ಮೊಗದಿಶು(ಡಿ.28): ಸೊಮಾಲಿಯಾ ರಾಜಧಾನಿ ಮೊಗದಿಶುನ ಹೊರವಲಯದಲ್ಲಿ ಉಗ್ರರು ಟ್ರಕ್ ಬಾಂಬ್ ಸ್ಫೋಟಿಸಿದ್ದು, ಕನಿಷ್ಟ 76 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.  

ಮೊಗದಿಶುವಿನ ಹೊರವಲಯದ ಅಫ್‍ಗೊಯೆ ರಸ್ತೆಯಲ್ಲಿರುವ ಭದ್ರತಾ ತಪಾಸಣಾ ಕೇಂದ್ರದ ಸಮೀಪ ಆತ್ಮಾಹುತಿ ದಾಳಿ ನಡೆದಿದ್ದು, ಘಟನೆಯಲ್ಲಿ ಕನಿಷ್ಠ 76 ಮಂದಿ ಸಾವನ್ನಪ್ಪಿದ್ದಾರೆ ಎಂದು ವಕ್ತಾರ ಇಸ್ಮಾಯಿಲ್ ಮುಖ್ತಾರ್ ಸ್ಪಷ್ಟಪಡಿಸಿದ್ದಾರೆ.

ಸುಡಾನ್‌ ಫ್ಯಾಕ್ಟರಿಯಲ್ಲಿ ಸ್ಫೋಟ: 18 ಭಾರತೀಯರು ಸೇರಿ 23 ಜನರ ದುರ್ಮರಣ!

ದಾಳಿಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಇದುವರೆಗೆ 76 ಮೃತದೇಹಗಳನ್ನು ಗುರುತಿಸಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಮೊಹಮ್ಮದ್ ಯೂಸಫ್ ಮಾಹಿತಿ ನೀಡಿದ್ದಾರೆ.

ಕಳೆದ ಡಿ. 10ರಂದು ಮೊಗದಿಶು ನಗರದ ಪ್ರಸಿದ್ಧ ಶಬಾಬ್ ಹೋಟೆಲ್ ಅನ್ನು ಉಗ್ರರು ಸ್ಫೋಟಿಸಿದ್ದರು. ಈ ಘಟನೆಯಲ್ಲಿ ನಾಲ್ವರು ನಾಗರಿಕರು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.