ಪ್ರಾಣಿಗಳ ಮೇಲೆ ಅಂಗಡಿ ಮಾಲೀಕನ ಪ್ರೀತಿ ಅಂಗಡಿ ಮುಂದೆ ಕಾಯುವ ನಾಯಿಗಳು ಪ್ರತಿದಿನ ಆಹಾರ ನೀಡುವ ವ್ಯಕ್ತಿ

ಟರ್ಕಿ(ಜ.3): ಅಂಗಡಿಯೊಂದನ್ನು ಹೊಂದಿರುವ ಟರ್ಕಿ ವ್ಯಕ್ತಿಯೊಬ್ಬರು ಬೀದಿ ನಾಯಿಗಳು ಹಾಗೂ ಬೆಕ್ಕು ಮುಂತಾದ ಪ್ರಾಣಿಗಳಿಗೆ ಪ್ರತಿ ದಿನವೂ ಆಹಾರ ನೀಡುತ್ತಿದ್ದು, ಅಂಗಡಿ ಮುಂದೆ ಬೆಕ್ಕು ನಾಯಿಗಳು ಇವರಿಗಾಗಿ ಕಾದು ಕುಳಿತಿರುತ್ತವೆ. ಇವರ ಈ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಇವರ ಪ್ರಾಣಿ ಪ್ರೀತಿಗೆ ಭೇಷ್‌ ಎಂದಿದ್ದಾರೆ. 

ಯೆಮ್ ಎಟ್ ಗ್ಯಾಲೆರಿಸಿ (Yeim Et Galerisi) ಎಂಬ ಹೆಸರಿನ ಮಾಂಸದ ಅಂಗಡಿಯನ್ನು ಹೊಂದಿರುವ ಇಕ್ರಮ್ ಕೊರ್ಕ್‌ಮಾಜರ್ (Ikram Korkmazer) ತನ್ನ ಅಂಗಡಿಯ ಮುಂದೆ ಕಾಯುತ್ತಿರುವ ರೋಮದಿಂದ ಕೂಡಿದ ತನ್ನ ಸ್ನೇಹಿತರು ಯಾರೂ ಕೂಡ ಹಸಿವಿನಿಂದ ಬಳಲದಂತೆ ನೋಡಿಕೊಳ್ಳುತ್ತಾರೆ.

View post on Instagram
View post on Instagram

ಇರಾಮ್ ನಿಯಮಿತವಾಗಿ ತನ್ನ ಅಂಗಡಿಯ ಮುಂದೆ ಊಟಕ್ಕಾಗಿ ಕಾಯುತ್ತಿರುವ ಬೀದಿನಾಯಿಗಳು ಮತ್ತು ಬೆಕ್ಕುಗಳ ವೀಡಿಯೊಗಳನ್ನು ಇನ್ಸ್ಟಾಗ್ರಾಮ್‌ ( Instagram)ನಲ್ಲಿ ಹಂಚಿಕೊಂಡಿದ್ದಾರೆ. ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಇರುವ ಈ ವೀಡಿಯೊವು ಅವರು ಅಂಗಡಿಯ ಹೊರಗೆ ಆಹಾರದ ಬಟ್ಟಲಿನೊಂದಿಗೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ. ಈ ವೇಳೆ ಇದಕ್ಕಾಗಿಯೇ ಕಾದು ಕುಳಿತಿರುವ ಬೀದಿ ನಾಯಿ ಬಾಲವನ್ನು ಅಲ್ಲಾಡಿಸುತ್ತ ಅವರನ್ನು ಸ್ವಾಗತಿಸುತ್ತದೆ. ಈ ವಿಡಿಯೋವನ್ನು 49,000 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ಅನೇಕರು ಪ್ರಾಣಿಗಳ ಮೇಲೆ ದಯೆ ತೋರಿದ ಇಕ್ರಂ ಬಗ್ಗೆ ಕೊಂಡಾಡಿದ್ದಾರೆ. 

Hurdle Jumps: ಶ್ವಾನದ ಜಂಪಿಂಗ್‌ ಜಪಾಂಗ್‌... ನಕ್ಕು ನಗಿಸುವ ವಿಡಿಯೋ...

ಹೊಸ ವರ್ಷದಲ್ಲಿ, ಹೊಸ ಸಾಧ್ಯತೆಗಳು ಬಹಳಷ್ಟು ಭರವಸೆ ಮೂಡಿಸುತ್ತವೆ. ಮುಂದಿನ ಪೀಳಿಗೆ ಹೆಮ್ಮೆ ಪಡುವಂತಹ ಉತ್ತಮ ನಾಳೆಯನ್ನು ನಿರ್ಮಿಸುವ ಭರವಸೆ. ಆದಾಗ್ಯೂ, ಕೆಲವು ನಾಯಕರು ಸದ್ದಿಲ್ಲದೆ ಉತ್ತಮ ನಾಳೆಯನ್ನು ರಚಿಸಲು ಕೆಲಸ ಮಾಡುತ್ತಾರೆ ಮತ್ತು ಟರ್ಕಿಯ ಈ ವ್ಯಕ್ತಿ ಅದಕ್ಕೆ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. 

ನೀ ಅನಾಥನಲ್ಲ ನಿನಗೆ ನಾನು ನನಗೆ ನೀನು.... ನಿರ್ಗತಿಕನಿಗೆ ಜೊತೆಯಾದ ಶ್ವಾನ

View post on Instagram

ಇತ್ತೀಚೆಗೆ ಮನೆ ಇಲ್ಲದೇ ಬೀದಿಯಲ್ಲಿ ಮಲಗಿದ್ದ ನಿರ್ಗತಿಕನೋರ್ವನನ್ನು ನಾಯಿ ಮುದ್ದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ನೋಡುಗರ ಕಣ್ಣಲ್ಲಿ ನೀರು ತರಿಸುವಂತಿದೆ. ನಾಯಿಯೊಂದು ಅನಾಥನಿಗೆ ನೀ ಅನಾಥನಲ್ಲ, ನಿನಗೆ ನನ್ನಿದ್ದೇನೆ ಎಂದು ಹೇಳುವಂತಿದೆ ಈ ವಿಡಿಯೋ. ನಾಯಿ ಮನುಷ್ಯನ ಬೆಸ್ಟ್ ಫ್ರೆಂಡ್‌ ಎಂಬುದನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಈ ವಿಡಿಯೋ ನೋಡಿದರೆ ಅದು ನಿಜ ಎನಿಸುತ್ತಿದೆ. ಈ ವಿಡಿಯೋವನ್ನು ಡಿಸೆಂಬರ್‌ 30 ರಂದು Buitengebieden ಎಂಬ ಟ್ವಿಟ್ಟರ್‌ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಕೇವಲ ಒಂದು ದಿನದಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

ಮನೆ ಇಲ್ಲದ ನಿರ್ಗತಿಕನೋರ್ವ ಬೀದಿಯ ರಸ್ತೆ ಬದಿಯಲ್ಲಿ ಕುಳಿತಿರುತ್ತಾನೆ. ಎತ್ತಲೋ ನೋಡುತ್ತಾ ಕುಳಿತಿದ್ದ ಆತನ ಬಳಿ ಬರುವ ನಾಯಿ ಆತನನ್ನು ಸ್ವಲ್ಪ ಹೊತ್ತು ದಿಟ್ಟಿಸಿ ನೋಡುತ್ತದೆ. ನಂತರ ಅದರದ್ದೇ ಭಾಷೆಯಲ್ಲಿ ಮಾತನಾಡಿಸಲು ಪ್ರಯತ್ನಿಸುತ್ತದೆ. ಅಲ್ಲದೇ ಎರಡು ಕೈಗಳನ್ನು ಆತನ ಮೇಲಿಟ್ಟು ಆತನನ್ನು ಮುದ್ದಾಡಲು ನೋಡುತ್ತದೆ. ಅಲ್ಲದೇ ಅವನನ್ನು ಸಮಾಧಾನ ಪಡಿಸುತ್ತಿರುವಂತೆ ಕಾಣುತ್ತದೆ. ನಾಯಿಗೆ ಅದೇ ರೀತಿ ಸ್ಪಂದಿಸಿದ ಮನುಷ್ಯ ಅದಕ್ಕೆ ಪ್ರತಿಯಾಗಿ ತಾನು ಕೂಡ ನಾಯಿಯನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ.