ಭಾರತದ 2021ರ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಆಹ್ವಾನ/ ದೂರವಾಣಿ ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಬೋರಿಸ್ ಜಾನ್ಸನ್ ಗೆ ಆಹ್ವಾನ/ ಇಂಗ್ಲೆಂಡ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ ಜಿ–7 ಶೃಂಗಸಭೆಗೆ ಪ್ರಧಾನಿ ಮೋದಿ ಸಹ ಹೋಗಲಿದ್ದಾರೆ
ನವದೆಹಲಿ ( ಡಿ. 02) ಭಾರತದ 2021ರ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಆಹ್ವಾನ ನೀಡಿದೆ ಎಂದು ವರದಿಯಾಗಿದೆ. ನವೆಂಬರ್ 27ರಂದು ನಡೆದಿರುವ ದೂರವಾಣಿ ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೋರಿಸ್ ಜಾನ್ಸನ್‌ರನ್ನು ಆಹ್ವಾನಿಸಿದ್ದಾರೆ.
ಭಾರತ ಸರ್ಕಾರವಾಗಲಿ ಬ್ರಿಟನ್ ಆಗಲಿ ಈ ಸುದ್ದಿಯ ಬಗ್ಗೆ ಯಾವುದೆ ಅಧಿಕೃತ ಹೇಳಿಕೆ ನೀಡಿಲ್ಲ. ಜನವರಿ 26, 2021ರಂದು ಭಾರತ 72ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಸಿದ್ಧವಾಗುತ್ತಿದ್ದು ಬ್ರಿಟನ್ ಪ್ರಧಾನಿ ಆಗಮಿಸಲಿದ್ದಾರೆ ಎನ್ನಲಾಗಿದೆ.
ಗಣರಾಜ್ಯೋತ್ಸವದಲ್ಲಿ ಮಂಡ್ಯದ ಜೋಡೆತ್ತುಗಳ ಪುಳಕ
ಇಂಗ್ಲೆಂಡ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ ಜಿ–7 ಶೃಂಗಸಭೆಗೆ ಪ್ರಧಾನಿ ಮೋದಿ ಅವರನ್ನು ಬೋರಿಸ್ ಆಹ್ವಾನಿಸಿದ್ದು ಒಂದು ಕಡೆ ಆದರೆ ಭಾರತದ ಗಣರಾಜ್ಯೋತ್ಸವದ ಆಚರಣೆಯಲ್ಲಿ ಬೋರಿಸ್ ಮುಖ್ಯ ಅತಿಥಿಯಾಗಿ ಬರುವಂತೆ ಪ್ರಧಾನಿ ಮೋದಿ ಆಹ್ವಾನಿಸಿದ್ದಾರೆ.
ಬ್ರಿಟನ್ ಈಗಷ್ಟೇ ಐರೋಪಿಯನ್ ಒಕ್ಕೂಟದಿಂದ ಹೊರಬಂದಿದ್ದು, ಜಗತ್ತಿನ ಎಲ್ಲ ದೇಶಗಳ ಜತೆಗೆ ಹೊಸದಾಗಿ ಒಪ್ಪಂದಗಳನ್ನು ಮಾಡಿಕೊಳ್ಳಲು ಎದುರು ನೋಡುತ್ತಿದೆ ಎನ್ನುವುದು ಅಂತಾರಾಷ್ಟ್ರೀಯ ಚಿಂತಕರ ದೃಷ್ಟಿಕೋನ.
Read Exclusive COVID-19 Coronavirus News updates, from Karnataka, India and World at Asianet News Kannada.
Last Updated Dec 2, 2020, 9:11 PM IST