* ಪ್ರೇಯಸಿ ಜನತೆ ಬ್ರಿಟನ್‌ ಪ್ರಧಾನಿ ಜಾನ್ಸನ್‌ 3ನೇ ಮದುವೆ* ಕುಟುಂಬದವರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಪ್ರಧಾನಿ 3ನೇ ವಿವಾಹ* 56 ವರ್ಷದ ಜಾನ್ಸನ್‌ ಮತ್ತು 33 ವರ್ಷ ಸೈಮಂಡ್ಸ್‌ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು

ಲಂಡನ್‌(ಮೇ.31): ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ತಮ್ಮ ಪ್ರೇಯಸಿ ಕ್ಯಾರಿ ಸೈಮಂಡ್ಸ್‌ ಅವರನ್ನು ಶನಿವಾರ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ. ಇದು ಜಾನ್ಸನ್‌ ಅವರ 3ನೇ ಮದುವೆ.

‘ರೋಮನ್‌ ಕ್ಯಾಥೋಲಿಕ್‌ ವೆಸ್ಟ್‌ಮಿನಿಸ್ಟರ್‌ ಕ್ಯಾಥೆಡ್ರಲ್‌ನಲ್ಲಿ ಕುಟುಂಬದವರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಪ್ರಧಾನಿ 3ನೇ ವಿವಾಹವಾಗಿದ್ದಾರೆ’ ಎಂದು ಪ್ರಧಾನಿಗಳ ಅಧಿಕೃತ ನಿವಾಸ ಡೌನಿಂಗ್‌ ಸ್ಟ್ರೀಟ್‌ ಕಚೇರಿ ಭಾನುವಾರ ತಿಳಿಸಿದೆ. ಇಂಗ್ಲೆಂಡಿನಲ್ಲಿ ಸದ್ಯ ಕೋವಿಡ್‌ ನಿರ್ಬಂಧಗಳು ಚಾಲ್ತಿಯಲ್ಲಿ ಇರುವ ಕಾರಣ ಮದುವೆಗೆ 30 ಜನರು ಮಾತ್ರ ಭಾಗವಹಿಸಲು ಅವಕಾಶವಿದೆ. ಹಾಗಾಗಿ ಗೌಪ್ಯವಾಗಿ ವಿವಾಹ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Scroll to load tweet…

56 ವರ್ಷದ ಜಾನ್ಸನ್‌ ಮತ್ತು 33 ವರ್ಷ ಸೈಮಂಡ್ಸ್‌ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವರಿಗೆ 1 ವರ್ಷದ ಮಗ ಸಹ ಇದ್ದಾನೆ.

ಮೊದಲೆರಡು ಮದುವೆಗಳಿಂದ ಜಾನ್ಸನ್‌ ಅವರಿಗ ಈಗಾಗಲೇ ಐವರು ಮಕ್ಕಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona