World Population Day 20024 ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಪಂಚದ ಟಾಪ್ 10 ದೇಶಗಳು

ಅತಿಯಾದ ಜನಸಂಖ್ಯೆ  ಬಡತನ, ಆರ್ಥಿಕ, ಆರೋಗ್ಯ ಹಾಗೂ ಸಾಮಾಜಿಕ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಜನಸಂಖ್ಯೆ ಹೆಚ್ಚಳದಿಂದಾಗುವ ಸಂಕಷ್ಟ ಹಾಗೂ ಅವುಗಳ ಪರಿಹಾರದ ಕುರಿತು ಅಧ್ಯಯನ ನಡೆಸಲಾಗುತ್ತದೆ. ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಟಾಪ್ 10 ದೇಶಗಳ ಪಟ್ಟಿ ಇಲ್ಲಿದೆ. 

Top 10 countries with the largest population mrq

ನವದೆಹಲಿ: ಜನಸಂಖ್ಯೆ ಹೆಚ್ಚಳದಿಂದಾಗುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. 1987ರಲ್ಲಿ ವಿಶ್ವದ ಜನಸಂಖ್ಯೆ 5 ಬಿಲಿಯನ್ ಮೀರಿ ಬೆಳೆದಾಗ ಸಾರ್ವಜನಿಕರಲ್ಲೊ ಜಾಗೃತಿ ತರಲು 1989ರಲ್ಲಿ ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಂ (UNDP) ಈ ದಿನ ಆಚರಣೆಗೆ ಮುಂದಾಯ್ತು. ಈ ದಿನದಂದು ಕುಟುಂಬ ಯೋಜನೆ, ಲಿಂಗ ಸಮಾನತೆ, ಬಡತನ, ತಾಯಿಯ ಆರೋಗ್ಯ ಮತ್ತು ಮಾನವ ಹಕ್ಕುಗಳ ಪ್ರಾಮುಖ್ಯತೆಯ ಬಗ್ಗೆ ತಿಳಿಸುತ್ತದೆ. ಈ ದಿನದಂದು ಸುಸ್ಥಿರ ಅಭಿವೃದ್ಧಿ ಮತ್ತು ವೈಯಕ್ತಿಕ ಯೋಗಕ್ಷೇಮ ಕುರಿತು ಭವಿಷ್ಯದಲ್ಲಿ ತೆಗೆದುಕೊಳ್ಳಬಹುದಾದ ಕಾರ್ಯಕ್ರಮಗಳ ಕುರಿತು ವಿವರವಾಗಿ ಚರ್ಚೆ ಮಾಡಲಾಗುತ್ತದೆ. ಅತಿಯಾದ ಜನಸಂಖ್ಯೆ  ಬಡತನ, ಆರ್ಥಿಕ, ಆರೋಗ್ಯ ಹಾಗೂ ಸಾಮಾಜಿಕ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಜನಸಂಖ್ಯೆ ಹೆಚ್ಚಳದಿಂದಾಗುವ ಸಂಕಷ್ಟ ಹಾಗೂ ಅವುಗಳ ಪರಿಹಾರದ ಕುರಿತು ಅಧ್ಯಯನ ನಡೆಸಲಾಗುತ್ತದೆ. ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಟಾಪ್ 10 ದೇಶಗಳ ಪಟ್ಟಿ ಇಲ್ಲಿದೆ. 

1.ಭಾರತ: ವಿಶ್ವ ಜನಸಂಖ್ಯಾ ವಿಮರ್ಶೆಯ (World Population Review) ಪ್ರಕಾರ, ಜುಲೈ 2024ರ ವೇಳೆಗೆ ಭಾರತ 1,441,719,852 ಜನಸಂಖ್ಯೆಯೊಂದಿಗೆ ಮೊದಲ ಸ್ಥಾನದಲ್ಲಿದೆ. 2022ರಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿ ಮೊದಲ ಸ್ಥಾನದಲ್ಲಿ ಚೀನಾವನ್ನು ಭಾರತ ಹಿಂದಿಕ್ಕಿತ್ತು.

2.ಚೀನಾ: ವಿಶ್ವ ಜನಸಂಖ್ಯಾ ವಿಮರ್ಶೆಯ ಪ್ರಕಾರ ಭಾರತದ ಬಳಿಕ ನೆರೆಯ ಚೀನಾ ಎರಡನೇ ಸ್ಥಾನದಲ್ಲಿದೆ. ಸದ್ಯ ಚೀನಾ 14251,78,782 ಜನಸಂಖ್ಯೆಯನ್ನು ಹೊಂದಿದೆ. 2024ರಿಂದ ಚೀನಾದ ಜನಸಂಖ್ಯೆ ಇಳಿಕೆಯತ್ತ ಸಾಗುತ್ತಿದೆ.

3.ಯುನೈಟೆಡ್ ಸ್ಟೇಟ್ಸ್ : ಯುನೈಟೆಡ್ ಸ್ಟೇಟ್ಸ್ ವಿಶ್ವದ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಪ್ರಸ್ತುತ 34,18,14,420 ಜನಸಂಖ್ಯೆಯನ್ನು ಹೊಂದಿದೆ. 

4.ಇಂಡೋನೇಷ್ಯಾ: ವಿಶ್ವ ಜನಸಂಖ್ಯಾ ವಿಮರ್ಶೆಯ ಪ್ರಕಾರ, ಜುಲೈ 2024ರ ವೇಳೆಗೆ ಇಂಡೋನೇಷ್ಯಾ 27,97,98,049 ಜನಸಂಖ್ಯೆಯನ್ನು ಹೊಂದಿದೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳ ಪೈಕಿ ಇಂಡೋನೇಷ್ತಾ ನಾಲ್ಕನೇ ಸ್ಥಾನದಲ್ಲಿದೆ. 2020ರ ಜನಸಂಖ್ಯೆಯ ಪ್ರಕಾರ, ಈ ದೇಶದ ಶೇ.56ರಷ್ಟು ಜನರು ಜಾವಾ ದ್ವೀಪದಲ್ಲಿಯೇ ವಾಸಿಸುತ್ತಿದ್ದಾರೆ.

5.ಪಾಕಿಸ್ತಾನ: ಜನಸಂಖ್ಯೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶ ಇದಾಗಿದೆ. ಪಾಕಿಸ್ತಾನದ ಕರಾಚಿ ಮತ್ತು ಲಾಹೋರ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಾಗಿವೆ. ಜುಲೈ 2024ರ ಪ್ರಕಾರ, ಪಾಕಿಸ್ತಾನದ ಜನಸಂಖ್ಯೆ 24,52,09,815 ಆಗಿದೆ.

ಕೇರಳದ ಮೊದಲ ಪ್ರಾದೇಶಿಕ ವಿಮಾನಯಾನ ಸಂಸ್ಥೆಗೆ ಗ್ರೀನ್ ಸಿಗ್ನಲ್; ಪ್ರಯಾಣ ದರ ಎಷ್ಟು?

6.ನೈಜೀರಿಯಾ: ಆಫ್ರಿಕಾದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ನೈಜೀರಿಯಾ ಒಂದಾಗಿದ್ದು, 2050ರ ವೇಳೆಗೆ ವಿಶ್ವದ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ 229,152,217 ಜನಸಂಖ್ಯೆಯೊಂದಿಗೆ ಇದು ಆರನೇ ಸ್ಥಾನದಲ್ಲಿದೆ. 

7.ಬ್ರೆಜಿಲ್: ಈ ದೇಶ 21,76,37,297 ಜನಸಂಖ್ಯೆಯನ್ನು ಹೊಂದಿದೆ. ಸಾಓ ಪೌಲ್, ಮಿನಾಸ್ ಗೆರೈಸಾ ಮತ್ತು ರಿಯೋ ಡೆ ಜನಿಯಿರೋ ನಗರಗಳಲ್ಲಿ ಜನಸಂಖ್ಯೆ ಹೆಚ್ಚಿದೆ.

8.ಬಾಂಗ್ಲಾದೇಶ: 174,701,211 ಜನಸಂಖ್ಯೆಯೊಂದಿಗೆ ಬಾಂಗ್ಲಾದೇಶ ಸಹ ಟಾಪ್ 10 ದೇಶಗಳ ಪಟ್ಟಿಯಲ್ಲಿದೆ. ಜನಸಂಖ್ಯೆಯನ್ನು ನಿಯಂತ್ರಣಕ್ಕಾಗಿ ಬಾಂಗ್ಲಾದೇಶ ಸರ್ಕಾರ ಹಲವು ಅಭಿಯಾಗಳನ್ನು ನಡೆಸುತ್ತಿದೆ. 

9.ಇಥಿಯೋಪಿಯಾ: ಶೇ.2.52ರಷ್ಟು ಬೆಳವಣಿಗೆ ದರ ಹೊಂದುವ ಮೂಲಕ ಮೆಕ್ಸಿಕೋ ಹಿಂದಿಕ್ಕಿ ಟಾಪ್ 10 ದೇಶಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಸದ್ಯ ಇಥಿಯೋಪಿಯಾ 12,97,19,719 ಜನಸಂಖ್ಯೆಯನ್ನು ಹೊಂದಿದೆ.

ಮಹಾರಾಷ್ಟ್ರದ ಅಮರಾವತಿ ಪ್ರಾಂತ್ಯದಲ್ಲಿ 6 ತಿಂಗಳಲ್ಲಿ 557 ರೈತರು ಸಾವಿಗೆ ಶರಣು

10.ರಷ್ಯಾ: ಯುರೋಪಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಇದಾಗಿದೆ. ವ್ಯಾಪಕ ಭೂಭಾಗ ಹೊಂದಿರುವ ರಷ್ಯಾದಲ್ಲಿ ಜನಸಂಖ್ಯೆ ಶೇ.0.34ರಷ್ಟು ಇಳಿಕೆಯಾಗಿದೆ. ಸದ್ಯ 14,39,57,079 ಜನಸಂಖ್ಯೆ ಹೊಂದಿದೆ. 2023ರಲ್ಲಿ 14,44,44,359 ಜನಸಂಖ್ಯೆಯನ್ನು ಹೊಂದಿತ್ತು.

Latest Videos
Follow Us:
Download App:
  • android
  • ios