Asianet Suvarna News Asianet Suvarna News

Covid Crisis: Omicron, ಡೆಲ್ಟಾಗಿಂತ ಹೆಚ್ಚು ಅಪಾಯಕಾರಿ, ಗೊಂದಲದಲ್ಲಿ ಜಗತ್ತು!

* ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಕೋವಿಡ್-19 ವೈರಸ್‌ನ ಹೊಸ ರೂಪಾಂತರಿ

* ಜಗತ್ತಿನಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ ಒಮಿಕ್ರಾನ್

* ಮಲ್ಟಿಮ್ಯುಟೇಶನ್ ಆಗುತ್ತಿದೆ ಈ ವೈರಸ್

Top UK scientist says new COVID 19 variant Omicron not a disaster vaccination likely to protect pod
Author
Bangalore, First Published Nov 27, 2021, 8:12 PM IST

ನವದೆಹಲಿ(ನ.27): ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಕೋವಿಡ್-19 ವೈರಸ್‌ನ (Covid 19) ಹೊಸ ರೂಪಾಂತರವಾದ ಓಮಿಕ್ರಾನ್ (Omicron) (ಬಿ.1.1.529) ಬಗ್ಗೆ ವಿಶ್ವದ ಅನೇಕ ದೇಶಗಳಲ್ಲಿ ಭೀತಿ ಹುಟ್ಟಿಕೊಂಡಿದೆ. ಇದು ಡೆಲ್ಟಾ (Delta Varient) ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಮಲ್ಟಿಮ್ಯುಟೇಶನ್ ಮಾಡುತ್ತಿರುವ ಈ ವೈರಸ್ ಪ್ರತಿರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ದೇಹವನ್ನೂ ಕಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಿದ್ದರೂ ಈ ರೂಪಾಂತರಿ ವೈರಸ್‌ಗೆ ಲಸಿಕೆ ಪರಿಣಾಮಕಾರಿಯಾಗಿದೆ ಎಂಬುವುದು ಕೊಂಚ ನೆಮ್ಮದಿ ನೀಡುವ ವಿಚಾರ. ಆದರೆ ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ಮತ್ತು ಪರಿಣಾಮಕಾರಿ ಲಸಿಕೆ ಬೇಕಾಗಬಹುದು.

ಮಾಡೆರ್ನಾ ಬೂಸ್ಟರ್ ಡೋಸ್ ಸಿದ್ಧಪಡಿಸುತ್ತದೆ

ಕೊರೋನಾ ವೈರಸ್ ಒಮಿಕ್ರಾನ್‌ನ (Omicron)  ಹೊಸ ರೂಪಾಂತರದಿಂದಾಗಿ ಇಡೀ ಜಗತ್ತು ತಲ್ಲಣಗೊಂಡಿರುವ ನಡುವೆ, ಅಮೇರಿಕನ್ ಫಾರ್ಮಾ ಕಂಪನಿ ಮಾಡೆರ್ನಾ (Moderna) ಬೂಸ್ಟರ್ ಡೋಸ್ ತಯಾರಿಸುವುದಾಗಿ ಘೋಷಿಸಿದೆ. ಹೊಸ ಆತಂಕವನ್ನು ಎದುರಿಸಲು ಕಂಪನಿಯು ಕಾರ್ಯನಿರ್ವಹಿಸುತ್ತಿದೆ ಎಂದು ಮಾಡೆರ್ನಾ ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಕಂಪನಿಯು ತನ್ನ ಅಸ್ತಿತ್ವದಲ್ಲಿರುವ ಲಸಿಕೆಯನ್ನು ಹೊಸ ರೂಪಾಂತರದ ಪ್ರಕಾರ ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ.

ಹೊಸದಾಗಿ ರೂಪಾಂತರವಾದ ಒಮಿಕ್ರಾನ್ ಕಳವಳಕ್ಕೆ ಕಾರಣವಾಗಿದೆ ಎಂದು ಮಾಡೆರ್ನಾ ಸಿಇಒ ಸ್ಟೀಫನ್ ಬಾನ್ಸೆಲ್ ಹೇಳಿದ್ದಾರೆ. ಇದರ ವಿರುದ್ಧ, ನಾವು ಸಾಧ್ಯವಾದಷ್ಟು ಬೇಗ ನಮ್ಮ ಕಾರ್ಯತಂತ್ರವನ್ನು ಕಾರ್ಯಗತಗೊಳಿಸಲು ತೊಡಗಿದ್ದೇವೆ ಎಂದಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದ ಜೊಸ ತಳಿ ಒಮಿಕ್ರಾನ್

ಕೋವಿಡ್-19 ರ ಹೊಸ ರೂಪಾಂತರಿ, ಓಮಿಕ್ರಾನ್ (B.1.1.529) ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಂಡುಬಂದಿದೆ. ವಿಜ್ಞಾನಿಗಳ ಪ್ರಕಾರ, ಈ ತಳಿ 50 ವಿಧದ ರೂಪಾಂತರಗಳನ್ನು ಹೊಂದಿದೆ, ಅದರಲ್ಲಿ 30 ಅದರ ಸ್ಪೈಕ್ ಪ್ರೋಟೀನ್ನಲ್ಲಿವೆ. ಇದು ಡೆಲ್ಟಾಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತದೆ.

ಒಂದು ವಾರದಲ್ಲಿ ಹೆಚ್ಚಾಯ್ತು ಶೇ. 200 ರಷ್ಟು ಪ್ರಕರಣ

Omicron ಕಾರಣ, ದಕ್ಷಿಣ ಆಫ್ರಿಕಾದಲ್ಲಿ ಪ್ರಕರಣಗಳು ಒಂದು ವಾರದೊಳಗೆ ಶೇ 200 ರಷ್ಟು ಹೆಚ್ಚಾಗಿವೆ. ಆಫ್ರಿಕಾದ ನಂತರ, ಈ ರೂಪಾಂತರಿಯು ಹಾಂಗ್ ಕಾಂಗ್, ಇಸ್ರೇಲ್, ಬೋಟ್ಸ್ವಾನಾ, ಬೆಲ್ಜಿಯಂಗೆ ಹರಡಿದೆ.

ಲಸಿಕೆ ಎಷ್ಟು ಪರಿಣಾಮಕಾರಿಯಾಗಿರುತ್ತದೆ, ಗೊಂದಲದಲ್ಲಿ ಜಗತ್ತು 

ಪ್ರಪಂಚದ ಎಲ್ಲಾ ಲಸಿಕೆಗಳನ್ನು ಚೀನಾದಲ್ಲಿ ಕಂಡುಬರುವ ಮೂಲ ವೈರಸ್‌ನ ಪ್ರಕಾರ ತಯಾರಿಸಲಾಗುತ್ತಿದೆ. ಆದರೆ ಈ ತಳಿಯು ಆ ಮೂಲ ವೈರಸ್‌ಗಿಂತ ಭಿನ್ನವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಸದ್ಯಕ್ಕೀಗ ನೀಡುತ್ತಿರುವ ಲಸಿಕೆ, ಈಗಿನ ವೈರಸ್ ವಿರುದ್ಧ  ಕಡಿಮೆ ಪರಿಣಾಮಕಾರಿಯಾಗಬಹುದು ಅಂದರೆ ಅವುಗಳ ದಕ್ಷತೆಯು ಕಡಿಮೆಯಾಗಬಹುದು ಎಂಬ ಆತಂಕವಿದೆ. ಆದಾಗ್ಯೂ, ಈ ರೂಪಾಂತರಕ್ಕೂ ಲಸಿಕೆ ಪರಿಣಾಮಕಾರಿ ಎಂದು ಸಂಶೋಧನೆಯಲ್ಲಿ ಹೇಳಲಾಗುತ್ತಿದೆ.

Omicron variant, ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ!

 

ಸೌತ್ ಆಫ್ರಿಕಾದಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರಿ ಕೊರೋನಾ(Coronavirus) ತಳಿ ಓಮಿಕ್ರಾನ್(Omicron variant) ಇದೀಗ ವಿಶ್ವದ ನಿದ್ದೆಗೆಡಿಸಿದೆ. ಅತೀ  ವೇಗದಲ್ಲಿ ಹರಡವು ಸಾಮರ್ಥ್ಯ, ಲಸಿಕೆಗೂ(Vaccine) ಬಗ್ಗದ ಈ ತಳಿ ವಿಶ್ವದಲ್ಲಿ ಮತ್ತೊಂದು ಅಲೆ ಸೃಷ್ಟಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇತ್ತ ಭಾರತದಲ್ಲೂ(India) ಅಲರ್ಟ್ ಘೋಷಿಸಲಾಗಿದೆ. ಒಮಿಕ್ರಾನ್ ಆತಂಕದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅಧ್ಯಕ್ಷತೆಯಲ್ಲಿ ದೇಶದಲ್ಲಿನ ಕೊರೋನಾ ಸ್ಥಿತಿಗತಿ, ಲಸಿಕಾ ಅಭಿಯಾನ ಹಾಗೂ ಹೊಸ ತಳಿ ಕುರಿತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಮಹತ್ವದ ಸಭೆ ನಡೆಸಲಾಗಿದೆ.

ಸಭೆಯ ಆರಂಭದಲ್ಲಿ ಜಾಗತಿಕ ಮಟ್ಟದಲ್ಲಿನ ಕೊರೋನಾ ಪರಿಸ್ಥಿತಿ, ಭಾರತದಲ್ಲಿರುವ ಕೊರೋನಾ  ಸ್ಥಿತಿಗತಿಗಳ ಕುರಿತು ಆರೋಗ್ಯ  ಸಚಿವಾಲಯ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ವಿಶ್ವದಲ್ಲಿ ಹೆಚ್ಚಾಗುತ್ತಿರುವ ಕೊರೋನಾ ವೈರಸ್ ಕುರಿತು ಮಾಹಿತಿ ನೀಡಲಾಯಿತು. ಇದೇ ವೇಳೆ ಮನೆ ಮನೆಗೆ ಲಸಿಕೆ ಅಭಿಯಾನ(Vaccination Drive) ಕುರಿತು ಈವರೆಗಿನ ಪ್ರಗತಿ ಕುರಿತು ಮಾಹಿತಿ ನೀಡಲಾಯಿತು. ಲಸಿಕೆ ಅಭಿಯಾನ ವೇಗ ಹೆಚ್ಚಿಸಲು ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡಲಾಯಿತು. ಈ ವೇಳೆ ಎರಡನೇ ಡೋಸ್ ನೀಡುವಿಕೆ ವೇಗ ಕಡಿಮೆಯಾಗಿದೆ. ಹಲವರು ಮೊದಲ ಡೋಸ್ ಪಡೆದಿದ್ದಾರೆ. ಅವದಿ ಮುಗಿದರೂ ಎರಡನೇ ಡೋಸ್ ಪಡೆದಿಲ್ಲ. ಹೀಗಾಗಿ ಎರಡನೇ ಡೋಸ್ ಕುರಿತು ಹೆಚ್ಚಿನ ಗಮನ ಹರಿಸುವಂತೆ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಲು ಮೋದಿ ನಿರ್ದೇಶನ ನೀಡಿದ್ದಾರೆ.

Follow Us:
Download App:
  • android
  • ios