ಬೆಂಗಳೂರಿನಲ್ಲಿ ಬೆಳೆದ ರಾಜ್ ಅಮೆರಿಕ ಸೇನೆಯ ಮೊದಲ ಮುಖ್ಯ ಮಾಹಿತಿ ಅಧಿಕಾರಿ!
ತಮಿಳುನಾಡಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದ ಡಾ. ರಾಜ್ ಅಯ್ಯರ್ ಅವರು ಅಮೆರಿಕದ ಸೇನೆಯ ಮೊಟ್ಟಮೊದಲ ಮುಖ್ಯ ಮಾಹಿತಿ ಅಧಿಕಾರಿಯಾಗಿ ನೇಮಕವಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ವಾಷಿಂಗ್ಟನ್(ಜ.08): ತಮಿಳುನಾಡಿನ ತಿರುಚನಾಪಳ್ಳಿ ಮೂಲದ, ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಡಾ.ರಾಜ್ ಅಯ್ಯರ್ ಅವರು ಅಮೆರಿಕದ ಸೇನೆಯ ಮೊಟ್ಟಮೊದಲ ಮುಖ್ಯ ಮಾಹಿತಿ ಅಧಿಕಾರಿಯಾಗಿ ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಮೂಲಕ ಅಮೆರಿಕದ ರಕ್ಷಣಾ ಇಲಾಖೆಯ ಅತ್ಯುನ್ನತ ಹುದ್ದೆ ಪಡೆದ ಮೊದಲ ಭಾರತೀಯ-ಅಮೆರಿಕನ್ ಪ್ರಜೆ ಎಂಬ ಹೆಗ್ಗಳಿಕೆಗೆ ಅಯ್ಯರ್ ಪಾತ್ರರಾಗಿದ್ದಾರೆ. ಕಳೆದ ವರ್ಷ ಅಮೆರಿಕ ಸರ್ಕಾರ ಈ ಹುದ್ದೆ ಸೃಷ್ಟಿಸಿತ್ತು.
41 ಏರ್ಪೋರ್ಟ್‌ಗೆ ಮೊದಲು ಸಾಗಣೆ: ಎಲ್ಲ ರಾಜ್ಯಗಳಿಗೆ ಇಂದೇ ಲಸಿಕೆ?
ಎಲೆಕ್ಟ್ರಿಕ್ ಇಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪಡೆದಿರುವ ಅಯ್ಯರ್ ಅಮೆರಿಕ ಸೇನೆಯ ಕಾರ‍್ಯದರ್ಶಿಗೆ ಮುಖ್ಯ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ. ಮಾಹಿತಿ ನಿರ್ವಹಣೆ/ ಮಾಹಿತಿ ತಂತ್ರಜ್ಞಾನ ಸಂಬಂಧಿತ ವಿಚಾರಗಳಲ್ಲಿ ಕಾರ‍್ಯದರ್ಶಿಯ ಪ್ರತಿನಿಧಿಯಾಗಿ ಕಾರ‍್ಯನಿರ್ವಹಿಸಲಿದ್ದಾರೆ ಎಂದು ಪೆಂಟಗನ್ ಪ್ರಕಟಣೆಯಲ್ಲಿ ತಿಳಿಸಿದೆ.
ಮಿಲಿಟರಿ ನಾಯಕರ ಹತ್ಯೆ ಕೇಸಲ್ಲಿ ಟ್ರಂಪ್ ವಿರುದ್ಧ ಇರಾಕ್ ಬಂಧನ ವಾರೆಂಟ್!
ಬಾಗ್ದಾದ್: ಇರಾನ್‌ನ ಹಿರಿಯ ಮಿಲಿಟರಿ ನಾಯಕ ಖಾಸಿಮ್ ಸೊಲಿಮನಿ ಹಾಗೂ ಇರಾಕ್‌ನ ಪ್ರಜಾಸೇನೆಯ ಪ್ರಭಾವಿ ಮುಖಂಡ ಅಬು ಮೆಹದಿ-ಮುಹಂಡಿಸ್ ಅವರ ಹತ್ಯೆ ಪ್ರಕರಣ ಸಂಬಂಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇರಾನ್‌ನ ನ್ಯಾಯಾಲಯವೊಂದು ಬಂಧನದ ವಾರಂಟ್ ಹೊರಡಿಸಿದೆ.
ಕಳೆದ ವರ್ಷದ ಜನವರಿಯಲ್ಲಿ ಅಮೆರಿಕ ಸೇನೆಯ ನಿರ್ದೇಶನದ ಮೇರೆಗೆ ನಡೆದ ದಾಳಿಯಲ್ಲಿ ಜನರಲ್ ಖಾಸಿಂ ಸೊಲಿಮನಿ ಹಾಗೂ ಅಬು ಮೆಹದಿ ಅಲ್-ಮುಹಂಡಿಸ್ ಅವರು ಹತ್ಯೆಯಾಗಿದ್ದರು. ಈ ಪ್ರಕರಣ ಸಂಬಂಧ ಇರಾಕ್ ನ್ಯಾಯಾಂಗ ವ್ಯವಸ್ಥೆ ಟ್ರಂಪ್ ಅವರಿಗೆ ಬಂಧನದ ವಾರಂಟ್ ಜಾರಿ ಮಾಡಿದೆ. ಒಂದು ವೇಳೆ ಈ ಪ್ರಕರಣದಲ್ಲಿ ಟ್ರಂಪ್ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಮರಣದಂಡನೆ ವಿಧಿಸಬಹುದಾಗಿದೆ.