Asianet Suvarna News Asianet Suvarna News

ಬೆಂಗಳೂರಿನ ಕಂಟೊನ್ಮೆಂಟ್ ರೈಲು ನಿಲ್ದಾಣ ದುರಸ್ತಿ, ಡಿ.20ರ ವರೆಗೆ 41 ರೈಲು ನಿಲುಗಡೆ ರದ್ದು!

ಬೆಂಗಳೂರಿನ ಕಂಟೊನ್ಮೆಂಟ್ ರೈಲು ನಿಲ್ದಾಣದಲ್ಲಿ ದುರಸ್ತಿ ಕಾಮಗಾರಿ ಆರಂಭಗೊಳ್ಳುವ ಹಿನ್ನಲೆಯಲ್ಲಿ ಬರೋಬ್ಬರಿ 41 ರೈಲು ನಿಲಗಡೆ ರದ್ದು ಮಾಡಲಾಗುತ್ತಿದೆ. ಡಿಸೆಂಬರ್ 20 ರವರೆಗೆ ಯಾವ ರೈಲು ನಿಲುಗಡೆ ರದ್ದಾಗಲಿದೆ? ಇಲ್ಲಿದೆ ಪಟ್ಟಿ
 

Bengaluru Cantonment railway platform 1 and 2 widening leads cancellation of 41 trains ckm
Author
First Published Aug 23, 2024, 10:58 AM IST | Last Updated Aug 23, 2024, 10:58 AM IST

ಬೆಂಗಳೂರು(ಆ.23) ದೇಶದ ಹಲವು ರೈಲು ನಿಲ್ದಾಣಗಳ ದುರಸ್ತಿ ಕಾರ್ಯಗಳು ನಡೆಯುತ್ತಿದೆ. ಬೆಂಗಳೂರಿಗೆ ಪ್ರಮುಖ 2 ರೈಲು ನಿಲ್ದಾಣದಲ್ಲಿ ದುರಸ್ತಿ ಕಾರ್ಯ ನಡೆಯಲಿದೆ. ಯಶವಂತಪುರ ಹಾಗೂ ಕಂಟೊನ್ಮೆಂಟ್(ದಂಡು) ರೈಲ್ವೇ ನಿಲ್ದಾಣ ಎರಡಲ್ಲೂ ಕಾಮಗಾರಿ ಆರಂಭಗೊಳ್ಳುತ್ತಿದೆ. ಈ ಪೈಕಿ ಕಂಟೊನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿನ 1 ಹಾಗೂ 2 ಪ್ಲಾಟ್‌ಫಾರ್ಮ್ ಸಂಪೂರ್ಣವಾಗಿ ಸ್ಥಗತಿಗೊಳ್ಳಲಿದೆ. ಇದರ ಪರಿಣಾಮ 411 ರೈಲುಗಳ ನಿಲುಗಡೆ ರದ್ದು ಮಾಡಲಾಗಿದೆ.

ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20ರ ವರೆಗೆ ಬರೋಬ್ಬರಿ 92 ದಿನಗಳ ಕಾಲ ಕಾಮಗಾರಿ ನಡೆಯಲಿದೆ. ಕಂಟೊನ್ಮೆಂಟ್ ನಿಲ್ದಾಣದ 1ನೇ ಹಾಗೂ 2ನೇ ಪ್ಲಾಟ್‌ಫಾರ್ಮ್‌ಗೆ ಬರವು ಹಾಗೂ ತೆರಳುವ ಎಲ್ಲಾ ರೈಲುಗಳ ನಿಲಗಡೆ ರದ್ದಾಗಿದೆ ಎಂದು ನೈಋತ್ಯ ರೈಲ್ವೇ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರತಿ ದಿನ ಸಂಚರಿಸುವ ರೈಲುಗಳು ರದ್ದಾಗಿದೆ. ಇದರಿಂದ ಪ್ರಯಾಣಿಕರು ಸಮಸ್ಯೆ ಅನುಭವಿಸುವಂತಾಗಿದೆ.

ಯಶವಂತಪುರ ರೈಲ್ವೇ ನಿಲ್ದಾಣ ಕಾಮಗಾರಿಯಿಂದ ಕೆಲ ರೈಲು ಸೇವೆ ರದ್ದು, ಇಲ್ಲಿದೆ ಕ್ಯಾನ್ಸಲ್ ಪಟ್ಟಿ!

 ಪ್ರತಿ ದಿನ ಸಂಚರಿಸುವ ಮೈಸೂರು-ಎಸ್‌ಎಂವಿಟಿ ಬೆಂಗಳೂರು ರೈಲು ಸಂಖ್ಯೆ 06269, ವಾರಕೊಮ್ಮೆ ಸಂಚರಿಸುತ್ತಿರುವ ಮೈಸೂರು- ರೇಣಿಗಂಟ ರೈಲು ಸಂಖ್ಯೆ 22135, ಪ್ರತಿ ದಿನ ಸಂಚರಿಸುವ ಕೆಎಸ್ಆರ್ ಬೆಂಗಳೂರು--ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು, ಕೆಎಸ್ಆರ್ ಬೆಂಗಳೂರು-ಎರ್ನಾಕುಲಂ ರೈಲು ಸಂಖ್ಯೆ 12677,  ಮುರುಡೇಶ್ವರ-ಎಸ್‌ಎಂವಿಟಿ ಬೆಂಗಳೂರು ರೈಲು ಸಂಖ್ಯೆ 16586, ಕೆಎಸ್ಆರ್ ಬೆಂಗಳೂರು-ಮಾರಿಕುಪ್ಪಂ ರೈಲು ಸಂಖ್ಯೆ 06396, ಕೆಎಸ್ಆರ್ ಬೆಂಗಳೂರು-ಶ್ರೀ ಸತ್ಯಸಾಯಿ ಪ್ರಶಾಂತಿನಿಲಯಂ ರೈಲು ಸಂಖ್ಯೆ 06515,  ಕೆಎಸ್ಆರ್ ಬೆಂಗಳೂರು-ಕೋಲಾರ ರೈಲು ಸಂಖ್ಯೆ 06387, ಮೈಸೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು, ಕೆಎಸ್ಆರ್ ಬೆಂಗಳೂರು-ಭುವನೇಶ್ವರ ರೈಲು, ಕೆಎಸ್ಆರ್ ಬೆಂಗಳೂರು-ಕೋಲಾರ ನಡುವಿನ ರೈಲುಗಳು ರದ್ದಾಗಿದೆ.

ಕೆಎಸ್ಆರ್ ಬೆಂಗಳೂರು-ಜೋಳಪಟ್ಟಿ, ಕೆಎಸ್ಆರ್ ಬೆಂಗಳೂರು-ವೈಟ್‌ಫೀಲ್ಡ್, ಕೆಎಸ್ಆರ್ ಬೆಂಗಳೂರು-ಬಂಗಾರಪೇಟೆ ರೈಲು, ಮೈಸೂರು-ಜೈಪುರ ರೈಲು, ಮೈಸೂರು-ಕೂಚುೇಲಿ, ಮೈಸೂರು-ಕಾಚಿಗುಡ, ಕೆಎಸ್ಆರ್ ಬೆಂಗಳೂರು-ಧರ್ಮಪುರಿ, ಕೆಎಸ್ಆರ್ ಬೆಂಗಳೂರು-ನವದೆಹಲಿ,   ಕೆಎಸ್ಆರ್ ಬೆಂಗಳೂರು- ಸಿಎಸ್‌ಟಿ ಮುಂಬೈ ಟ್ರೈನ್, ಬೆಂಗಳೂರು-ದೇಬ್ ನಾಂದೇಡ್ ಟ್ರೈನ್‌ಗಳನ್ನು ರದ್ದುಗೊಳಿಸಲಾಗಿದೆ.  

ಯಶಂತಪುರದ ರೈಲು ನಿಲ್ದಾಣದಲ್ಲಿನ ಫ್ಲಾಟ್‌ಫಾರ್ಮ್ ಕಾಮಾಗಾರಿಯಿಂದ ಹಲವು ರೈಲು ಸಂಚಾರ ರದ್ದಾಗಿದೆ. ಕೆಲ ರೈಲುಗಳ ಮಾರ್ಗ ಬದಲಿಸಲಾಗಿದೆ. ಸೆಪ್ಟೆಂಬರ್ 20ರವರೆಗೆ ಯಶವಂತಪುರ ರೈಲು ನಿಲ್ದಾಣ ಪ್ಲಾಟ್‌ಫಾರ್ಮ್ ದುರಸ್ತಿ ಕಾರ್ಯ ನಡೆಯಲಿದೆ. ಎರಡು ಪ್ರಮುಖ ರೈಲು ನಿಲ್ದಾಣದ ಕಾಮಗಾರಿಯಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಪ್ರಯಾಣಿಕರ ಪ್ರಯಾಣಕ್ಕೆ ಅಡಚಣೆಯಾಗಿದೆ. 

ಸ್ಲೀಪರ್‌ನಿಂದ AC ಕ್ಲಾಸ್‌ಗೆ ಉಚಿತ ಅಪ್‌ಗ್ರೇಡ್, ರೈಲ್ವೆ ಇಲಾಖೆಯ ಈ ನಿಯಮ ನಿಮಗೆ ತಿಳಿದಿರಲಿ
 

Latest Videos
Follow Us:
Download App:
  • android
  • ios