Asianet Suvarna News Asianet Suvarna News

ಗಂಗೆ, ಅಮೇಜಾನ್‌, ಮಿಸಿಸಿಪ್ಪಿ.. ಬತ್ತಿ ಹೋಗುತ್ತಿದೆ ಜಗತ್ತಿನ ಜೀವನದಿಗಳು: ವಿಶ್ವಸಂಸ್ಥೆಯ ವರದಿ

ಇಡೀ ಜಗತ್ತಿಗೆ ಆತಂಕ ಹುಟ್ಟಿಸುವಂಥ ವರದಿಯನ್ನು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಬಿಡುಗಡೆ ಮಾಡಿದೆ. ಪ್ರಪಂಚದ ಪ್ರಮುಖ ಜೀವನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿದೆ ಎಂದು ವರದಿ ತಿಳಿಸಿದೆ.

UN Report Warns World Rivers Face Historic Lows Including Ganga and Amazon  san
Author
First Published Oct 8, 2024, 9:31 PM IST | Last Updated Oct 8, 2024, 9:31 PM IST

ನವದೆಹಲಿ (ಅ.8) ಜಾಗತಿಕ ಜಲ ಸಂಪನ್ಮೂಲಗಳ ಪ್ರಸ್ತುತ ಸ್ಥಿತಿಗತಿಗಳ ಕುರಿತು ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಬಿಡುಗಡೆ ಮಾಡಿರುವ ವರದಿ ಆತಂಕಕಾರಿ ಸಂಗತಿಯನ್ನು ಬೆಳಕಿಗೆ ತಂದಿದೆ. 2023 ರಲ್ಲಿ ಪ್ರಪಂಚದ ಬಹುತೇಕ ಜೀವನದಿಗಳಲ್ಲಿ ನೀರು ಹರಿವಿನ ಪ್ರಮಾಣದಲ್ಲಿ ದೊಡ್ಡ ಮಟ್ಟದ ಕುಸಿತವನ್ನು ಕಂಡಿದೆ ಎಂದು ವರದಿ ತಿಳಿಸಿದೆ. 33 ವರ್ಷಗಳ ದತ್ತಾಂಶವನ್ನು ವಿಶ್ಲೇಷಿಸುವ "ಸ್ಟೇಟ್ ಆಫ್ ಗ್ಲೋಬಲ್ ವಾಟರ್ ರಿಸೋರ್ಸಸ್" ವರದಿಯು ಪ್ರಮುಖ ನದಿ ಜಲಾನಯನ ಪ್ರದೇಶಗಳ ಮೇಲೆ ದೀರ್ಘಕಾಲೀನ ಬರಗಾಲದ ತೀವ್ರ ಪರಿಣಾಮವನ್ನು ಎತ್ತಿ ತೋರಿಸುತ್ತದೆ. ವಿಶ್ವದ ಅತಿದೊಡ್ಡ ನದಿಗಳಾದ ಅಮೆಜಾನ್ ಮತ್ತು ಮಿಸ್ಸಿಸ್ಸಿಪ್ಪಿ ಜಲಾನಯನ ಪ್ರದೇಶಗಳಲ್ಲಿ ಕಳೆದ ವರ್ಷ ದಾಖಲೆ ಎನ್ನುವಂತೆ ಅತ್ಯಂತ ಕಡಿಮೆ ಪ್ರಮಾಣದ ನೀರು ಒಳಹರಿವು ಆಗಿತ್ತು.

ಭಾರತದ ಗಂಗಾ ಮತ್ತು ಮೆಕಾಂಗ್ ನದಿಯ ಜಲಾನಯನ ಪ್ರದೇಶಗಳೂ ಸಹ ಕಡಿಮೆ ನೀರಿನ ಹರಿವನ್ನು ಅನುಭವಿಸಿವೆ. ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಪ್ರದೇಶಗಳಲ್ಲಿ ಅಸಾಮಾನ್ಯ ಎನಿಸುವಂತ ನೀರಿನ ಕೊರತೆ ಇದ್ದವು ಎಂದು ವರದಿ ತಿಳಿಸಿದೆ. ಹೆಚ್ಚಿನ ನದಿಗಳಲ್ಲಿ ನೀರಿನ ಹರಿವು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ಪರಿಸ್ಥಿತಿಯು ಕೃಷಿ ಮತ್ತು ಕೈಗಾರಿಕೆಗಳಿಗೆ ನೀರಿನ ಲಭ್ಯತೆಯನ್ನು ಕಡಿಮೆ ಮಾಡಿದೆ ಎಂದು ವರದಿ ಎಚ್ಚರಿಸಿದೆ. "ಇದು ನಮ್ಮ ಹವಾಮಾನ ಬಿಕ್ಕಟ್ಟಿನ ಅತ್ಯಂತ ಪ್ರಮುಖ ಸೂಚನೆಗಳಲ್ಲಿ ಒಂದಾಗಿದೆ" ಎಂದು ಡಬ್ಲ್ಯುಎಂಒ ಮಹಾ ಕಾರ್ಯದರ್ಶಿ ಸೆಲೆಸ್ಟೆ ಸಾಲೋ ಹೇಳಿದ್ದಾರೆ. ಹವಾಮಾನ ಬದಲಾವಣೆಯಿಂದಾಗಿ ಅನಿಯಮಿತವಾಗಿ ಬದಲಾಗುತ್ತಿರುವ ನೀರಿನ ಚಕ್ರಗಳನ್ನು ಪತ್ತೆಹಚ್ಚಲು ಮತ್ತು ಅವುಗಳಿಗೆ ಪ್ರತಿಕ್ರಿಯಿಸಲು, ಜಲಾಶಯಗಳನ್ನು ಸಂರಕ್ಷಿಸಲು ತುರ್ತು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಮತ್ತು ಜಲವಿಜ್ಞಾನ ಮೇಲ್ವಿಚಾರಣೆಯನ್ನು ಹೆಚ್ಚಿಸಬೇಕಾಗಿದೆ ಎಂದು ಅವರು ಹೇಳಿದರು.

ಝಾರಾ To ಸ್ಟಾರ್‌ಬಕ್ಸ್‌: ಟಾಟಾ ಒಡೆತನದ ದೇಶದ 7 ಐಷಾರಾಮಿ ಬ್ರ್ಯಾಂಡ್‌ಗಳಿವು!

ಕಳೆದ 50 ವರ್ಷಗಳಲ್ಲಿ ಹಿಮನದಿಗಳು ದಾಖಲೆಯ ಪ್ರಮಾಣದಲ್ಲಿ ಕರಗುತ್ತಿವೆ. ವರ್ಷಕ್ಕೆ 600 ಗಿಗಾ ಟನ್ ನೀರು ನಷ್ಟವಾಗುತ್ತಿದೆ. ಯುರೋಪ್ ಮತ್ತು ಸ್ಕ್ಯಾಂಡಿನೇವಿಯಾದ ಹಿಮನದಿಗಳಿಂದ ಪೋಷಿಸಲ್ಪಡುವ ನದಿಗಳು ತಾತ್ಕಾಲಿಕವಾಗಿ ಹೆಚ್ಚಿನ ಹರಿವನ್ನು ಕಾಣುತ್ತಿದ್ದರೂ, ಮುಂಬರುವ ವರ್ಷಗಳಲ್ಲಿ ಹಿಮನದಿಗಳು ಕುಗ್ಗುತ್ತಲೇ ಇರುವುದರಿಂದ ಹರಿವು ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ವರ್ಷ ಹೆಚ್ಚಿನ ತಾಪಮಾನವನ್ನು ದಾಖಲಿಸಿದ ಪ್ರದೇಶಗಳಲ್ಲಿ ಹೆಚ್ಚಿನ ನೀರಿನ ಕೊರತೆ ಉಂಟಾಗುತ್ತದೆ ಎಂದು ಡಬ್ಲ್ಯುಎಂಒದ ಜಲವಿಜ್ಞಾನ ನಿರ್ದೇಶಕ ಸ್ಟೀಫನ್ ಉಹ್ಲೆನ್‌ಬ್ರೂಕ್ ಎಚ್ಚರಿಸಿದ್ದಾರೆ. 2024 ರಲ್ಲಿ ಮತ್ತೆ ಅಮೆಜಾನ್‌ನಲ್ಲಿ ಬರಗಾಲ ಉಂಟಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಕರಾವಳಿ ಕರ್ನಾಟಕದಿಂದ ತಿರುಪತಿಗೆ ನೇರ ರೈಲು ಸೇವೆ, ಸುಳಿವು ಕೊಟ್ಟ ರೈಲ್ವೆ ಇಲಾಖೆ

Latest Videos
Follow Us:
Download App:
  • android
  • ios