ಭಾರತದ ಎಚ್ಚರಿಕೆಗೆ ಬೆಚ್ಚಿ ಬಿದ್ದ ಬ್ರಿಟನ್: ಕ್ವಾರಂಟೈನ್‌ ನೀತಿ ಬದಲು!

* ಕೋವಿ​ಶೀಲ್ಡ್‌ ಲಸಿಕೆ ಪಡೆದುಕೊಂಡಿದ್ದರೂ 10 ದಿನಗಳ ಕ್ವಾರಂಟೈನ್‌ ಆಗಬೇಕು ಎಂದಿದ್ದ ಬ್ರಿಟನ್

* ಬ್ರಿಟನ್‌ನ ತಾರತಮ್ಯ ಕ್ವಾರಂಟೈನ್‌ ನೀತಿಗೆ ಭಾರತದಿಂದ ಆಕ್ಷೇಪ

* ಅಗತ್ಯ ಬಿದ್ದರೆ ಪ್ರತೀಕಾರ ಕ್ರಮ: ಬ್ರಿಟ​ನ್‌ಗೆ ಎಚ್ಚ​ರಿ​ಕೆ

* ಎಚ್ಚರಿಕೆ ಬೆನ್ನಲ್ಲೇ ಪ್ರಯಾಣ ನಿಯಮ ಸಡಿಲಿಸಿದ ಬ್ರಿಟನ್  

UK lists Covishield as approved Covid 19 vaccine in revised travel advisory pod

ನವದೆಹಲಿ(ಸೆ. 22): ‘ಭಾರತೀಯರು 2 ಡೋಸ್‌ ಕೋವಿ​ಶೀಲ್ಡ್‌ ಲಸಿಕೆ(Covishield Vaccine) ಪಡೆದುಕೊಂಡಿದ್ದರೂ 10 ದಿನಗಳ ಕ್ವಾರಂಟೈನ್‌(Quarantine) ಆಗಬೇಕು’ ಎಂಬ ನಿಯಮ ಜಾರಿಗೊಳಿಸಿದ್ದ ಬ್ರಿಟನ್, ಭಾರತ ಸರ್ಕಾರದ ಆಕ್ಷೇಪದ ಬೆನ್ನಲ್ಲೇ ಪ್ರಯಾಣಿಕರ ನಿಯಮವನ್ನು(Travel Rules) ಸಡಿಲಗೊಳಿಸಿದೆ. ಬುಧವಾರ ಇದು AstraZeneca Covishield ಲಸಿಕೆಗೆ ಮಾನ್ಯತೆ ನೀಡಿದೆ. ಈ ಮೂಲಕ ಇನ್ಮುಂದೆ ಕಕೊರೋನಾ ಎರಡೂ ಡೋಸ್‌ ಲಡಿಕೆ ಪಡೆದವರು ಕ್ವಾರಂಟೈನ್ ಆಗಬೇಕಿಲ್ಲ. 

ಬ್ರಿಟನ್‌ನ ತಾರತಮ್ಯ ಕ್ವಾರಂಟೈನ್‌ ನೀತಿಗೆ ಭಾರತದಿಂದ ಆಕ್ಷೇಪ!

ಅಗತ್ಯ ಬಿದ್ದರೆ ಪ್ರತೀಕಾರ ಕ್ರಮ: ಬ್ರಿಟ​ನ್‌ಗೆ ಎಚ್ಚ​ರಿ​ಕೆ

ಯುಕೆ ಸರ್ಕಾರವು ಸೆಪ್ಟೆಂಬರ್ 18 ರಂದು ಈ ನೂತನ ನಿಯಮವನ್ನು ಹೊರಡಿಸಿತು. ಇದರ ಪ್ರಕಾರ, ಭಾರತವನ್ನು ಹೊರತುಪಡಿಸಿ, ಆಫ್ರಿಕಾ, ದಕ್ಷಿಣ ಅಮೆರಿಕ, ಯುನೈಟೆಡ್ ಅರಬ್ ಎಮಿರೇಟ್ಸ್, ಟರ್ಕಿ, ಜೋರ್ಡಾನ್, ಥೈಲ್ಯಾಂಡ್ ಮತ್ತು ರಷ್ಯಾದಲ್ಲಿ ಲಸಿಕೆ ಹಾಕಿದ ಜನರು ಕೂಡ ಯುಕೆಯಲ್ಲಿ ಲಸಿಕೆ ಹಾಕಿಲ್ಲ ಎಂದು ಪರಿಗಣಿಸಲಾಗುತ್ತದೆ ಎಂದಿತ್ತು. ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಈ ನಿಯಮವನ್ನು ಅಸಂಬದ್ಧವೆಂದು ಟ್ವೀಟ್ ಮಾಡಿದ್ದರು. ಶಶಿ ತರೂರ್(Shash Tharoor) ಅವರನ್ನು ಬ್ರಿಟನ್‌ನಲ್ಲಿ ತಡೆಯಲಾಗಿತ್ತು. ಇದರಿಂದಾಗಿ ಅವರು ತಮ್ಮ ಕೆಲಸಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಅವನು ಅದನ್ನು ಅವಮಾನಕರ ಎಂದು ಉಲ್ಲೇಖಿಸಿದ್ದರು. ಈ ನಿಯಮಗಳು ಜನಾಂಗೀಯ ನಿಂದನೆ ಎಂದೂ ಕರೆದಿದ್ದರು.

ಇನ್ನು ಕೋವಿಶೀಲ್ಡ್‌ ಲಸಿಕೆಯನ್ನು ಬ್ರಿಟನ್‌ನಲ್ಲಿಯೇ ಅಭಿವೃದ್ಧಿಪಡಿಸಲಾಗಿದೆ ಎಂಬುವುದು ಉಲ್ಲೇಖನೀಯ. ಸೀರಮ್(Serum) ಸಂಸ್ಥೆಯೇ ಈ ಲಸಿಕೆಯನ್ನು ಬ್ರಿಟನ್‌ಗೆ ಪೂರೈಸಿದೆ. ಹೀಗಿರುವಾಗ ಈ ಕ್ವಾರಂಟೈನ್ ಹಾಗೂ ಪ್ರಯಾಣಿಕರ ನೂತನ ನಿಯಮಗಳ ಸಮಸ್ಯೆಯನ್ನು ಪರಿಹರಿಸುವಂತೆ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಬ್ರಿಟನ್‌ಗೆ ಕೇಳಿದ್ದರು.

ಲಸಿಕೆ ಪಡೆದರೂ ಬ್ರಿಟನ್‌ಗೆ ಹೋಗೋ ಭಾರತೀಯರಿಗೆ ಸಂಕಷ್ಟ!

ವಿದೇಶಾಂಗ ಸಚಿವರಿಂದಲೂ ಈ ವಿಚಾರ ಪ್ರಸ್ತಾಪ

ಯುಎನ್ ಜನರಲ್ ಅಸೆಂಬ್ಲಿಯ 76 ನೇ ಸಭೆಯಲ್ಲಿ ಭಾಗವಹಿಸಲು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಂಗಳವಾರ ಬೆಳಿಗ್ಗೆ ನ್ಯೂಯಾರ್ಕ್‌ಗೆ ತೆರಳಿದ್ದಾರೆ. ಈ ವೇಳೆ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರನ್ನು ಭೇಟಿ ಮಾಡುವ ಮೂಲಕ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

Latest Videos
Follow Us:
Download App:
  • android
  • ios