Asianet Suvarna News Asianet Suvarna News

ರಷ್ಯಾದ ರಾಕೆಟ್ ದಾಳಿಗೆ ಉಕ್ರೇನಿಯನ್ ನಟಿ ಬಲಿ

  • ಉಕ್ರೇನ್‌ ನಟಿ ಒಕ್ಸಾನಾ ಶ್ವೆಟ್ಸ್ ನಿಧನ
  • ರಷ್ಯಾದ ರಾಕೆಟ್ ದಾಳಿಗೆ ಉಕ್ರೇನಿಯನ್ ನಟಿ ಬಲಿ
  • ಕೈವ್‌ನಲ್ಲಿ ವಸತಿ ಕಟ್ಟಡದ ಮೇಲೆ ರಾಕೆಟ್ ದಾಳಿ ನಡೆಸಿದ ರಷ್ಯಾ
Ukrainian Actor Oksana Shvets Killed In Russian Rocket Attack in Kyiv residential building akb
Author
Bangalore, First Published Mar 18, 2022, 1:43 PM IST | Last Updated Mar 18, 2022, 1:43 PM IST

ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿ 23 ದಿನಗಳೇ ಕಳೆದಿವೆ. ವಸತಿ ಪ್ರದೇಶಗಳ ಮೇಲಿನ ದಾಳಿಯಿಂದ ಉಕ್ರೇನ್ ಅಕ್ಷರಶಃ ಸ್ಮಶಾನವಾಗಿದೆ. ಅಲ್ಲಲ್ಲಿ ಹೆಣಗಳ ರಾಶಿ ಬಿದ್ದಿದ್ದು ಸಾಮೂಹಿಕ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಈ ಮಧ್ಯೆ ಕೈವ್‌ನಲ್ಲಿ ವಸತಿ ಕಟ್ಟಡದ ಮೇಲೆ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಉಕ್ರೇನ್‌ ನಟಿ ಒಕ್ಸಾನಾ ಶ್ವೆಟ್ಸ್ ಮೃತಪಟ್ಟಿದ್ದಾರೆ.

ಒಕ್ಸಾನಾ ಅವರ ನಿಧನವನ್ನು ಅವರ ತಂಡ, ಯಂಗ್ ಥಿಯೇಟರ್ ಹೇಳಿಕೆ ಮೂಲಕ ದೃಢೀಕರಿಸಿದೆ. 'ಕೈವ್‌ನಲ್ಲಿ ವಸತಿ ಕಟ್ಟಡದ ಮೇಲೆ ನಡೆದ ರಾಕೆಟ್ ಶೆಲ್ ದಾಳಿಯ ಸಮಯದಲ್ಲಿ, ಉಕ್ರೇನ್‌ನ  ಕಲಾವಿದೆ ಒಕ್ಸಾನಾ ಶ್ವೆಟ್ಸ್ ಕೊಲ್ಲಲ್ಪಟ್ಟರು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.ದಿ ಹಾಲಿವುಡ್ ರಿಪೋರ್ಟರ್ ಪ್ರಕಾರ, ಒಕ್ಸಾನಾ ಅವರಿಗೆ 67 ವರ್ಷ ವಯಸ್ಸಾಗಿತ್ತು. ಅವರು ಉಕ್ರೇನ್‌ನ ಅತ್ಯುನ್ನತ ಕಲಾತ್ಮಕ ಗೌರವಗಳಲ್ಲಿ ಒಂದಾದ ಉಕ್ರೇನ್‌ನ ಗೌರವಾನ್ವಿತ ಕಲಾವಿದೆ (Honored Artist of Ukraine) ಪ್ರಶಸ್ತಿಯನ್ನು ಪಡೆದಿದ್ದರು. 

ಫೆಬ್ರವರಿ 24 ರಂದು, ರಷ್ಯಾ ಉಕ್ರೇನ್‌ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿತು. ಈ ಕಾರ್ಯಾಚರಣೆಯು ಉಕ್ರೇನಿಯನ್ ಮಿಲಿಟರಿ  ಮೂಲಸೌಕರ್ಯವನ್ನು ಮಾತ್ರ ಗುರಿಯಾಗಿಸಿಕೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ (Russian Defense Ministry) ಹೇಳಿದೆ. ಆದರೆ ವಿಶ್ವಸಂಸ್ಥೆ  ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿಯ ಪ್ರಕಾರ, ಸಂಘರ್ಷದ ಆರಂಭದಿಂದಲೂ ಉಕ್ರೇನ್‌ನಲ್ಲಿ ಸುಮಾರು 600 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Russia-Ukraine War: ಉಕ್ರೇನ್ ಆಸ್ಪತ್ರೆ ವಶಕ್ಕೆ ಪಡೆದು 400 ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡ ರಷ್ಯಾ!
 

ಈ ಮಧ್ಯೆ ಉಕ್ರೇನ್‌ ಮೇಲೆ ರಷ್ಯಾ ತನ್ನ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕು ಅಂತರರಾಷ್ಟ್ರೀಯ ನ್ಯಾಯಾಲಯ ಬುಧವಾರ ಆದೇಶಿಸಿತ್ತು. ಮಹತ್ವದ ಆದೇಶದಲ್ಲಿ, ನೆದರ್‌ಲ್ಯಾಂಡ್ಸ್‌ನ ( Netherlands ) ಹೇಗ್‌ನಲ್ಲಿರುವ ( The Hague ) ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಸಾರ್ವಭೌಮ ರಾಷ್ಟ್ರ ಉಕ್ರೇನ್ ( Ukraine ) ಮೇಲಿನ ಆಕ್ರಮಣವನ್ನು ರಷ್ಯಾ ( Russia ) ತಕ್ಷಣವೇ ನಿಲ್ಲಿಸಬೇಕು ಎಂದು ಸೂಚನೆ ನೀಡಿದೆ. ಈ ಪ್ರಕರಣದಲ್ಲಿ ಇನ್ನೂ ಅಂತಿಮ ನಿರ್ಧಾರ ಬಾಕಿ ಉಳಿದಿದ್ದು, ರಷ್ಯಾದ ಒಕ್ಕೂಟವು, ಉಕ್ರೇನ್ ದೇಶದ ಮೇಲೆ ಆರಂಭಿಸಿರುವ ಸೇನಾ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಆದೇಶ ನೀಡಿದೆ. ಆದರೆ ಅಂತಾರಾಷ್ಟ್ರೀಯ ಕೋರ್ಟ್‌ನ ಆದೇಶವನ್ನು ಕೂಡ ರಷ್ಯಾ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. 

ಇನ್ನು ಯುದ್ಧ ಆರಂಭವಾದಂದಿನಿಂದಲೂ ಉಕ್ರೇನ್‌ನಲ್ಲಿದ್ದ ತನ್ನ ಸಾವಿರಾರು ವಿದ್ಯಾರ್ಥಿಗಳನ್ನು ಭಾರತ ಸರ್ಕಾರ ಆಪರೇಷನ್ ಗಂಗಾ ಕಾರ್ಯಾಚರಣೆ ಮೂಲಕ ಏರ್‌ಲಿಫ್ಟ್ ಮಾಡಿ ರಕ್ಷಣೆ ಮಾಡಿದೆ. ಮಾರ್ಚ್‌ 12ರಂದೇ ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ರಕ್ಷಿಸಲು ಆರಂಭಿಸಿದ್ದ ‘ಆಪರೇಶನ್‌ ಗಂಗಾ’ಕಾರ್ಯಾಚರಣೆಗೆ ತೆರೆ ಬಿದ್ದಿದೆ. 674 ಭಾರತೀಯರನ್ನು ಹೊತ್ತ 3 ವಿಮಾನಗಳು ಪೋಲೆಂಡ್‌ನಿಂದ ಶುಕ್ರವಾರ ದಿಲ್ಲಿಗೆ ಆಗಮಿಸಿದ್ದು, ಇದರೊಂದಿಗೆ ಈ ಕಾರ್ಯಾಚರಣೆ ಮುಕ್ತಾಯವಾಗಿದೆ.     

Russia Ukraine War ತಕ್ಷಣವೇ ಉಕ್ರೇನ್ ಮೇಲಿನ ಆಕ್ರಮಣ ನಿಲ್ಲಿಸಿ, ರಷ್ಯಾಗೆ ಆದೇಶ ನೀಡಿದ ಅಂತಾರಾಷ್ಟ್ರೀಯ ಕೋರ್ಟ್ !

ಕೊನೆಯ ತಂಡದಲ್ಲಿದ್ದ 674 ಜನರು ಉಕ್ರೇನ್‌ನ ಯುದ್ಧಪೀಡಿತ ಸುಮಿ ನಗರದಲ್ಲಿ ಸಿಲುಕಿದ್ದರು. ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿದೆ. ಭಾರತ ಸರ್ಕಾರವು ತೆರವು ಕಾರ್ಯಾಚರಣೆಗೆ ಸಹಕರಿಸಿದ ರಷ್ಯಾ(Russia), ಉಕ್ರೇನ್‌(Ukraine), ಸ್ಲೊವಾಕಿಯಾ (Slovakia), ಹಂಗೇರಿ(Hungary), ರೊಮೇನಿಯಾ(Romania), ಪೋಲೆಂಡ್‌ ದೇಶಗಳಿಗೆ ಹಾಗೂ ರೆಡ್‌ ಕ್ರಾಸ್‌ ಸಂಸ್ಥೆಗೆ ಧನ್ಯವಾದ ಸಮರ್ಪಿಸಿದೆ.
 

Latest Videos
Follow Us:
Download App:
  • android
  • ios