Asianet Suvarna News Asianet Suvarna News

ಸುಧಾಮೂರ್ತಿ ಅಳಿಯನಿಗೆ ಸೋಲು, ಯುಕೆ ಚುನಾವಣೆಯಲ್ಲಿ ಇತಿಹಾಸ ಬರೆದ ಕೈರ್ ಸ್ಟಾರ್ಮರ್!

ಬ್ರಿಟನ್ ಸಂಸತ್ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಹಾಲಿ ಪ್ರಧಾನಿ ರಿಷಿ ಸುನಕ್ ನೇತೃತ್ವದ ಕನ್ಸರ್ವೇಟೀವ್ ಪಾರ್ಟಿ ಹೀನಾಯ ಸೋಲು ಕಂಡಿದೆ. ಭರ್ಜರಿ ಗೆಲುವಿನ ಮೂಲಕ ಕೈರ್ ಸ್ಟಾರ್ಮರ್ ಹೊಸ ಇತಿಹಾಸ ಬರೆದಿದ್ದಾರೆ.
 

UK election result keir starmer led Labour party cross majority mark sunak concedes defeat ckm
Author
First Published Jul 5, 2024, 11:17 AM IST

ಲಂಡನ್(ಜು.05) ಬ್ರಿಟನ್ ಸಂಸತ್ ಚುನಾವಣೆಯಲ್ಲಿ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ, ಬ್ರಿಟನ್ ಹಾಲಿ ಪ್ರಧಾನಿ ರಿಷಿ ಸುನಕ್ ತೀವ್ರ ಮುಖಭಂಗ ಅನುಭವಿಸಿದ್ದಾರೆ. 650 ಸದಸ್ಯ ಬಲದ ಬ್ರಿಟನ್‌ ಸಂಸತ್ ಚುನಾವಣೆಯಲ್ಲಿ ಕೈರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿ 326 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದರೆ, ರಿಷಿ ಸುನಕ್ ನೇತೃತ್ವದ ಕನ್ಸರ್ವೇಟೀವ್ ಪಾರ್ಟಿ ಕೇವಲ 61 ಸ್ಥಾನದಲ್ಲಿ ಮುನ್ನಡೆ ಪಡೆದುಕೊಂಡಿದೆ. ಫಲಿತಾಂಶ ಹೊರಬೀಳುತ್ತಿದ್ದಂತೆ ರಿಷಿ ಸುನಕ್ ಸೋಲಿನ ಹೊಣೆ ಹೊತ್ತುಕೊಂಡಿದ್ದಾರೆ. ನನ್ನನ್ನು ಕ್ಷಮಿಸಿ, ಸೋಲಿನ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತೇನೆ ಎಂದು ಸುನಕ್ ಹೇಳಿದ್ದಾರೆ.

ಬ್ರಿಟನ್ ಸಂಸತ್ತಿನ ಮ್ಯಾಜಿಕ್ ನಂಬರ್ 326. ಈ ಸಂಖ್ಯಾಬಲ ಹೊಂದಿದ ಪಾರ್ಟಿ ಸರ್ಕಾರ ರಚಿಸಲಿದೆ. ಕಳೆದ 14 ವರ್ಷಗಳಿಂದ ಅಧಿಕಾರದಲ್ಲಿದ್ದ ಕನ್ಸರ್ವೇಟೀವ್ ಪಾರ್ಟಿ ಇದೀಗ ಸೋಲಿಗೆ ಶರಣಾಗಿದೆ. ಸ್ಪಷ್ಟ ಬಹುಮತ ಸಿಕ್ಕಿದೆ. ಇದು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ.  ಬ್ರಿಟನ್ ಸೇವೆಗೆ ಸಜ್ಜಾಗಿದ್ದೇನೆ ಎಂದು ಸ್ಟಾರ್ಮರ್ ಹೇಳಿದ್ದಾರೆ. 

'ವಿ ಲವ್ಯೂ' ರಿಷಿ ಸುನಾಕ್‌ಗೆ ಮಕ್ಕಳಿಂದ ತಂದೆಯ ದಿನದ ಶುಭಾಶಯ; ಇಲ್ಲಿವೆ ಕ್ಯೂಟ್ ಫೋಟೋಸ್

ಚುನಾವಣಾ ಪೂರ್ವ ಸಮೀಕ್ಷೆಗಳು ವಿಪಕ್ಷ ಲೇಬರ್‌ ಪಾರ್ಟಿ ಅಭೂತಪೂರ್ವ ಗೆಲುವು ಸಾಧಿಸುವ ಸುಳಿವು ನೀಡಿತ್ತು. ಹೀಗಾಗಿ ಚುನಾವಣಾ ಫಲಿತಾಂಶ ಸಾಕಷ್ಟು ಕುತೂಹಲ ಕೆರಳಿಸಿತ್ತು. 650 ಕ್ಷೇತ್ರಗಳಿಗೆ 392 ನೊಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸುವ ಅವಕಾಶ ಹೊಂದಿದ್ದರೂ ಕನ್ಸರ್ವೇಟಿವ್‌ ಮತ್ತು ಲೇಬರ್‌ ಪಕ್ಷದ ನಡುವೆ ನೇರ ಹಣಾಹಣಿ ಎರ್ಪಿಟ್ಟಿತ್ತು. ಫಲಿತಾಂಶ ಮಾಹಿತಿ ಹೊರಬೀಳುತ್ತಿದ್ದಂತೆ ರಿಷಿ ಸುನಕ್ ಹಾಗೂ ಪಾರ್ಟಿ ನಾಯಕರಿಗೆ ತೀವ್ರ ಹಿನ್ನಡೆಯಾಗಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಸ್ಟಾರ್ಮರ್ ಅವರ ಲೇಬರ್ ಪಾರ್ಟಿಗೆ 460 ಸ್ಥಾನ ನೀಡಿತ್ತು. ಇನ್ನು ರಿಷಿ ಸುನಕ್ ಕನ್ಸರ್ವೇಟೀವ್ ಪಾರ್ಟಿಗೆ 131 ಸ್ಥಾನ ನೀಡಿದ್ದರೆ, ಲಿಬರಲ್ ಡೆಮಾಕ್ರಾಟ್ಸ್ ಪಾರ್ಟಿಗೆ 60 ಸ್ಥಾನ ನೀಡಿತ್ತು. 

ಸೋಲಿನತ್ತ ಮುಖಮಾಡುತ್ತಿದ್ದಂತೆ ರಿಷಿ ಸುನಕ್ ನಾಯಕರು ಬೆಂಬಲಿಗರ ಜೊತೆ ಮಾತನಾಡಿದ್ದಾರೆ. ಮತ್ತೆ ಪಕ್ಷವನ್ನು ಕಟ್ಟಿ ಬೆಳೆಸುತ್ತೇವೆ ಎಂದಿದ್ದಾರೆ. 

2019ರಲ್ಲಿ ನಡೆದಿದ್ದ ಕಳೆದ ಚುನಾವಣೆಯಲ್ಲಿ ಭಾರತೀಯ ಮೂಲದ 15 ಜನರು ಸಂಸತ್‌ಗೆ ಆಯ್ಕೆಯಾಗಿದ್ದರು. ಈ ಬಾರಿ ಈ ಪ್ರಮಾಣ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ. ಈ ಬಾರಿ ಸಂಸತ್‌ ಚುನಾವಣೆಗೆ ಸ್ಪರ್ಧಿಸಿರುವವರ ಪೈಕಿ ಶೇ.14ರಷ್ಟು ಜನರು ಜನಾಂಗೀಯ ಅಲ್ಪಸಂಖ್ಯಾತ ಹಿನ್ನೆಲೆಯವರಾಗಿದ್ದು, ಈ ಬಾರಿ ಲೇಬರ್‌ ಪಕ್ಷ ಅಧಿಕಾರಕ್ಕೆ ಅಲ್ಲಿಂದ ಕಣಕ್ಕೆ ಇಳಿದಿರುವ ಹೆಚ್ಚಿನ ಸಂಖ್ಯೆಯ ಭಾರತೀಯರು ಸಂಸತ್‌ ಪ್ರವೇಶ ಮಾಡುವುದು ಖಚಿತವಾಗಿದೆ.

ರಿಷಿ ಜೊತೆ ಸುಧಾ ಮೂರ್ತಿ ಮಗಳು ಒಳ್ಳೇ ಸಂಬದಕ್ಕಿವು ಕಾರಣಗಳು, ಅಕ್ಷತಾ ಹೇಳಿದ ಗುಟ್ಟು!
 

Latest Videos
Follow Us:
Download App:
  • android
  • ios