ಟಿಪ್ಪು ರತ್ನ, ಖಡ್ಗ ಅಂತೂ ಇಂತು ಮಾರಾಟವಾಯ್ತು. ನಿರೀಕ್ಷೆಯ 20 ಕೋಟಿ ರು.ಗಿಂತ ಭಾರೀ ಕಡಿಮೆ ಬೆಲೆಗೆ ಮಾರಾಟ ಬ್ರಿಟನ್‌ನಲ್ಲಿ ನಡೆದ ಹರಾಜಿನಲ್ಲಿ ಅನಾಮಿಕ ವ್ಯಕ್ತಿಯಿಂದ ಖರೀದಿ.

ಲಂಡನ್‌ (ಅ.28): ಸ್ಥಳೀಯ ಕ್ರಿಸ್ಟೀಸ್‌ ಸಂಸ್ಥೆ ನಡೆಸಿದ ಹರಾಜಿನಲ್ಲಿ ‘ಮೈಸೂರು ಹುಲಿ’ ಟಿಪ್ಪುಸುಲ್ತಾನ್‌ಗೆ ಸೇರಿದ್ದ ರತ್ನಗಳು ಮತ್ತು ಸುಂದರವಾದ ಖಡ್ಗವೊಂದು 1 ಕೋಟಿ ರು.ಗೆ ಮಾರಾಟವಾಗಿದೆ.

ಈ ಎರಡೂ ವಸ್ತುಗಳು ಸೇರಿ 15ರಿಂದ 20 ಕೋಟಿ ರು.ಗೆ ಮಾರಾಟವಾಗಬಹುದು ಎಂಬ ನಿರೀಕ್ಷೆ ಇತ್ತಾದರೂ, ನಿರೀಕ್ಷೆಗೆ ತಕ್ಕ ದರದಲ್ಲಿ ಎರಡೂ ವಸ್ತುಗಳು ಮಾರಾಟವಾಗಿಲ್ಲ. ಈ ಎರಡೂ ವಸ್ತುಗಳನ್ನು ಖರೀದಿ ಮಾಡಿದವರ ಹೆಸರನ್ನು ಹರಾಜು ಪ್ರಕ್ರಿಯೆ ನಡೆಸಿದ ಕ್ರಿಸ್ಟೀಸ್‌ ಸಂಸ್ಥೆ ಬಹಿರಂಗಪಡಿಸಿಲ್ಲ.

ಪಿತೂರಿಯಿಂದ ವರ್ತೂರು ಬಂಧನ, ಅರಣ್ಯ ಇಲಾಖೆ ಎಡವಟ್ಟು ಎಳೆಎಳೆಯಾಗಿ ಬಿಚ್ಚಿಟ್ಟ ಸಂತೋಷ್‌ ಪರ ವಕೀಲ

ಆಂಗ್ಲೋ- ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನಿಗೆ ಸೋಲಾದ ಬಳಿಕ ಈ ವಸ್ತುಗಳು ಭಾರತವನ್ನು ಆಳುತ್ತಿದ್ದ ಬ್ರಿಟಿಷರ ಪಾಲಾಗಿದ್ದವು. ಬಳಿಕ ಇವು ಕ್ರಿಸ್ಟೀನ್‌ ಹರಾಜು ಸಂಸ್ಥೆಯ ಪಾಲಾಗಿದ್ದವು.

ಟಿಪ್ಪು ಹುಲಿ ಕೊಲ್ಲುವ ಫೋಟೋ ನಿಷೇಧಕ್ಕೆ ನೆಟ್ಟಿಗರ ಆಗ್ರಹ
ಹುಲಿ ಉಗುರಿನ ಆಭರಣ ಹೊಂದಿರುವ ಪ್ರಕರಣ ಹೆಚ್ಚುತ್ತಿರುವ ಬೆನ್ನಲ್ಲೇ ಟಿಪ್ಪು ಸುಲ್ತಾನ್‌ ಹುಲಿ ಜತೆಗೆ ಘರ್ಷಣೆಗಿಳಿದ ಫೋಟೋ ವೈರಲ್‌ ಆಗುತ್ತಿದ್ದು, ಅದನ್ನು ನಿಷೇಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಲಾಗುತ್ತಿದೆ.

ನಿಮ್ಮ ಮನೆಯಲ್ಲಿ ವನ್ಯಜೀವಿ ವಸ್ತುಗಳಿದ್ದರೆ ಇಲಾಖೆಗೆ ಮರಳಿಸಲು 2 ತಿಂಗಳ ಕಾಲಾವಕಾಶ

ಹುಲಿ ಉಗುರಿನ ಆಭರಣ ಹೊಂದಿರುವುದಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಟರ ವಿರುದ್ಧ ದೂರುಗಳು ದಾಖಲಾಗುತ್ತಿವೆ. ಅದರ ಬೆನ್ನಲ್ಲೇ ಇದೀಗ ಟಿಪ್ಪು ಸುಲ್ತಾನ್‌ ಹುಲಿ ಜತೆಗೆ ಘರ್ಷಣೆಗಿಳಿದ ಫೋಟೋವನ್ನು ನಿಷೇಧಿಸುವ ಆಗ್ರಹ ಕೇಳಿಬರುತ್ತಿದೆ. ಟಿಪ್ಪು ಸುಲ್ತಾನ್‌ ಹುಲಿಯನ್ನು ಕೊಲ್ಲುವ ಫೋಟೋದಿಂದ ಹುಲಿ ಕೊಲ್ಲಲು ಜನರಿಗೆ ಉತ್ತೇಜನ ನೀಡಿದಂತಾಗುತ್ತದೆ. ಹೀಗಾಗಿ ಅದನ್ನು ನಿಷೇಧಿಸಬೇಕು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ.