41 ಏರ್ಪೋರ್ಟ್‌ಗೆ ಮೊದಲು ಸಾಗಣೆ: ಎಲ್ಲ ರಾಜ್ಯಗಳಿಗೆ ಇಂದೇ ಲಸಿಕೆ?

ಲಸಿಕೆ ಪಡೆಯಲು ಸಜ್ಜಾಗಿರಿ: ಕೇಂದ್ರ ಪತ್ರ | ಲಸಿಕೆ ಹಂಚಿಕೆಗೆ ಪುಣೆಯೇ ಕೇಂದ್ರ ಸ್ಥಾನ | 41 ಏರ್‌ಪೋರ್‌್ಟಗಳಿಗೆ ಮೊದಲು ಸಾಗಣೆ | ದೇಶಾದ್ಯಂತ ಇಂದು ಬೃಹತ್‌ ತಾಲೀಮು

Nationwide second Covid vaccination dry run today: All you need to know dpl

ನವದೆಹಲಿ(ಜ.08): ದೇಶದಲ್ಲಿ ಸಂಕ್ರಾಂತಿ ವೇಳೆಗೆ ಕೊರೋನಾ ಲಸಿಕೆ ವಿತರಣೆ ಪ್ರಾರಂಭವಾಗಬಹುದು ಎಂಬ ನಿರೀಕ್ಷೆಗಳ ಸಂದರ್ಭದಲ್ಲೇ, ಸದ್ಯದಲ್ಲೇ ಕೊರೋನಾ ಲಸಿಕೆಯ ಮೊದಲ ಸರಕನ್ನು ಕಳುಹಿಸುತ್ತೇವೆ. ಅದನ್ನು ಪಡೆಯಲು ಸಜ್ಜಾಗಿರಿ ಎಂದು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ. ಮೂಲಗಳ ಪ್ರಕಾರ ಇಂಥದ್ದೊಂದು ರವಾನೆ ಪ್ರಕ್ರಿಯೆ ಶುಕ್ರವಾರದಿಂದಲೇ ಆರಂಭವಾಗುವ ಸಾಧ್ಯತೆ ಇದೆ.

ಈಗಾಗಲೇ ಕೋವಿಶೀಲ್ಡ್‌ ಲಸಿಕೆ ಉತ್ಪಾದಿಸಿ ಸಂಗ್ರಹ ಮಾಡಿಟ್ಟಿರುವ ಸೀರಂ ಇನ್‌ಸ್ಟಿಟ್ಯೂಟ್‌ ಇರುವ ಪುಣೆಯನ್ನು ಲಸಿಕೆ ಹಂಚಿಕೆಯ ಮುಖ್ಯ ಕೇಂದ್ರವಾಗಿ ಗುರುತಿಸಲಾಗಿದೆ. ಅಲ್ಲಿಂದ ನಾಗರಿಕ ಮತ್ತು ವಾಯುಪಡೆ ವಿಮಾನಗಳ ಮೂಲಕ ದೇಶದ ಇತರೆಡೆ ಇರುವ 41 ವಿಮಾನ ನಿಲ್ದಾಣಗಳಿಗೆ ತಲುಪಿಸಲಾಗುವುದು.

ಪೆಟ್ರೋಲ್‌ ದರ ಈಗ ಸಾರ್ವಕಾಲಿಕ ಗರಿಷ್ಠ..!

ಉತ್ತರದ ಭಾಗಗಳಿಗೆ ದೆಹಲಿ ಮತ್ತು ಕರ್ನಲ್‌, ದಕ್ಷಿಣದ ರಾಜ್ಯಗಳಿಗೆ ಹೈದ್ರಾಬಾದ್‌ ಮತ್ತು ಚೆನ್ನೈ, ಪೂರ್ವದ ಭಾಗಗಳಿಗೆ ಕೋಲ್ಕತಾ ಮತ್ತು ಗುವಾಹಟಿ ಉಪ ಲಸಿಕೆ ವಿತರಣಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ.

ರಾಜ್ಯಗಳಿಗೆ ಪತ್ರ:

ಕರ್ನಾಟಕ, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ದೆಹಲಿ, ಗುಜರಾತ್‌, ಹರಾರ‍ಯಣ, ಜಾರ್ಖಂಡ್‌, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್‌, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ ಹಾಗೂ ಪಶ್ಚಿಮಬಂಗಾಳ ಸೇರಿದಂತೆ 19 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಗುರುತಿಸಲಾದ ಸ್ಥಳಗಳಲ್ಲಿ ಲಸಿಕೆಯನ್ನು ಸರಬರಾಜುದಾರರೇ ಪೂರೈಸಲಿದ್ದಾರೆ.

ಉಳಿಕೆ 18 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆಯಾ ಸರ್ಕಾರಿ ವೈದ್ಯಕೀಯ ಡಿಪೋದಿಂದ ಲಸಿಕೆ ಪೂರೈಕೆಯಾಗಲಿದೆ. ಒಟ್ಟಿನಲ್ಲಿ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮೊದಲ ಸುತ್ತಿನ ಪೂರೈಕೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಜ.5ರಂದು ಕೇಂದ್ರ ಆರೋಗ್ಯ ಸಚಿವಾಲಯ ಪತ್ರ ರವಾನಿಸಿದೆ.

Latest Videos
Follow Us:
Download App:
  • android
  • ios