Asianet Suvarna News Asianet Suvarna News

ಉಕ್ರೇನ್‌ ವಿಮಾನ ಪತನ: 180 ಪ್ರಯಾಣಿಕರ ಸಾವು?

ಉಕ್ರೇನ್ನಲ್ಲಿ ವಿಮಾನ ಪತನ| 180 ಪ್ರಯಾಣಿಕರ ಸಾವು?| ಉಕ್ರೇನ್ಗೆ ಸೇರಿದ ಬೋಯಿಂಗ್-375 ವಿಮಾನ| 

Ukrainian airplane with 180 aboard crash near Tehran
Author
Bangalore, First Published Jan 8, 2020, 11:20 AM IST
  • Facebook
  • Twitter
  • Whatsapp

ಉಕ್ರೇನ್[ಜ.08]: 180 ಮಂದಿ ಪ್ರಯಾಣಿಕರಿದ್ದ ಉಕ್ರೇನ್ ವಿಮಾನವು ಬುಧವಾರ ಬೆಳಗ್ಗೆ ಟೆಹ್ರಾನ್ ವಿಮಾನ ನಿಲ್ದಾಣ ಬಳಿ ಪತನಗೊಂಡಿರುವುದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಈ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲಾ 180 ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

"

ಉಕ್ರೇನ್ ನ 737-800 ವಿಮಾನ ಇಂದು ಬೆಳಗ್ಗೆ ಉಕ್ರೇನ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಸಂದೇಶ ರವಾನಿಸುವುದನ್ನು ನಿಲ್ಲಿಸಿತ್ತು. ಟೆಹ್ರಾನ್ ನ ನೈರುತ್ಯ ಭಾಗದಲ್ಲಿ ಈ ಅಪಘಾತ ಸಂಭವಿಸಿದ್ದು ಸದ್ಯ ತನಿಖಾ ತಂಡ ಅಲ್ಲಿಗೆ ತೆರಳಿ ಪರಿಶೀಲನೆ ಆರಂಭಿಸಿದೆ. ಇಮಾಮ್ ಖೊಮೈನಿ ವಿಮಾನ ನಿಲ್ದಾಣದಿಂದ ಹೊರಟ ಈ ವಿಮಾನ ತಾಂತ್ರಿಕ ತೊಂದರೆಯಿಂದ ಅಪಘಾತಕ್ಕೀಡಾಗಿರಬಹುದು ಎಂದು ಪ್ರಾಥಮಿಕ ವರದಿ ಹೇಳಿದೆ.

ಇನ್ನು ಇರಾನ್‌ನ ಕ್ರಾಂತಿಕಾರಿ ನಾಯಕ ಜನರಲ್ ಖಾಸಿಮ್ ಸೊಲೈಮಾನಿ ಹತ್ಯೆಗೆ ಪ್ರತೀಕಾರವಾಗಿ  ಅಮೆರಿಕಾ ಸೇನಾಪಡೆ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಈ ವಿಮಾನ ಅಪಘಾತಕ್ಕೀಡಾಗಿದೆ ಎಂಬುವುದು ಉಲ್ಲೇಖನೀಯ.

Follow Us:
Download App:
  • android
  • ios