Asianet Suvarna News Asianet Suvarna News

ಬ್ರಿಟನ್‌ ಕ್ಯಾಬಿನೆಟ್‌ನಲ್ಲಿ ಸ್ಥಾನ ಪಡೆದ ಇಬ್ಬರು ಭಾರತೀಯರು

ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಭಾರತೀಯ ಮೂಲದ ರಿಷಿ ಸುನಕ್ ಅವರು ಸ್ಪರ್ಧಿಸಿದ್ದರು. ಆದರೆ ಪ್ರಧಾನಿ ಹುದ್ದೆ ಏರಲು ಅವರಿಗೆ ಸಾಧ್ಯವಾಗಲಿಲ್ಲ. ಅದಾಗ್ಯೂ ಭಾರತೀಯರು ಖುಷಿ ಪಡುವ ವಿಚಾರವೊಂದಿದೆ. ಭಾರತದವರು ಪ್ರಧಾನಿಯಾಗದಿದ್ದರೇನಂತೆ ಬ್ರಿಟನ್ ಸಂಸತ್‌ನ ಸದಸ್ಯರಾಗಿದ್ದಾರೆ. ರಿಷಿ ಸುನಕ್ ಹಿಂದಿಕ್ಕಿ ಬ್ರಿಟನ್ ಪ್ರಧಾನಿಯಾದ ಲಿಜ್ ಟ್ರಸ್  ಅವರ ಸಂಪುಟದಲ್ಲಿ ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ. 

UK PM Liz Truss cabinet have two indian origin Minister, who are they read here akb
Author
First Published Sep 8, 2022, 11:39 AM IST

ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಭಾರತೀಯ ಮೂಲದ ರಿಷಿ ಸುನಕ್ ಅವರು ಸ್ಪರ್ಧಿಸಿದ್ದರು. ಆದರೆ ಪ್ರಧಾನಿ ಹುದ್ದೆ ಏರಲು ಅವರಿಗೆ ಸಾಧ್ಯವಾಗಲಿಲ್ಲ. ಅದಾಗ್ಯೂ ಭಾರತೀಯರು ಖುಷಿ ಪಡುವ ವಿಚಾರವೊಂದಿದೆ. ಭಾರತದವರು ಪ್ರಧಾನಿಯಾಗದಿದ್ದರೇನಂತೆ ಬ್ರಿಟನ್ ಸಂಸತ್‌ನ ಸದಸ್ಯರಾಗಿದ್ದಾರೆ. ರಿಷಿ ಸುನಕ್ ಹಿಂದಿಕ್ಕಿ ಬ್ರಿಟನ್ ಪ್ರಧಾನಿಯಾದ ಲಿಜ್ ಟ್ರಸ್  ಅವರ ಸಂಪುಟದಲ್ಲಿ ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ. 

ಹೊಸದಾಗಿ ಯುಕೆ ಪ್ರಧಾನಿ ಲಿಜ್ ಟ್ರಸ್ ಅವರ ಹೊಸ ಸಂಪುಟದಲ್ಲಿ 2 ಭಾರತೀಯ ಮೂಲದ ಸಂಸದರು ಸಚಿವರು (Indian Origin Ministers) ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಭಾರತೀಯ ಮೂಲದ ಸುಯೆಲ್ಲಾ ಬ್ರವರ್‌ಮನ್ ಮತ್ತು ಅಲೋಕ್ ಶರ್ಮಾ (Alok Sharma) ಅವರು ಬ್ರಿಟನ್ ಪ್ರಧಾನಿ ಸಂಸತ್ತಿನಲ್ಲಿ ಜಾಗ ಪಡೆದ ಭಾರತೀಯರು. ಈ ಇಬ್ಬರು ಭಾರತೀಯ ಮೂಲದ ಸಂಸದರು, ಯುಕೆ ಪ್ರಧಾನಿ ಲಿಜ್ ಟ್ರಸ್ (Liz Truss) ನೇತೃತ್ವದಲ್ಲಿ ನಡೆದ ಮೊದಲ ಸಭೆಯಲ್ಲಿ ಭಾಗವಹಿಸಿದ್ದರು. 47 ವರ್ಷದ ಸುಯೆಲ್ಲಾ ಬ್ರಾವರ್‌ಮನ್‌ ಅವರಿಗೆ ಗೃಹ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಹಾಗೆಯೇ ಲಂಡನ್‌ನಲ್ಲಿ ಜನಿಸಿದ  ಮೂಲತಃ ವಕೀಲರಾಗಿರುವ ಸುಯೆಲ್ಲಾ ಬ್ರಾವರ್‌ಮನ್‌, ಆಗ್ನೇಯ ಇಂಗ್ಲೆಂಡ್‌ನ ಫರೆಹ್ಯಾಮ್‌ನ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಇವರು ತಮಿಳು ಮತ್ತು ಗೋವಾ ಮಿಶ್ರ ಪರಂಪರೆಯ ಇವರು ಮಂಗಳವಾರ (ಸೆಪ್ಟೆಂಬರ್ 6)ಸಂಜೆ ಲಿಜ್ ಟ್ರಸ್ ಅವರ ನೇಮಕದ ನಂತರ ಗೃಹ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.

ತಮ್ಮ ಈ ಹೊಸ ಹುದ್ದೆಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸುಯೆಲ್ಲಾ ಬ್ರಾವರ್‌ಮನ್‌, ಯುಕೆ ಸಂಸತ್‌ನಲ್ಲಿ ಸ್ಥಾನ ಪಡೆದಿರುವುದಕ್ಕೆ ಖುಷಿಯಾಗಿದೆ. ನಮ್ಮ ಬೀದಿಗಳನ್ನು ಸುರಕ್ಷಿತಗೊಳಿಸುವುದು, ನಮ್ಮ ಭದ್ರತಾ ಸೇವೆಯನ್ನು ಸಧೃಢಗೊಳಿಸುವುದು, ವಲಸೆಯನ್ನು ನಿಯಂತ್ರಿಸುವುದು ಪ್ರಮುಖ ಆದ್ಯತೆಯಾಗಿದೆ ಎಂದು ಟ್ವಿಟ್ ಮಾಡಿದ್ದಾರೆ. ಇವರು ಭಾರತೀಯ ಮೂಲದ ಬ್ರೆಕ್ಸಿಟೈರ್ ಬೆಂಬಲಿತ ಪ್ರೀತಿ ಪಟೇಲ್‌ (Priti Patel) ವಿರುದ್ಧ ಗೆಲುವು ಸಾಧಿಸಿದ್ದರು.

ಪ್ರೇಯಸಿ ಜತೆ ಬ್ರಿಟನ್‌ ಪ್ರಧಾನಿ ಜಾನ್ಸನ್‌ 3ನೇ ಮದುವೆ!


ಹಾಗೆಯೇ ಇನ್ನೊಬ್ಬ ಭಾರತೀಯ ಮೂಲದ ಸಚಿವ 55 ವರ್ಷದ ಅಲೋಕ್ ಶರ್ಮಾ ಹುಟ್ಟೂರು ಉತ್ತರಪ್ರದೇಶದ ಆಗ್ರಾ. ಆಗ್ರಾದಿಂದ ಯುಕೆಗೆ ವಲಸೆ ಹೋದ ಅವರು ಈಗ ಬ್ರಿಟನ್ ಪ್ರಧಾನಿ ಜೊತೆ ಕೆಲಸ ಮಾಡಲಿದ್ದಾರೆ. ಇವರು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಭೆಯ  COP26ರ ಅಧ್ಯಕ್ಷರಾಗಿ (United Nations Climate Change Conference COP26) ಮುಂದುವರಿಯಲಿದ್ದಾರೆ. ಕಳೆದ ನವೆಂಬರ್‌ನಲ್ಲಿ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆದ COP26 ಶೃಂಗಸಭೆಯಲ್ಲಿ, 'ಹೆಚ್ಚು ಸಮರ್ಥನೀಯ ಮತ್ತು ಹಸಿರು ಇಂಧನ ಮೂಲಗಳ ಕಡೆಗೆ ಜಾಗತಿಕ ಪರಿವರ್ತನೆ' ವಿಚಾರವನ್ನು ಸಮರ್ಥಿಸಿಕೊಂಡಿದ್ದಕ್ಕಾಗಿ ಅವರು ಹೆಚ್ಚು ಪ್ರಶಂಸೆಗೆ ಪಾತ್ರರಾಗಿದ್ದರು.

Boris Johnson: ಬ್ರಿಟನ್‌ ಪ್ರಧಾನಿಯ ಗುಂಡು ಪುರಾಣ: ಬಯಲಾದದ್ದು ಹೇಗೆ?
ಗ್ಲ್ಯಾಸ್ಗೋ ಹವಾಮಾನ ಒಪ್ಪಂದವನ್ನು  ಮುನ್ನಡೆಸಲು ಪ್ರಧಾನ ಮಂತ್ರಿ ಲಿಜ್ ಟ್ರಸ್ ಅವರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಲು ಸಂತೋಷವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

Follow Us:
Download App:
  • android
  • ios