ಕಜಾನ್ ನಗರದಲ್ಲಿನ 6 ವಸತಿ ಕಟ್ಟಡಗಳನ್ನು ಗುರಿಯಾಗಿಸಿ ಉಕ್ರೇನಿ ಸೇನಾಪಡೆಗಳು ಒಟ್ಟು 8 ಡೋನ್‌ಗಳನ್ನು ಬಳಸಿ ದಾಳಿ ನಡೆಸಿದೆ. ಈ ಕುರಿತ ವಿಡಿಯೋಗಳು ವೈರಲ್ ಆಗಿವೆ. 

ಮಾಸ್ಕೋ(ಡಿ.22): ಅಮೆರಿಕದ ವಿಶ್ವ ವಾಣಿಜ್ಯ ಸಂಸ್ಥೆ ಕಟ್ಟಡದ ಮೇಲೆ ಅಲ್‌ಖೈದಾ ಉಗ್ರರು ವಿಮಾನ ಬಳಸಿ ನಡೆಸಿದ ದಾಳಿಯ ಮಾದರಿಯಲ್ಲೇ ರಷ್ಯಾದ ಕಟ್ಟಡಗಳ ಮೇಲೆ ಡೋನ್ ಬಳಸಿ ಉಕ್ರೇನ್ ಸೇನಾ ಪಡೆ ಭೀಕರ ದಾಳಿ ನಡೆಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಜಾನ್ ನಗರದಲ್ಲಿನ 6 ವಸತಿ ಕಟ್ಟಡಗಳನ್ನು ಗುರಿಯಾಗಿಸಿ ಉಕ್ರೇನಿ ಸೇನಾಪಡೆಗಳು ಒಟ್ಟು 8 ಡೋನ್‌ಗಳನ್ನು ಬಳಸಿ ದಾಳಿ ನಡೆಸಿದೆ. ಈ ಕುರಿತ ವಿಡಿಯೋಗಳು ವೈರಲ್ ಆಗಿವೆ. 

ಸಿರಿಯಾ ಅಂತರ್ಯುದ್ಧದ ವೇಳೆ ರಷ್ಯಾಗೆ ₹ 2,082 ಕೋಟಿ ಸಾಗಿಸಿದ್ದ ಅಲ್‌ ಅಸಾದ್‌ !

ವೈರಲ್ ಆಗಿರುವ ವಿಡಿಯೋಗಳಲ್ಲಿ ಡೋನ್‌ಗಳು ಕಟ್ಟಡಕ್ಕೆ ಮೇಲೆ ಅಪ್ಪಳಿಸಿ ಭಾರೀ ಪ್ರಮಾಣದ ಬೆಂಕಿ ಎದ್ದ ಮತ್ತು ಬಳಿಕ ಹೊಗೆ ಆವರಿಸಿಕೊಂಡ ದೃಶ್ಯಗಳಿವೆ. ದಾಳಿಯ ನಂತರ ಕಜಾನ್ ವಿಮಾನ ನಿಲ್ದಾಣದಲ್ಲಿ ತಾತ್ಕಾಲಿಕ ವಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.