* ಕೌಟುಂಬಿಕ ಕಲಹ, ಮನೆಯವರಿಂದ ದೂರವಿರಲು ಈ ವ್ಯಕ್ತಿಯ ಆಯ್ಕೆ ಏನು ಗೊತ್ತಾ?* ಮನೆಯಲ್ಲಿ ಸ್ವಾತಂತ್ರ್ಯವಿಲ್ಲ ಎಂದವನು ಬಂದಿದ್ದು ವಿಮಾನ ನಿಲ್ದಾಣಕ್ಕೆ* ಮದ್ಯ, ಧೂಮಪಾನ ಬಿಡಲು ಸಾಧ್ಯವಿಲ್ಲ್ವನು 14 ವರ್ಷದಿಂದ ವಿಮಾನ ನಿಲ್ದಾಣದಲ್ಲೇ ವಾಸ

ಬೀಜಿಂಗ್(ಮಾ.29): ನೀವು ಎಂದಾದರೂ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದಿದ್ದರೆ, ವಿಮಾನ ತಡವಾದಾಗ ಕಾಯುತ್ತಿದ್ದರೆ, ಅದು ಎಂತಹ ವಿಭಿನ್ನ ಅನುಭವ ಎಂದು ನಿಮಗೆ ತಿಳಿದಿರುತ್ತದೆ. ಅಲ್ಲಿ ನಿಮಗೆ ಎಲ್ಲಾ ಬಗೆಯ ಜನರು ಕಾಣುತ್ತಾರೆ. ಕೆಲವರು ಸುಮ್ಮನೆ ಕಾಲ ಕಳೆಯುತ್ತಿದ್ದರೆ, ಕೆಲವರು ಶಾಪಿಂಗ್ ಮಾಡುತ್ತಿರುತ್ತಾರೆ, ಕೆಲವರು ತಮ್ಮ ವಿಮಾನಗಳನ್ನು ಹತ್ತಲು ಧಾವಿಸುತ್ತಿರುತ್ತಾರೆ. ಆದರೆ ವಿಮಾನ ನಿಲ್ದಾಣದಲ್ಲಿ ವಾಸಿಸುವುದನ್ನು ನೀವು ಎಂದಾದರೂ ಊಹಿಸಿದ್ದೀರಾ?

ಹೌದು ಸದ್ಯ ಇಂತಹುದ್ದೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಕುಟುಂಬದಿಂದ ತಪ್ಪಿಸಿಕೊಳ್ಳಲು ಬಯಸಿದ ಚೀನಾದ ವ್ಯಕ್ತಿಯೊಬ್ಬರು ಬೀಜಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14 ವರ್ಷಗಳಿಂದ ವಾಸಿಸುತ್ತಿದ್ದಾರೆ.

ಬೀಜಿಂಗ್‌ನ ವೀ ಜಿಯಾಂಗ್ವೊ 2008 ರಲ್ಲಿ ತನ್ನ ಹೆಂಡತಿಯೊಂದಿಗೆ ಜಗಳವಾಡಿದ ನಂತರ ತನ್ನ ಮನೆಯನ್ನು ತೊರೆದಿದ್ದ. ಹೀಗಿರುವಾಗ ಮನೆಯಿಂದ ದೂರವಿರಲು ಆತ ಆಯ್ಕೆ ಮಾಡಿಕೊಂಡಿದ್ದು, ಮೂರು ಟರ್ಮಿನಲ್‌ಗಳನ್ನು ಹೊಂದಿರುವ ಬೀಜಿಂಗ್ ಕ್ಯಾಪಿಟಲ್ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌. ಈತ ಇಲ್ಲೇ 14 ವರ್ಷ ಹಗಲು ರಾತ್ರಿಗಳನ್ನು ಕಳೆದಿದ್ದಾನೆ. ಟರ್ಮಿನಲ್ 2 ಲ್ಲೇ ಈ ದೀರ್ಘ ಸಮಯ ಕಳೆದಿದ್ದಾನೆ.

ನಿರುದ್ಯೋಗಿಯಾಗಿರುವ ವೀ ಜಿಯಾಂಗ್ವೊ ವಿಮಾನ ನಿಲ್ದಾಣದಲ್ಲಿ ವಾಸಿಸೋದು ಅಂದ್ರೆ ಬಹಳ ಇಷ್ಟವಂತೆ. ತನಗಿಷ್ಟ ಬಂದಂತೆ ಇಲ್ಲಿ ತಿನ್ನಬಹುದು, ತಿನ್ನಬಹುದು ಎಂಬುವುದದು ಆತನ ಮಾತಾಗಿದೆ. 

ಅವರು ಚೈನಾ ಡೈಲಿ ಬಳಿ ಮಾತನಾಡಿದ ಅವರು "ನನಗೆ ಅಲ್ಲಿ ಸ್ವಾತಂತ್ರ್ಯವಿಲ್ಲದ ಕಾರಣ ನಾನು ಮನೆಗೆ ಹಿಂತಿರುಗಲು ಸಾಧ್ಯವಿಲ್ಲ. ನಾನು ಮನೆಯಲ್ಲಿರಬೇಕಾದರೆ ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಬೇಕು ಎಂದು ನನ್ನ ಕುಟುಂಬ ನನಗೆ ಹೇಳಿತ್ತು. ಅದನ್ನು ಮಾಡಲು ಸಾಧ್ಯವಾಗದಿದ್ದರೆ, ನಾನು ಅವರಿಗೆ ನನ್ನ ಎಲ್ಲಾ ಮಾಸಿಕ ಸರ್ಕಾರಿ ಭತ್ಯೆ 1,000 ಯುವಾನ್ (AU$200) ನೀಡಬೇಕಾಗಿತ್ತು. ವೇತನ ನೀಡಿದರೆ ನಾನು ನನ್ನ ಸಿಗರೇಟ್ ಮತ್ತು ಮದ್ಯವನ್ನು ಹೇಗೆ ಖರೀದಿಸುವುದು? ಎಂಬುವುದೇ ಸಮಸ್ಯೆಯಾಗಿತ್ತು ಹೀಗಾಗಿ ಆತ ಮನೆಯಿಂದ ಹೊರಹೋಗುವುದನ್ನೇ ಆಯ್ಕೆ ಮಾಡಿಕೊಂಡ.

ಮನೆಯಿಂದ ತಂದಿದ್ದ ಎಲೆಕ್ಟ್ರಿಕ್‌ ಕುಕ್ಕರ್‌ ಬಳಸಿ ಆತ ಅಲ್ಲೊಂದು ಅಡುಗೆ ಮನೆ ಮಾಡಿಕೊಂಡಿದ್ದಾನೆ. ಅಡುಗೆ ಮಾಡುವ ಮನಸ್ಸಿಲ್ಲದಾಗ ಆತ ಇಷ್ಟಪಡುವ ಆಹಾರವನ್ನು ಖರೀದಿಸಲು ಅವರು ವಿಮಾನ ನಿಲ್ದಾಣವನ್ನು ಸುತ್ತುತ್ತಾರೆ.

ಆ ವ್ಯಕ್ತಿ ತನ್ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಹೀಗಿದ್ದರೂ ಪ್ರತಿ ತಿಂಗಳು ಸುಮಾರು 1,000 ಯುವಾನ್ (£ 112) ಸರ್ಕಾರದ ಸಬ್ಸಿಡಿ ಸಿಗುತ್ತದೆ ಎಂದು ಆತ ಹೇಳಿದ್ದಾನೆ.

ಹೀಗೆ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಇಷ್ಟು ದೀರ್ಘ ಸಮಯದಿಂದ ವಾಸಿಸುತ್ತಿರುವುದು ಇದೇ ಮೊದಲಲ್ಲ. ಇರಾನ್‌ನ ಮೆಹ್ರಾನ್ ಕರಿಮಿ ನಸ್ಸೆರಿ ಎಂಬ ನಿರಾಶ್ರಿತರು ಪ್ಯಾರಿಸ್ ಚಾರ್ಲ್ಸ್ ಡಿ ಗೌಲ್‌ನ ಟರ್ಮಿನಲ್ ಒಂದರಲ್ಲಿ 2006 ರಲ್ಲಿ ಆಸ್ಪತ್ರೆಗೆ ದಾಖಲಾಗುವವರೆಗೆ 18 ವರ್ಷಗಳ ಕಾಲ ವಾಸಿಸುತ್ತಿದ್ದರು. ಬ್ರಿಟಿಷ್ ಅಧಿಕಾರಿಗಳು ಅವರನ್ನು ಬ್ರಿಟನ್‌ ತೆರಳಲು ಅನುಮತಿ ನೀಡದ ಅವರು ಅಲ್ಲೇ ವಾಸಿಸಬೇಕಾಯ್ತು. ಅಲ್ಲದೇ ಫ್ರೆಂಚ್ ಆಡಳಿತವೂ ಆಗ ಅವರ ಪ್ರವೇಶವನ್ನು ನಿರಾಕರಿಸಿಯತ್ತು.