'ಬ್ರಿಟನ್‌ನಲ್ಲಿ ಹಿಂದುಫೋಬಿಯಾಗೆ ಜಾಗವಿಲ್ಲ..' ಬ್ರಿಟಿಷ್‌ ಹಿಂದುಗಳಿಗೆ ವಿಶ್ವಾಸ ನೀಡಿದ ಯುಕೆ ಹೊಸ ಪಿಎಂ!


ಚುನಾವಣೆಗೂ ಮುನ್ನ  ಕಿಂಗ್ಸ್‌ಬರಿಯ ಶ್ರೀ ಸ್ವಾಮಿನಾರಾಯಣ ಮಂದಿರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬ್ರಿಟನ್‌ನ ಹೊಸ ಪಿಎಂ  "ಬ್ರಿಟನ್‌ನಲ್ಲಿ ಹಿಂದೂಫೋಬಿಯಾಕ್ಕೆ ಯಾವುದೇ ಸ್ಥಳವಿಲ್ಲ" ಎಂದು ಹೇಳಿದ್ದರು.

UK PM Keir Starmer wooed British Hindus says No Place for Hinduphobia in Britian san

ನವದೆಹಲಿ (ಜು.6): ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಯುನೈಟೆಡ್ ಕಿಂಗ್‌ಡಂನ ಮುಂದಿನ ಪ್ರಧಾನ ಮಂತ್ರಿಯಾಗೋದು ಖಚಿತವಾಗಿದೆ. ಬ್ರಿಟನ್‌ನ ಚುನಾವಣೆಯಲ್ಲಿ ಕೀರ್‌ ಸ್ಟಾರ್ಮರ್‌ ಅವರ ಲೇಬರ್‌ ಪಕ್ಷ ಚಾರ್‌ ಸೌ ಪಾರ್‌ ಸಾಧಿಸುವ ಮೂಲಕ ಬಹುಮತದ ಸರ್ಕಾರ ಸ್ಥಾಪನೆ ಮಾಡುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಸ್ಟಾರ್ಮರ್ ಪಕ್ಷವು 14 ವರ್ಷಗಳ ನಂತರ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷದ ಆಳ್ವಿಕೆಯನ್ನು ಬ್ರಿಟನ್‌ನಲ್ಲಿ ಕೊನೆ ಮಾಡಿದೆ. ಇನ್ಫೋಸಿಸ್‌ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್‌ ಇದರೊಂದಿಗೆ ಪ್ರಧಾನಮಂತ್ರಿ ಸ್ಥಾನದಿಂದಲೂ ಕೆಳಗಿಳಿದಿದ್ದಾರೆ. ಮಾನವ ಹಕ್ಕುಗಳ ಪರ ವಕೀಲರಾಗಿದ್ದ ಸ್ಟಾರ್ಮನ್‌ ಬಳಿಕ ರಾಜಕಾರಣಿಯಾಗಿ ಬದಲಾಗಿದ್ದರು. ಬ್ರಿಟನ್‌ನಲ್ಲಿ ಲೇಬರ್ ಪಕ್ಷ ಅಧಿಕಾರಕ್ಕೆ ಬಂದರೆ ಭಾರತದೊಂದಿಗಿನ ಸಂಬಂಧಗಳನ್ನು ಸುಧಾರಿಸಲು ಮತ್ತು ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮುಂದುವರಿಸಲು ಯಾವಾಗಲೂ ತನ್ನ ಪಕ್ಷದ ನಿಲುವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ, ಪ್ರಧಾನ ಮಂತ್ರಿ ಅಭ್ಯರ್ಥಿ ಯುನೈಟೆಡ್ ಕಿಂಗ್‌ಡಮ್‌ನಿಂದ 'ಹಿಂದೂಫೋಬಿಯಾ' ನಿರ್ಮೂಲನೆ ಮಾಡುವ ಬಗ್ಗೆ ಮಾತನಾಡಿದ್ದಾರೆ.

ಕಳೆದ ವಾರ, ಕೀರ್ ಸ್ಟಾರ್ಮರ್ ಅವರು ತಮ್ಮ ಪ್ರಚಾರದ ವೇಳೆ ಉತ್ತರ ಲಂಡನ್‌ನ ಕಿಂಗ್ಸ್‌ಬರಿಯಲ್ಲಿರುವ ಶ್ರೀ ಸ್ವಾಮಿನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿದ್ದರು, ದೇವಾಲಯಗಳ ಮೇಲೆ ಮಾಡಲಾದ ಇತ್ತೀಚಿನ ವಿಧ್ವಂಸಕ ಕೃತ್ಯಗಳ ಬಗ್ಗೆ ಬ್ರಿಟಿಷ್ ಹಿಂದೂಗಳೊಂದಿಗೆ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದರು. ಕಳೆದ ಹಲವು ವರ್ಷಗಳಿಂದ ಅವರು ಈ ಮಾತನ್ನು ಹೇಳುತ್ತಲೇ ಬಂದಿದ್ದಾರೆ. ಬ್ರಿಟನ್‌ನಲ್ಲಿ ಯಾವುದೇ ಕಾರಣಕ್ಕೂ ಹಿಂದುಫೋಬಿಯಾಗೆ ಜಾಗವಿರೋದಿಲ್ಲ ಎಂದು ಸ್ಟಾರ್ಮರ್‌ ಹೇಳಿದ್ದರು. ಕಳೆದ ವರ್ಷ ನೀಸ್ಡೆನ್‌ನ BAPS ಶ್ರೀ ಸ್ವಾಮಿನಾರಾಯಣ ಮಂದಿರದಲ್ಲಿ ದೀಪಾವಳಿಯನ್ನು ಆಚರಿಸಿದಾಗ ಅವರು ಇದೇ ಸಂದೇಶವನ್ನು ಮೊದಲ ಬಾರಿಗೆ ತಿಳಿಸಿದ್ದರು.

ಕಳೆದ ವರ್ಷ ಇಂಡಿಯಾ ಗ್ಲೋಬಲ್ ಫೋರಮ್ (IGF) ನಲ್ಲಿ, ಸ್ಟಾರ್ಮರ್ ಭಾರತ-ಯುಕೆ ಸಂಬಂಧಗಳ ಬಗ್ಗೆ ಲೇಬರ್‌ನ ನಿಲುವಿಗೆ ಧ್ವನಿಯನ್ನು ತಿಳಿಸಿದ್ದರು. ಅವರ ಸರ್ಕಾರದ ಅಡಿಯಲ್ಲಿ, ಎರಡು ದೇಶಗಳ ನಡುವಿನ ಸಂಬಂಧವನ್ನು ಪ್ರಜಾಪ್ರಭುತ್ವ ಮತ್ತು ಆಕಾಂಕ್ಷೆಯ ಮೇಲೆ ನಿರ್ಮಿಸಲಾಗುವುದು ಎಂದು ಹೇಳಿದರು. "ನನ್ನ ಲೇಬರ್‌ ಪಕ್ಷದ ಸರ್ಕಾರವು ಭಾರತದೊಂದಿಗೆ ನಮ್ಮ ಹಂಚಿಕೆಯ ಮೌಲ್ಯಗಳ ಪ್ರಜಾಪ್ರಭುತ್ವ ಮತ್ತು ಆಕಾಂಕ್ಷೆಯ ಆಧಾರದ ಮೇಲೆ ಸಂಬಂಧವನ್ನು ಬಯಸುತ್ತದೆ. ಅದು ಮುಕ್ತ ವ್ಯಾಪಾರ ಒಪ್ಪಂದವನ್ನು (FTA) ಬಯಸುತ್ತದೆ, ನಾವು ಆ ಮಹತ್ವಾಕಾಂಕ್ಷೆಯನ್ನು ಹಂಚಿಕೊಳ್ಳುತ್ತೇವೆ, ಆರ್ಥಿಕ ಭದ್ರತೆ, ಜಾಗತಿಕ ಭದ್ರತೆ, ಹವಾಮಾನ ಭದ್ರತೆಗಾಗಿ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ಸಹ ಹಂಚಿಕೊಳ್ಳುತ್ತೇವೆ.” ಅವರು ಹೇಳಿದರು.

ಬ್ರಿಟನ್ ಚುನಾವಣೆ ಫಲಿತಾಂಶ ಭಾರತದ ಮಾರುಕಟ್ಟೆ ಮೇಲೆ ಹೇಗೆ ಪರಿಣಾಮ ಬೀರುತ್ತೆ?

ಬ್ರಿಟನ್‌ನ ಲೇಬರ್ ಪಕ್ಷವು ಒಟ್ಟು 650 ಸ್ಥಾನಗಳಲ್ಲಿ ಸುಮಾರು 410 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇನ್ನೊಂದೆಡೆ ಚುನಾವಣೆಯಲ್ಲಿ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ 130 ಸ್ಥಾನಗಳನ್ನು ಗೆದ್ದಿದೆ. ಶುಕ್ರವಾರ ಮುಂಜಾನೆ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರು ಸೋಲನ್ನು ಒಪ್ಪಿಕೊಂಡರು ಮತ್ತು ದೇಶದ ಮುಂದಿನ ಪ್ರಧಾನಿಯಾಗಲು ಸ್ಟಾರ್ಮರ್‌ ಅವರನ್ನು ಸ್ವಾಗತಿಸಿದ್ದಾರೆ.

ಸುಧಾಮೂರ್ತಿ ಅಳಿಯನಿಗೆ ಸೋಲು, ಯುಕೆ ಚುನಾವಣೆಯಲ್ಲಿ ಇತಿಹಾಸ ಬರೆದ ಕೈರ್ ಸ್ಟಾರ್ಮರ್!

Latest Videos
Follow Us:
Download App:
  • android
  • ios