ನವದೆಹಲಿ(ಡಿ.15): ಭಾರತ ತನ್ನ ಮುಂದಿನ ಗಣರಾಜ್ಯೋತ್ಸವ ಸಮಾರಂಭಕ್ಕೆ ಬ್ರಿಟನ್ ಪ್ರಧಾನಿ ಜಾನ್ಸನ್ ಬೋರಿಸ್‌ರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿತ್ತು. ಭಾರತದ ಈ ಆಮಂತ್ರಣವನ್ನು ಪಿಎಂ ಬೋರಿಸ್ ಸ್ವೀಕರಿಸಿದ್ದಾರೆ. ಜನವರಿ 26 ರಂದು ಜಾನ್ಸನ್ ಬೋರಿಸ್ ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬ್ರಿಟನ್ ವಿದಸೇಶಾಂಗ ಸಚಿವ ಮಂಗಳವಾರ ಈ ಘೋಷಣೆ ಮಾಡಿದ್ದಾರೆ.

1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಕೊರೋನಾ ಲಸಿಕೆ: ಸರ್ವ ಪಕ್ಷ ಸಭೆಯಲ್ಲಿ ನಿರ್ಧಾರ!

ಸುದ್ದಿ ಸಂಸ್ಥೆ Reuters ಅನ್ವಯ ಜಾನ್ಸನ್ ಆಫೀಸ್ ಪ್ರಕಟಣೆ ಹೊರಡಿಸಿದ್ದು, ಇದರಲ್ಲಿ ಪಿಎಂ ಭಾರತಕ್ಕೆ ಭೇಟಿ ನೀಡುವ ವಿಚಾರವಾಗಿ ಭಾರೀ ಉತ್ಸಾಹ ತೋರಿದ್ದಾರೆ. ಅಧಿಕೃತ ಹೇಳಿಕೆಯಲ್ಲಿ ಅವರು 'ನಾಣು ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುತ್ತೇನೆಂದು ಬಹಳ ಖುಷಿಯಾಗಿದೆ. ಇದು ಗ್ಲೋಬಲ್ ಬ್ರಿಟನ್‌ಗೆ ಬಹಳ ಉತ್ಸಾಹಭರಿತ ವರ್ಷದ ಆರಂಭವಾಗಿದೆ. ನಾನು ಭಾರತದೊಂದಿಗೆ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಎತ್ತರಕ್ಕೊಯ್ಯುವ ಪಿಎಂ ಮೋದಿಯವರಿಗೆ ಕೊಟ್ಟ ಮಾತು ನೆರವೇರಿಸಲು ಉತ್ಸುಕನಾಗಿದ್ದೇನೆ' ಎಂದಿದ್ದಾರೆ.

ಬ್ರಿಟನ್‌ ಪ್ರಧಾನಿಯಾದ ಬಳಿಕ ಜಾನ್ಸನ್ ಬೋರಿಸ್ ಭಾರತಕ್ಕೆ ಭೇಟಿ ನೀಡುವುದು ಇದೇ ಮೊದಲ ಬಾರಿಯಾಗಿದೆ. ಜೊತೆಗೆ ಅವರು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಗಣರಾಜ್ಯೋತ್ಸವದಂದು ಅತಿಥಿಯಾಗಿ ಆಗಮಿಸುತ್ತಿರುವ ಎರಡನೇ ಬ್ರಿಟಿಷ್ ನಾಯಕರಾಗಿದ್ದಾರೆ. ಇದಕ್ಕೂ ಮುನ್ನ 1993ರಲ್ಲಿ ಜಾನ್ ಮೇಜರ್ ಬಂದಿದ್ದರು.

ಭಾರತದ ಹೊಸ ಗೆಳೆತನ; ಈ ಬಾರಿ ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿ

ಭಾರತದ ವಿದೇಶಾಂಗ ಸಚಿವ ಎಸ್. ಜಯಶಂಕರ್ ಮಾತನಾಡುತ್ತಾ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮದ ಆಮಂತ್ರಣ ಸ್ವೀಕರಿಸಿರುವುದು ಭಾರತ ಹಾಗೂ ಬ್ರಿಟನ್‌ ದೇಶಗಳ ಸಂಬಂಧದಲ್ಲಿ ಹೊಸ ಶಕೆ ಆರಂಭವಾಗುವ ಸಂದೇಶ ನೀಡಿದೆ' ಎಂದಿದ್ದಾರೆ.