸಿದೆ.